Bagalkot: ರೈತರ ಬದುಕಿನೊಂದಿಗೆ ಕಾಂಗ್ರೆಸ್ ಚೆಲ್ಲಾಟ
ರೈತಾಪಿ ವರ್ಗಕ್ಕೆ 8 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕು
Team Udayavani, Oct 18, 2023, 2:15 PM IST
ಬೀಳಗಿ: ಜನವಿರೋಧಿ, ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಕೂಡಲೇ ಎಚ್ಚೆತ್ತುಕೊಂಡು ಸಮರ್ಪಕವಾದ ತ್ರಿಫೇಸ್ ವಿದ್ಯುತ್ ಹಗಲು ಹೊತ್ತಿನಲ್ಲಿಯೇ ಪೂರೈಸಬೇಕೆಂದು ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಆಗ್ರಹಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜನತೆಗೆ ನೀಡಿರುವ ಗ್ಯಾರಂಟಿ ಭಾಗ್ಯಗಳಲ್ಲಿ ಭ್ರಷ್ಟಾಚಾರ, ರೈತರ ವ್ಯವಸಾಯಕ್ಕೆ ವಿದ್ಯುತ್
ಪೂರೈಸದಿರುವುದು ಹಾಗೂ ಕಾಂಗ್ರೆಸ್ಸಿನ ಕಾರ್ಪೋರೇಟರ್ ಮನೆಯಲ್ಲಿ ದೊರೆತಿರುವ ನಗದು ಭ್ರಷ್ಟಾಚಾರದ ಹಣವಾಗಿದೆ ಎಂದು ಆರೋಪಿಸಿದರು.
ಹಿಂದಿನ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಅವಧಿಯಲ್ಲಿನ ಕಾಮಗಾರಿ ಸ್ಥಗಿತಗೊಳಿಸಿರುವ ಈಗಿನ ಶಾಸಕರು ಅಧಿ ಕಾರಕ್ಕೆ ಬಂದು 165 ದಿನಗಳು ಗತಿಸಿದ್ದು, ಈ ಅವಧಿಯಲ್ಲಿ ಎಷ್ಟು ಅನುದಾನ ತಂದಿದ್ದಿರಿ ಎಂಬ ಮಾಹಿತಿಯನ್ನು ಕ್ಷೇತ್ರದ ಜನರಿಗೆ ತಿಳಿಸಬೇಕೆಂದು ಛಾಟಿ ಬೀಸಿದರು. ರಾಜ್ಯದಲ್ಲಿ ಸಿಎಂ ಮತ್ತು ಡಿಸಿಎಂ ನಡುವೆ ಹೊಂದಾಣಿಕೆ ಇಲ್ಲ. ಸಮನ್ವಯದ ಕೊರತೆ ಇರುವುದರಿಂದ ಅರಾಜಕತೆ ತಾಂಡವವಾಡುತ್ತಿದೆ. 5 ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಗೆ ಹಣ ರವಾನಿಸಲು ಗುತ್ತಿಗೆದಾರರ ಮೂಲಕ ಹಣ ಸಂಗ್ರಹ ಕಾರ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೊಡಗಿದೆ ಎಂದು ಆರೋಪಿಸಿದರು.
ಬಿಜೆಪಿ ತಾಲೂಕಾಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ ಮಾತನಾಡಿದರು. ಹಿರಿಯ ಮುಖಂಡರಾದ ಶಿವಾನಂದ ನಿಂಗನೂರ, ಕೃಷ್ಣಗೌಡ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಹೊಳಬಸು ಬಾಳಶೆಟ್ಟಿ, ಎಂ.ಬಿ. ಭೂಸರಡ್ಡಿ ವಕೀಲರು ಮಾತನಾಡಿ, ಜನರಿಗೆ ಮೋಸ ಮಾಡಿ ಸರ್ಕಾರ ನಡೆಸುವ ಸರ್ಕಾರ ಇದಾಗಿದೆ.
ಬಿಟ್ಟಿ ಭಾಗ್ಯಗಳಿಂದ ಲೂಟಿ ಮಾಡಿದ ಸರ್ಕಾರ ಗುತ್ತಿಗೆದಾರರಿಂದ ಚಂದಾ ವಸೂಲಿ ಮಾಡಿ ಪಂಚರಾಜ್ಯಗಳ ಚುನಾವಣೆಗೆ ಫಂಡ್ ಕಳುಹಿಸುವ ಕೆಲಸದಲ್ಲಿ ತೊಡಗಿದೆ. ಇಂತಹ ಸರ್ಕಾರವನ್ನು ರಾಜ್ಯದಿಂದ ತೊಲಗಿಸುವವರೆಗೆ ಹೋರಾಟ ಮಾಡಲಾಗುತ್ತದೆ ಎಂದರು. ರೈತರಿಗೆ ಅನ್ಯಾಯ ಮಾಡಿದರೆ, ಹೆತ್ತ ತಾಯಿಗೆ ಅನ್ಯಾಯ ಮಾಡಿದಂತೆ. ಬೇರೆ ರಾಜ್ಯಗಳಿಂದಾದರೂ ವಿದ್ಯುತ್ ಖರೀದಿಸಿ ರೈತಾಪಿ ವರ್ಗಕ್ಕೆ 8 ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಬಿಜೆಪಿ ಪ್ರತಿಭಟನೆ ಆರಂಭಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರಲ್ಲದೇ, ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟಿಸಿ ತಹಶೀಲ್ದಾರ್ ಸುಹಾಸ ಇಂಗಳೆ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಂದರ್ಭದಲ್ಲಿ ವಿ.ಜಿ. ರೇವಡಿಗಾರ, ಲಕ್ಷ್ಮಣ ದೊಡಮನಿ, ಎಸ್. ಜಿ. ಗೋಳಿಪಲ್ಲೆ, ಸಿದ್ದಪ್ಪ ಕಡಪಟ್ಟಿ, ನಿಂಗಪ್ಪ ದಂಧರಗಿ, ಮುತ್ತು ಬೋರ್ಜಿ, ಹುಚ್ಚಪ್ಪ ಕೌಲಗಿ, ಕಾಮೇಶ ದಂಧರಗಿ, ಜಗದೀಶ ಶಿರಾಳಶೆಟ್ಟಿ, ಮುದಕಣ್ಣ ಕಣ್ಣಿ, ಬಸವಂತಪ್ಪ ಸಂಕಾನಟ್ಟಿ, ವಿರಣ್ಣ ತೋಟದ, ಸತೀಶ ಅಂಗಡಿ, ಮಹಾದೇವಿ ಮೈಸೂರ, ದಾಕ್ಷಾಯಣಿ ಜಂಬಗಿ, ಸುನಂದಾ ಬ್ಯಾಳಿ, ಎಫ್.ಆರ್. ಬಿಸನಾಳ, ಡಿ.ಬಿ. ವಾಲೀಕಾರ, ಬಸು ಕೆರಕಲಮಟ್ಟಿ, ಹಂಪಣ್ಣ ಅಂಗಡಿ, ತಿಪ್ಪಣ್ಣ ಸಂಜೀವಪ್ಪಗೋಳ, ಮಹಮ್ಮದ ಬಾಗವಾನ ಮತ್ತಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.