ಇಂದು ಲಲಿತಾ ಪಂಚಮಿ- ದುರ್ಗಾರಾಧನೆಯಿಂದ ಉಗ್ರ ನಿಗ್ರಹ


Team Udayavani, Oct 18, 2023, 11:58 PM IST

LALITA PANCHAMI

ಇತ್ಥಂ ಯದಾ ಯದಾ ಬಾಧಾ ದಾನವೋತ್ಥಾ ಭವಿಷ್ಯತಿ|
ತದಾ ತದಾ ಅವತೀರ್ಯಾಹಂ ಕರಿಷ್ಯಾಮ್ಯರಿ ಸಂಕ್ಷಯಮ್‌||

ಇದು ಶ್ರೀ ದುರ್ಗಾ ಸಪ್ತಶತೀಯ ಹನ್ನೊಂದನೇ ಅಧ್ಯಾಯದ ನಾರಾಯಣಿ ಸ್ತುತಿಯ ಕೊನೆಯ ಸಾಲು. ಶ್ರೀ ದೇವಿಯು ದೇವತೆಗಳಿಗೆ ನೀಡಿದ ಭರವಸೆಯ ವರದಾನ. “ಯಾವ ಕಾಲದಲ್ಲಿ ದುಷ್ಟರಿಂದ ಪೀಡೆಯುಂಟಾ ಗುವುದೋ ಆ ಸಂದರ್ಭದಲ್ಲಿ ನಾನು ಅವತರಿಸಿ ಶತ್ರುನಾಶ ಮಾಡುವೆನು’ ಅದ್ಭುತ ಅಭಯವಾಕ್ಯ. ನಿರ್ಭಯದ ಆಶ್ವಾಸನೆ. ಇದು ಶರನ್ನವರಾತ್ರಿಯ ಈ ಪರ್ವಕಾಲದಲ್ಲಿ ಸ್ಮರಿಸಲೇಬೇಕಾದ ಮಹತ್ತರವಾದ ಸ್ತುತಿ.

ಇಂದಿನ ನಿರ್ಣಾಯಕವಾದ ಕಾಲಘಟ್ಟದಲ್ಲಿ ದೇವರ ಹೊರತು ಅನ್ಯರಾರೂ ಈ ವಿಶ್ವವನ್ನು ರಕ್ಷಿಸಲು ಅಸಾಧ್ಯ. ಏಕೆಂದರೆ ಉಗ್ರವಾದ ಮತ್ತು ಭಯೋತ್ಪಾದನೆ ಎಂಬ ಸಾಮಾಜಿಕ ಪಿಡುಗು ಅನಿಯಂತ್ರಿತವಾಗಿ ವಿಶ್ವವ್ಯಾಪಿಯಾಗಿದೆ. ಹಿಂಸೆ, ಕ್ರೌರ್ಯ, ಅತ್ಯಾಚಾರ, ಅನಾಚಾರ, ದ್ವೇಷ ಇತ್ಯಾದಿ ನಕಾರಾತ್ಮಕ ವಿಕೃತಿಗಳು ಮಾನವೀಯ ಮೌಲ್ಯಗಳಿಗೆಲ್ಲ ಸವಾಲೆಸೆದು ವಿಕಟಾಟ್ಟಹಾಸದಿಂದ ನರ್ತಿಸುತ್ತಿವೆ. ಮಹಾ ತಣ್ತೀಜ್ಞಾನಿ ಸಾಕ್ರೆಟೀಸ್‌ ನೂರಾರು ವರ್ಷಗಳ ಹಿಂದೆ ನುಡಿದ ಒಂದು ವಾಕ್ಯ ನೆನಪಾಗುತ್ತದೆ. “ಒಳಿತಿಗಿಂತ ಕೆಡುಕುಗಳೇ ಯಾವತ್ತೂ ಅಧಿಕವಾಗಿ ವಿಜೃಂಭಿಸುತ್ತವೆ. ಆದರೆ ಅಂತಿಮ ವಿಜಯ ಮಾತ್ರ ಒಳಿತಿನದೇ’. ಈ ಸಿದ್ಧಾಂತದ ಮೇಲಿನ ನಂಬಿಕೆಯಿಂದ ಸಮಾಧಾನ ಪಡಬೇಕಷ್ಟೇ!

