Life: ಶಿಕ್ಷಣದಲ್ಲಿ ಗೆದ್ದರೂ ಜೀವನ ಸೋಲು!
Team Udayavani, Oct 19, 2023, 12:05 AM IST
ನಮ್ಮ ದೇಶದ ಭವಿಷ್ಯವಾಗಿರುವ ಯುವ ಸಮುದಾಯವು ಉನ್ನತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡು ತ್ತಿದ್ದರೂ ಜೀವನದಲ್ಲಿ ಸೋಲುವುದು ಯಾಕೆ ಎಂಬುದು ಚಿಂತಿಸಬೇಕಾದ ಗಂಭೀರ ವಿಷಯ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ 25 ವರ್ಷದೊಳಗಿ ನವರು ಮತ್ತು ಶೇ. 65ರಷ್ಟು ಮಂದಿ 35 ವರ್ಷದೊಳಗಿನವರು. ಮುಂದೆ ಭಾರತವು ವಿಶ್ವದ ಉತ್ಪಾದನೆಯ ಕಾರ್ಖಾನೆಯಾಗಲು ಈ ಯುವಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ.
ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಇನ್ನೂ ಹೆತ್ತವರ ಪ್ರ ಭಾವ, ಅಭಿಲಾಷೆ ಕಡಿಮೆಯಾಗಿಲ್ಲ. ಹೆತ್ತವರು ನಿರ್ಧರಿಸಿದ ಶಿಕ್ಷಣವನ್ನು ಪಡೆಯುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಿರುವುದು ವಾಸ್ತವ. ಜತೆಗೆ ನಮ್ಮ ಶಿಕ್ಷಣ ವ್ಯವಸ್ಥೆಯೂ ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಹೆಚ್ಚಿಸು ತ್ತಿದೆ ಎಂಬ ಆರೋಪವೂ ಇದೆ. ನೀಟ್ ಸಹಿತ ಕೆಲವು ಪರೀಕ್ಷೆಗಳಿಗೆ ಆಕ್ಷೇಪ, ವಿರೋಧವೂ ಅಲ್ಲಲ್ಲಿ ಕೇಳಿ ಬರುತ್ತಿದೆ. ನಮ್ಮ ಶಿಕ್ಷಣ ವ್ಯವ ಸ್ಥೆಯು ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯುವ ಯಂತ್ರವನ್ನಾಗಿ ಮಾರ್ಪಡಿಸುತ್ತಿದೆ. ಇದು ಅವರ ಚಿಂತನೆಯ ಶಕ್ತಿಯನ್ನು ದುರ್ಬಲ ಗೊಳಿಸುತ್ತದೆ ಎಂಬ ಆರೋಪವೂ ಚಾಲ್ತಿಯಲ್ಲಿದೆ.
ದುರ್ಬಲವಾಗುತ್ತಿರುವ ಮಾನಸಿಕ ಸ್ಥೈರ್ಯ
ಶಿಕ್ಷಣದಲ್ಲಿ ಸವಾಲು ಎದುರಾಗುವುದು, ಉನ್ನತ ಪರೀಕ್ಷೆಗಳನ್ನು ತೇರ್ಗಡೆ ಮಾಡಲೇ ಬೇಕು ಎಂಬ ಒತ್ತಡ ಹೆಚ್ಚಾಗುವುದು, ಕಲಿಕೆ ಗಷ್ಟೇ ಆದ್ಯತೆ ನೀಡುವ ಕಾರಣದಿಂದ ಜನ ರೊಂದಿಗಿನ ಒಡನಾಟ ಕಡಿಮೆಯಾಗು ವುದು, ಬದುಕಿನ ಕೆಲವು ವಾಸ್ತವಗಳನ್ನು ಅರ್ಥೈಸಿಕೊಳ್ಳವುದರಲ್ಲಿ ಎಡವುವುದು ಮುಂತಾದವು ಹೊಸ ತಲೆಮಾರಿನ ಯುವ ಜನಾಂಗದಲ್ಲಿ ಮಾನಸಿಕ ಸ್ಥೆçರ್ಯ ಕಡಿಮೆ ಯಾಗಲು ಪ್ರಮುಖ ಕಾರಣಗಳಾಗಿವೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಉನ್ನತ ಶಿಕ್ಷಣ ಪಡೆಯದೇ ಇದ್ದರೆ ಜೀವನದಲ್ಲಿ ಸಂತೋಷ, ಯಶಸ್ಸು ಸಿಗುವುದೇ ಇಲ್ಲ ಎಂಬ ತಪ್ಪು ಕಲ್ಪನೆ ವಿದ್ಯಾರ್ಥಿ ಗಳು ಹಾಗೂ ಅವರ ಹೆತ್ತವರನ್ನು ಇಂಥದ್ದೊಂದು ಒತ್ತಡದ ವರ್ತುಲದಲ್ಲಿ ಸಿಲುಕಿಸಿ ಬಿಡುತ್ತದೆ. ಈ ಕಾರಣ ದಿಂದಲೇ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ ಮಾನಸಿಕ ಖನ್ನತೆ ಹಾಗೂ ಆತ್ಮಹತ್ಯೆಯಂಥ ಚಿಂತನೆ ಹೆಚ್ಚಾಗುತ್ತದೆ.
