Islamic Jihad: ಹಮಾಸ್ ಜತೆಗೆ ಇದೆ ಇಸ್ಲಾಮಿಕ್ ಜಿಹಾದ್
Team Udayavani, Oct 18, 2023, 8:20 PM IST
ಗಾಜಾ ಪಟ್ಟಿಯ ಆಸ್ಪತ್ರೆ ಮೇಲೆ ಮಂಗಳವಾರ ರಾಕೆಟ್ ದಾಳಿಯಾಗಿ 500 ಮಂದಿ ರೋಗಿಗಳು ಮೃತಪಟ್ಟರು. ಇದನ್ನು ಇಸ್ರೇಲ್ ನಡೆಸಿದೆ ಎಂದು ಹಮಾಸ್ ಆರೋಪಿಸಿದೆ. ಆದರೆ, ಉಗ್ರ ಸಂಘಟನೆ “ಇಸ್ಲಾಮಿಕ್ ಜಿಹಾದ್’ ಸಿಡಿಸಿದ ರಾಕೆಟ್ ಗುರಿ ತಪ್ಪಿ ಆಸ್ಪತ್ರೆಯನ್ನು ಹಾನಿಗೊಳಿಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಹೊಸ ಸಂಘಟನೆಯ ಬಗ್ಗೆ ಮಾಹಿತಿ ಇಲ್ಲಿದೆ:
ಸ್ವಾತಂತ್ರ್ಯ ಪ್ಯಾಲೇಸ್ತೀನ್‌ಗಾಗಿ ಹೋರಾಟ:
ಇಸ್ಲಾಮಿಕ್ ಜಿಹಾದ್ ಅನ್ನು ಅಧಿಕೃತವಾಗಿ ಪ್ಯಾಲೇಸ್ತೀನ್ ಇಸ್ಲಾಮಿಕ್ ಜಿಹಾದ್(ಪಿಐಜೆ) ಎಂದು ಕರೆಯಲಾಗುತ್ತದೆ. ಸುನ್ನಿ ಇಸ್ಲಾಮಿಸ್ಟ್ ಉಗ್ರ ಸಂಘಟನೆಯಾಗಿರುವ ಇದು, ಸ್ವಾತಂತ್ರ್ಯ ಪ್ಯಾಲೇಸ್ತೀನ್ ಸ್ಥಾಪನೆಗಾಗಿ ಹೋರಾಟ ನಡೆಸುತ್ತಿದೆ. 1970ರಲ್ಲಿ ಇದರ ಸ್ಥಾಪನೆಯಾಯಿತು.
ವಿವಿಧ ದಾಳಿಗಳಲ್ಲಿ ಭಾಗಿ
ಇಸ್ಲಾಮಿಕ್ ಜಿಹಾದ್ ಸಂಘಟನೆಯ ನಾಯಕತ್ವವನ್ನು ಜಿಯಾದ್ ಅಲ್-ನಖಲಾ ಮತ್ತು ಮಹಮ್ಮದ್ ಅಲ್-ಹಿಂದಿ ವಹಿಸಿದ್ದಾರೆ. ಹಮಾಸ್ ನಂತರ ಪ್ಯಾಲೇಸ್ತೀನ್‌ನ ಎರಡನೇ ಅತಿ ದೊಡ್ಡ ಉಗ್ರ ಸಂಘಟನೆಯಾಗಿದೆ. ಗಾಜಾ ಪಟ್ಟಿ ಮತ್ತು ಪ್ಯಾಲೇಸ್ತೀನ್‌ನ ಪಶ್ಚಿಮ ದಂಡೆಯಲ್ಲಿ ಇದರ ಅಸ್ತಿತ್ವವಿದೆ. 1990ರಿಂದ ಇಲ್ಲಿಯವರೆಗೆ ಇಸ್ರೇಲ್ ಮೇಲೆ ಹಲವು ದಾಳಿಗಳನ್ನು ಇಸ್ಲಾಮಿಕ್ ಜಿಹಾದ್ ನಡೆಸಿದೆ.
ಅಮೆರಿಕದಿಂದ ನಿಷೇಧ
ವರ್ಷಗಳು ಕಳೆಯುತ್ತಾ ಹಮಾಸ್ ರಾಜಕೀಯವಾಗಿ ಕೂಡ ಬಲಾಡ್ಯವಾಯಿತು ಹಾಗೂ 2006ರಲ್ಲಿ ಗಾಜಾ ಚುನಾವಣೆಯಲ್ಲಿ ಜಯಗಳಿಸಿತು. ಆದರೆ ಇಸ್ಲಾಮಿಕ್ ಜಿಹಾದ್ ಶಸ್ತ್ರಾಸ್ತ್ರ ದಾಳಿಗಳನ್ನು ಮುಖ್ಯ ಗುರಿಯಾಗಿಸಿಕೊಂಡಿದೆ. 1997ರಲ್ಲಿ ಇಸ್ಲಾಮಿಕ್ ಜಿಹಾದಿ ಸಂಘಟನೆಯನ್ನು ವಿದೇಶಿ ಉಗ್ರ ಸಂಘಟನೆ ಎಂದು ಘೋಷಿಸಿದ ಅಮೆರಿಕ, ಅದನ್ನು ನಿಷೇಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.