ಸಾವರ್ಣಿಕಾ ಮನ್ವಂತರದಲ್ಲಿನ ದೇವಿಯ ನುಡಿ ಮತ್ತು ದ್ವಾಪರಯುಗದ ಶ್ರೀಕೃಷ್ಣನ ಗೀತಾ ವಾಕ್ಯಗಳು ನಮಗೆ ನೀಡುವ ಸಂದೇಶ ಒಂದೇ. ನಿರ್ಭಯರಾಗಿರಿ. ದೇವರ ಮೊರೆ ಹೋಗಿರಿ!
ಪುರಾಣಗಳನ್ನು ಅಧ್ಯಯನ ಮಾಡುವಾಗ ಮುಖ್ಯವಾಗಿ ಗೋಚರಿಸುವುದು ದೇವ ಮತ್ತು ದಾನವರ ನಡುವಿನ ಯುದ್ಧ- ಕಲಹಗಳು. ದೈತ್ಯರಿಂದ ಉಂಟಾದ ಗ್ಲಾನಿ-ಕ್ಷೋಭೆ, ಉಗ್ರತ್ವ, ಭಯೋತ್ಪಾದನೆಗಳಿಂದ ಮಾನವರನ್ನು ಪಾರು ಮಾಡಲು ಭಗ ವಂತ ಧರೆಗಿಳಿಯುತ್ತಾನೆ ಎಂಬ ತಣ್ತೀ. ಹಾಗಾದರೆ ಸತ್ಯ, ಕೃತ, ತ್ರೇತಾ, ದ್ವಾಪರಾ ಈ ನಾಲ್ಕೂ ಯುಗದಲ್ಲೂ ಸ್ಯಾಡಿಸಂ ಅಥವಾ ನಕಾರಾತ್ಮಕ ದುರ್ಗುಣಗಳೇ ಅಧಿಕವಾಗಿದ್ದವೇನೋ ಎಂಬ ಸಂದೇಹ ಒಡಮೂಡುತ್ತದೆ. ಈ ಜಿಜ್ಞಾಸೆಗೆ ಹೌದು ಎನ್ನುವಂತಹ ಉತ್ತರವು ದೊರಕುವುದು ಶರನ್ನವರಾತ್ರಿಯ ಪರ್ವಕಾಲದಲ್ಲಿ ನಾವು ನಿತ್ಯ ಆಲಿಸುವ – ನೆರವೇರಿಸುವ ಶಕ್ತ್ಯಾರಾಧನೆಯಲ್ಲಿ.

ಶಕ್ತ್ಯಾರಾಧನೆಯ ಪಾರಮಾರ್ಥಿಕತೆ ಮತ್ತು ಸಾಮಾಜಿಕ ಅನುಭೂತಿ
“ಸ್ತ್ರೀ”ಯನ್ನು ಜ್ಞಾನಿಗಳು ಮಾಯೇ, ಶಕ್ತಿ, ಪ್ರಕೃತಿ, ಮಾತೃಕೆ ಎಂದೇ ಪರಿಗಣಿಸಿ ಪ್ರಪಂಚದ ಚರಾಚರತೆಯ ಕಾರಣಳು ಎಂದೇ ವರ್ಣಿಸಿದ್ದಾರೆ.
ಯಜುರ್ವೇದದ ಋಕ್‌ ಒಂದರಲ್ಲಿ “ಸ್ತ್ರೀ’ಯನ್ನು “ಈಡೇರಂತೇ ಹವ್ಯೇ ಕಾಮ್ಯೇ ಜ್ಯೋಸ್ನೇ ಚಂದ್ರೇ ಸರಸ್ವತಿ ಮಹಿವಿಶ್ರುತಿ’ ಎಂದು ವಿಶೇಷವಾಗಿ ವರ್ಣಿಸಲಾಗಿದೆ.
ದುರ್ಗಾ ಸಪ್ತಶತಿಯಲ್ಲಿ ,