ಶಿಕ್ಷಣದಲ್ಲಿ ಗೆದ್ದವರು ಜೀವನ ಪಾಠದಲ್ಲಿ ಸೋಲು
ಇನ್ನೊಂದೆಡೆ ಶಿಕ್ಷಣದಲ್ಲಿ ಗೆಲ್ಲುವ ಬಹುತೇಕರು ಬದುಕಿನಲ್ಲಿ ಅಂಥ ಯಶಸ್ಸು ಪಡೆಯಲು ವಿಫಲರಾಗುತ್ತಿರುವುದನ್ನು ನಾವು ಕಾಣುತ್ತಿ ದ್ದೇವೆ. ಶಿಕ್ಷಣದ ಪಾಠವನ್ನು ಒತ್ತಡದಿಂದಲೇ ಎದುರಿಸಿದವರು ಇಂಥವರಲ್ಲಿ ಹೆಚ್ಚು. ಆದರೆ ಆಸಕ್ತಿಯಿಂದ ತಮಗೆ ಬೇಕಾದ ವಿಷಯ ಗಳನ್ನು ಕಲಿತವರು ಹಾಗೂ ಪ್ರತಿಭಾವಂತರು ಜೀವನದಲ್ಲೂ ಸೋಲುವುದಿಲ್ಲ. ಶಿಕ್ಷಣದಲ್ಲಿ ಉತ್ತಮ ಅಂಕ ಗಳಿಸಿ ಉನ್ನತ ಹುದ್ದೆಗೆ ಏರಿ ದ್ದರೂ ಅವರಲ್ಲಿ ಸವಾಲುಗಳನ್ನು ಎದುರಿಸುವ ಚಾಣಾಕ್ಷತೆ, ಸಣ್ಣ ವೈಫಲ್ಯವನ್ನೂ ಧೈರ್ಯದಿಂದ ನಿಭಾಯಿಸುವ ಶಕ್ತಿ ಇಲ್ಲದಿರುವುದು ಅವರು ಬೆಳೆದು ಬಂದಿರುವ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತದೆ. ನಮ್ಮ ಶಿಕ್ಷಣ ವ್ಯವಸ್ಥೆಯು ಈಗ ಅಂಕ ಗಳಿಸುವ ಪದ್ಧತಿಯಾಗಿಯೇ ಇದೆ. ಅಂಕಕ್ಕೆ ಹೊರತುಪಡಿಸಿದ ಕೆಲವು ವಿಷಯಗಳು ಪರಿಗಣಿಸಲ್ಪಡುತ್ತಿವೆಯಾದರೂ ಗರಿಷ್ಠ ಪಾಲು ಅಂಕಗಳದ್ದೇ. ಆದ್ದರಿಂದ ಎಲ್ಲರೂ ಅಂಕ ಗಳಿಸುವ ಒಂದೇ ದೃಷ್ಟಿಕೋ ನದಿಂದ ಪರೀಕ್ಷೆ ಹಾಗೂ ಶಿಕ್ಷಣವನ್ನು ನೋಡು ತ್ತಿರುವುದು ಅವರು ಬದುಕಿನಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯದಿರಲು ಕಾರಣವಾಗಿರುತ್ತದೆ.
ಸಮಾಜದೊಂದಿಗೆ ಇದ್ದುಕೊಂಡೇ ಶಿಕ್ಷಣ ಪಡೆಯುವುದು ಅಗತ್ಯ
ಶಿಕ್ಷಣದಲ್ಲಿ ದೊಡ್ಡ ಸಾಧನೆ ಮಾಡಬೇಕು ಎನ್ನುವ ಬಹುತೇಕ ಮಂದಿ ಸಮಾಜದ ಮುಖ್ಯ ವಾಹಿನಿಯಿಂದ ಪ್ರತ್ಯೇಕವಾಗಿ ಶಿಕ್ಷಣ ಸಂಸ್ಥೆ ಹಾಗೂ ಮನೆಯ ವಾತಾವರಣಕ್ಕೆ ಮಾತ್ರ ಒಗ್ಗಿಕೊಂಡಿರುತ್ತಾರೆ. ಬಹುತೇಕ ಮಕ್ಕಳ ಮನೆಯವರು ಕೂಡ ತಮ್ಮ ಮಕ್ಕಳನ್ನು ಸಮಾಜ ದೊಂದಿಗೆ ಬೆರೆಯಲು ಬಿಡುವುದಿಲ್ಲ. ಸಮಾಜದ ಅಂಕುಡೊಂಕುಗಳು ನಮ್ಮ ಮಕ್ಕಳ ನ್ನೂ ಬಾಧಿಸೀತು ಹಾಗೂ ಅವರು ಕಲಿಕೆಯಲ್ಲಿ ಹಿಂದುಳಿದಾರು ಎಂಬ ಭೀತಿ ಮನೆಯ ವರದ್ದು. ಆದ್ದರಿಂದ ಮಕ್ಕಳನ್ನು ಒಂದು ರೀತಿಯ ಪಂಜರದಲ್ಲಿ ಹಾಕಿ ಬೆಳೆಸುತ್ತಾರೆ. ಇದು ಮಕ್ಕಳು ಶಿಕ್ಷಣದಲ್ಲಿ ಉನ್ನತಿ ಪಡೆಯಲು