Shivarajkumar: ನನ್ನ ಹೊಸ ಗೆಟಪ್ ನೋಡೋಕೆ ನಮ್ಮ ತಾಯಿ ಇರಬೇಕಿತ್ತು…
Team Udayavani, Oct 18, 2023, 5:25 PM IST
ನಟ ಶಿವರಾಜಕುಮಾರ್ ಅಭಿನಯದ “ಘೋಸ್ಟ್’ ಸಿನಿಮಾ ಇದೇ ಅ. 19ರಂದು ಬಿಡುಗಡೆ ಯಾಗಿ ತೆರೆಗೆ ಬರುತ್ತಿದೆ. ಇನ್ನು “ಘೋಸ್ಟ್’ ಸಿನಿಮಾದ ಟ್ರೇಲರ್ನಲ್ಲಿ ಶಿವರಾಜ ಕುಮಾರ್ ಅವರ ಯಂಗ್ ಗೆಟಪ್ ನೋಡುಗರ ಗಮನ ಸೆಳೆಯುತ್ತಿದ್ದು, ಟ್ರೇಲರ್ ನೋಡಿದ ಬಳಿಕ ಎಲ್ಲರೂ “ಆನಂದ್’ ಸಿನಿಮಾದ ಗೆಟಪ್ ನೆನಪಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಬಿಡುಗಡೆಗೂ ಮುನ್ನ ತಮ್ಮ ನಿವಾಸದಲ್ಲಿ ಈ ಬಗ್ಗೆ ಮಾತನಾಡುವಾಗ ಶಿವಣ್ಣ ತಮ್ಮ ತಾಯಿ ಪಾರ್ವತಮ್ಮ ರಾಜಕುಮಾರ್ ಅವರನ್ನು ನೆನಪಿಸಿಕೊಂಡು ಕೊಂಚ ಭಾವರಾದರು.
“ಮೊದಲಿಗೆ ನಿರ್ದೇಶಕ ಶ್ರೀನಿ ಈ ಗೆಟಪ್ನ ಸ್ಯಾಂಪಲ್ ಮಾತ್ರ ಕಳಿಸಿದ್ದರು. ಆ ನಂತರ ನಾನು ನೋಡಿದ್ದು ಕೂಡ ನಿಮ್ಮ ಜೊತೆ. ಈಗ ನೋಡಿದಾಗ ಚೆನ್ನಾಗಿದೆ ಎನಿಸಿತು, ಅಷ್ಟೇ ಅಲ್ಲ ಅಚ್ಚರಿ ಕೂಡ ಆಯಿತು. ನಾನೇ 1987ರ ಕಾಲಕ್ಕೆ ತೆರಳಿದಂತೆ ಭಾಸವಾಯ್ತು. ಆದರೆ ಇದನ್ನು ನೋಡೋಕೆ ನಮ್ಮ ತಾಯಿ ಇಲ್ಲ ಅಂತ ದುಃಖ ಆಯಿತು. ಯಾಕೆಂದರೆ “ಆನಂದ್’ ಸಿನಿಮಾ ಶುರು ಮಾಡಿದ್ದು ಅವರೇ ತಾನೆ’ ಎಂದು ಶಿವರಾಜಕುಮಾರ್ ಹೇಳಿದ್ದಾರೆ.
“ಟ್ರೇಲರಿನಲ್ಲಿ ನನ್ನ ಯಂಗ್ ಗೆಟಪ್ಗೆ ಜನರಿಂದ ಭರ್ಜರಿ ಮೆಚ್ಚುಗೆ ಕೇಳಿಬಂದಿರುವುದಕ್ಕೆ ತುಂಬ ಖುಷಿಯಾಗುತ್ತಿದೆ. ಈ ರೀತಿ ಕಾಣುವಂತೆ ಪ್ರಯತ್ನಿಸಿದ ನಿರ್ದೇಶಕ ಶ್ರೀನಿ ಮತ್ತು ತಂಡ ಪ್ರಯತ್ನವನ್ನು ನಾವೆಲ್ಲರೂ ಮೆಚ್ಚಲೇ ಬೇಕು. ಇದನ್ನೆಲ್ಲ ನೋಡಲು ತಾಯಿ ಇರಬೇಕಾಗಿತ್ತು’ ಎಂದರು ಶಿವಣ್ಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.