ವಿಸ್ಯಷ್ಟೌ ಸೃಷ್ಟಿರೂಪಾ ತ್ವಂ ಸ್ಥಿತಿ ರೂಪಾಚ ಪಾಲನೇ|
ತಥಾ ಸಂಹ್ಯತಿ ರೂಪಾಂತೇ ಜಗತೋಸ್ಯ ಜಗನ್ಮಯೇ||

ಎಂದು ಬ್ರಹ್ಮದೇವನೇ ಸ್ತುತಿಸಿರುವುದು ಶಕ್ತ್ಯಾತ್ಮಿಕೆಯ ಮಹತ್ವ ವನ್ನು ಅನಾವರಣಗೊಳಿಸಿದಂತಾಗಿದೆ. ಸೃಷ್ಟಿ, ಸ್ಥಿತಿ, ಸಂಹಾರಶಕ್ತಳೂ ನೀನೇ ಎಂಬ ತ್ರಿಮೂರ್ತಿಭಾವವು ಕೂಡ ಸ್ಪಷ್ಟ ಗೊಂಡಿದೆ. ಈ ರೀತಿ ಸ್ತ್ರೀ ಶಕ್ತಿಯನ್ನು ಆರಾಧಿಸುವ ಉದ್ದೇಶ ಮತ್ತು ಅದರ ವ್ಯಾಪಕತೆಯು ಪಾರಮಾರ್ಥಿಕವಾಗಿ ಯಾವ ರೀತಿ ಭದ್ರವಾದ ನೆಲೆಗಟ್ಟನ್ನು ಹೊಂದಿದೆ, ಮತ್ತದರ ಹಿನ್ನೆಲೆ ಏನು? ಎಂದು ವಿಶ್ಲೇಷಿಸುವಾಗ ದೊರಕುವ ಲೋಕೋತ್ತರವಾದ ಒಂದೇ ಒಂದು ಉತ್ತರವೆಂದರೆ “ಸ್ತ್ರೀ’ ದುರ್ಬಲಳಲ್ಲ, ಆಕೆ ಪುರುಷನಿಗಿಂತಲೂ ಶಕ್ತಿವಂತಳು. ವೇದ-ಪುರಾಣ, ಉಪನಿಷತ್‌ಗಳಿಗೆಲ್ಲ ಅವಳೇ ಮೂಲಾಧಾರ. ಸ್ತ್ರೀಯ ಸಹಾಯವಿಲ್ಲದೆ ಶಿವನೂ ಏನೂ ಮಾಡಲಾರ ಎನ್ನುವುದು!.

ದೇವೀ ಆರಾಧನೆ ಅಥವಾ ಶಕ್ತ್ಯಾರಾಧನೆ ಮೂಲ ಸ್ವರೂಪಳಾಗಿ ಕಂಡು ಬರುವುದು ದೇವೀ ಸೂಕ್ತದಲ್ಲಿ ತನ್ನನ್ನು ತಾನೇ ವೈಭವೀಕರಿಸಿಕೊಂಡ “ಅಂ ಣ’ ಎಂಬ ಹೆಸರಿನ ಋಷಿಯ ಪುತ್ರಿಯಾದ “ವಾಕ್‌’ ಎಂಬ ಸ್ತ್ರೀ. ಮತ್ತು ಮಾರ್ಕಡೇಯ ಋಷಿಯ ಮೂಲಕ ಲೋಕಕ್ಕೆ ಸಮರ್ಪಿಸಲ್ಪಟ್ಟ ದುರ್ಗಾ ಸಪ್ತಶತೀ ಗ್ರಂಥದಲ್ಲಿ ವರ್ಣಿಸ ಲ್ಪಟ್ಟ ಆದಿಮಾಯೆ ಅಥವಾ ದುರ್ಗಾದೇವಿ. ಓರ್ವಳು ಮಾನವಳಾಗಿ ಜನಿಸಿ ವೈದಿಕ ಪ್ರಣೀತಳಾಗಿ ಸಚ್ಚಿದಾನಂದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು “ದೇವೀ’ ಎಂದೆನಿಸಿಕೊಂಡ ಶಕ್ತಿ. ಎರಡನೆಯವಳು ಮಾಯಾ ಸ್ವರೂಪಳಾಗಿ ದೇವಾದಿ ದೇವತೆಗಳನ್ನು ಸೃಜಿಸಿ “ಮಾತೃಕೆ’ಯಾಗಿ ಪುನಃ ಅವರಿಂದಲೇ ಚೈತನ್ಯ ಪಡೆದು ಪ್ರಕೃತಿಯ ದುರ್ಗತಿ, ದುರಿತ, ದಾ, ದುಃಖ, ದುರ್ವಿದಿಗಳ ನಿಗ್ರಹಕ್ಕಾಗಿ ಚೈತನ್ಯ ಸ್ವರೂಪಳಾಗಿ “ದುರ್ಗೆ’ಎಂದು ವಿಖ್ಯಾತಳಾದವಳು.

ಶಕ್ತ್ಯಾವತಾರಗಳ ಮೂಲಕ ದುರಿತ ಭಯ ವಿನಾಶ
ಉಗ್ರವಾದ, ಭಯೋತ್ಪಾದನೆ, ಕ್ರೌರ್ಯ, ದುಷ್ಟತನ ಇತ್ಯಾದಿ ನಕಾರಾತ್ಮಕತೆಗಳು ಎಲ್ಲ ಯುಗ ಯುಗಾಂತರ, ಸರ್ವಕಲ್ಪ, ಮನ್ವಂತರಗಳಲ್ಲೂ ಅಸ್ತಿತ್ವದಲ್ಲಿತ್ತು ಎನ್ನುವುದನ್ನು ಭಾರತೀಯ ಪುರಾಣ ಮಾತ್ರವಲ್ಲ ಅನ್ಯ ಧರ್ಮಗ್ರಂಥಗಳಲ್ಲೂ ಕಾಣಬಹುದು. ವಿಶ್ವದ ಸೃಷ್ಟಿಯಾದಾಗ ಅದರ ಜತೆಗೇ ಹುಟ್ಟಿದ ದಾನವರು ತಮ್ಮ ಅಸುರೀ ಶಕ್ತಿ, ಪರಾಕ್ರಮಗಳಿಂದ ಸಾಮಾನ್ಯರನ್ನು ಕಾಡಿದಾಗ ಉಂಟಾದ ಕ್ಷೋಭೆಯನ್ನು ಮತ್ತು ಧರ್ಮ ಗ್ಲಾನಿಯನ್ನು ತಡೆ ಯಲು ಅವತರಿಸಿದ ಮೊದಲ ಶಕ್ತಿಯೇ “ಆದಿಮಾಯೆ’. ಅಂದರೆ ಸ್ತ್ರೀ, ಅರ್ಥಾತ್‌ ದುರ್ಗೆ, ದೇವಿ, ಮಾತೆ, ಆಕೆಯಿಂದಲೇ ಪ್ರಪಂ ಚದ ಮೊತ್ತ ಮೊದಲ ದೈತ್ಯ ಅಥವಾ ದಾನವಶಕ್ತಿ ಅವಸಾನವಾ ಯಿತು ಎನ್ನುವುದನ್ನು ಮಾರ್ಕಂಡೇಯ ಮುನಿ ಸ್ಪಷ್ಟಗೊಳಿ ಸಿರುವುದು ಗಮನೀಯ. ಪ್ರಕೃತಿಯು ವಿಕೃತಿ ಗೊಳ ಪಟ್ಟಾಗ ಸಮತೋಲನವನ್ನು ಕಾಯ್ದುಕೊಳ್ಳುವ ಕಾರ್ಯವು ತನ್ನಿಂ ದಲೇ ನೆರವೇರುತ್ತದೆ ಎನ್ನುವ ಸಂದೇಶವು ಸಪ್ತಶತೀ ಗ್ರಂಥದ ಮೂಲಕ ನಮಗೆ ದೊರೆಯುತ್ತದೆ.
ಶರನ್ನವರಾತ್ರಿಯ ಒಂಬತ್ತು ದಿನದ ಭಕಾöರಾಧನೆಯು ಪ್ರಪಂಚದ ಸರ್ವ ದೇವ-ದೇವತೆಗಳೂ ಸಲ್ಲುತ್ತದೆ. ಏಕೆಂದರೆ

ವಿದ್ಯಾಸಮಸ್ತಾ ಸ್ತವ ದೇವಿ ಭೇದಾಃ
ಸ್ತ್ರೀಯಾ ಸಮಸ್ತಾ ಸಕಲಾ ಜಗತ್ಸು|
ತ್ವಯೈಕಯಾ ಪೂರಿತ ಮಂಬಯೈತತ್‌
ಕಾತೇ ಸ್ತುತಿಸ್ತವೂ ಪರಾಪರೋಕ್ತಿಃ||

ಎಂಬ ದೇವತೆಗಳ ವಾಣಿಯೇ ಇದಕ್ಕೆ ಆಧಾರವಾಗಿದೆ. ಸಕಲವಿದ್ಯೆ, ಸರ್ವಶಕ್ತಿ, ಎಲ್ಲ ವಾದ ಭೇದಗಳು ವಿಶ್ವ ಜನನಿಯಾದ ನಿನ್ನಲ್ಲೇ ಅಡಕವಾಗಿವೆ ಎಂಬ ಅಪೂರ್ವ ಚಿಂತನೆ.
ಲೋಕದ ಹಿತವನ್ನು ಕಾಪಾಡುವ ಶಕ್ತಿಯು ಲೋಕಮಾತೆಗೆ ಮಾತ್ರ ಇರುತ್ತದೆ. ಆದುದರಿಂದ ಪ್ರಸಕ್ತ ಸಂದರ್ಭದಲ್ಲಿ ಜಗತ್ತು ಎದುರಿಸುತ್ತಿರುವ ಉಗ್ರವಾದ – ಭೀಷಣ ವಿದ್ವಂಸಕತೆಗೆ ಯಾರೂ ವಿಹ್ವಲಿಸುವ ಆವಶ್ಯಕತೆಯಿಲ್ಲ. ಶರನ್ನವರಾತ್ರಿಯ ಪರ್ವಕಾಲದಲ್ಲಿ ಎಲ್ಲರೂ ಒಂದಾಗಿ ದುರ್ಗತಿ ಹಾರಿಣಿಯಾದ ದುರ್ಗಾ ದೇವಿ ಯನ್ನು ಆರಾಧಿಸುವ ಮೂಲಕ ಸಂಪ್ರಾರ್ಥಿಸೋಣ ಮತ್ತು ಆ ಮಹಾಮಾತೆಯ ಮೂಲಕವೇ ಪರಿಹಾರ, ರಕ್ಷಣೆ ಎಲ್ಲವನ್ನೂ ಪಡೆಯೋಣ ಎಂಬ ಸದಾ ಶಯ ಮತ್ತು ಸಂದೇಶ.

 

ಟಾಪ್ ನ್ಯೂಸ್

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯKarnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ

Karnataka: ಅರ್ಹರಿಗಷ್ಟೇ ಬಿಪಿಎಲ್‌ ಕಾರ್ಡ್‌: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

PM ಮೋದಿ ಮನೆ ಮುಂದೆ ಧರಣಿ ನಡೆಸುವಿರಾ? ಎಂ.ಬಿ. ಪಾಟೀಲ್‌

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.