ಸಹಕಾರಿಯಾದರೂ ಅವರ ವರ್ತನೆಯಲ್ಲಿ ಗಾಢ ಅಡ್ಡ ಪರಿಣಾಮ ಬೀರುತ್ತದೆ. ಅವರು ಮಾನವಯಂತ್ರಗಳಂತೆ ಪರಿವರ್ತಿತರಾಗುತ್ತಾರೆ ಎಂಬ ಆತಂಕ ತಜ್ಞರದ್ದಾಗಿದೆ. ಆದ್ದರಿಂದ ಮಕ್ಕಳು ಸಮಾಜದ ಆಗುಹೋಗುಗಳನ್ನು ಗಮನಿಸುತ್ತಾ, ಜೀವನದ ಸವಾಲುಗಳನ್ನು ಅರಿ ಯುತ್ತಾ ಶಿಕ್ಷಣ ಮುಂದುವರಿಸಿದರೆ ಅವರು ಪರಿಪೂರ್ಣ ಯಶಸ್ಸಿನತ್ತ ಮುಂದುವರಿಯುವುದು ಸಾಧ್ಯ. ಆಗ ಅವರು ಬದುಕಿನಲ್ಲಿ ಎಂಥ ಸವಾಲುಗಳನ್ನು ಎದುರಿಸಲೂ ಸಿದ್ಧರಿರುತ್ತಾರೆ. ಅವರಲ್ಲಿ ಒಂಟಿತನ ಕಾಡುವುದಿಲ್ಲ. ಖನ್ನತೆಗೆ ಅವಕಾಶ ವಿರುವುದಿಲ್ಲ.
ಒಂದು ಸೋಲಿಗೇ ಆತ್ಮಹತ್ಯೆ!
ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆ ಯಲ್ಲಿ ಸೋತೆವು ಅಥವಾ ನಿರೀಕ್ಷಿತ ಅಂಕಗಳು ಬಂದಿಲ್ಲ ಎಂದು ಸಾವಿಗೆ ಶರಣಾ ಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚೆಚ್ಚು ವರದಿ ಯಾಗುತ್ತಿರುವುದು ದೇಶದ ಭವಿಷ್ಯಕ್ಕೊಂದು ದೊಡ್ಡ ಹೊಡೆತವೇ. ಮರಳಿ ಯತ್ನವ ಮಾಡು ಎಂಬ ಮಾತಿನಲ್ಲಿ ವಿಶ್ವಾಸವಿರಿಸಿ ಅದರಂತೆ ಬೆಳೆದಿದ್ದರೆ ಆತ್ಮಹತ್ಯೆ ಯಂಥ ದುಡುಕಿನ ನಿರ್ಧಾರಕ್ಕೆ ಮುಂದಾಗುವುದಿಲ್ಲ. ಸೋಲಿನ ಅನುಭವವಾಗಿ, ಅದನ್ನು ಮೆಟ್ಟಿ ನಿಂತು ಯಶಸ್ಸಿನ ಪಥದಲ್ಲಿ ಸಾಗುವ ಮನಸ್ಥಿತಿ ಈಗಿನ ತುರ್ತು ಅಗತ್ಯವಾಗಿದೆ. ಇದು ಶಿಕ್ಷಣ ಸಂಸ್ಥೆ ಮತ್ತು ಮನೆಯಿಂದ ಮಕ್ಕಳಿಗೆ ಸಿಗಬೇಕಾದ ಟಾನಿಕ್. ಒಂದು ಆತ್ಮಹತ್ಯೆಯಿಂದ ಜೀವತ್ಛವ ವಾಗುವವರು ಹಲವು ಮಂದಿ ಇರುತ್ತಾರೆ. ಒಂದು ಕುಟುಂಬದ ಒಬ್ಬ ವಿದಾರ್ಥಿ ಆತ್ಮಹತ್ಯೆ ಮಾಡಿದರೆ ಆ ಮನೆಯ ಇತರರೆಲ್ಲರೂ ಜೀವತ್ಛವಗಳಾಗಿ ಪರಿವರ್ತಿ ತರಾಗುತ್ತಾರೆ. ಜತೆಗೆ ಆತನ ಸಹಪಾಠಿಗಳಲ್ಲೂ ಆತಂಕ ಮೂಡುತ್ತದೆ. ಪರೋಕ್ಷವಾಗಿ ಅಂಥದ್ದೇ ಕೃತ್ಯಕ್ಕೆ ಪ್ರೇರೇಪಿಸುವ ಆತಂಕವೂ ಇದೆ. ಆದ್ದರಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಯನ್ನು ಕೇವಲ ಒಂದು ಸಾವು ಎಂದು ಪರಿಗಣಿಸದೆ, ಅದರಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ, ಮನೆ ಹಾಗೂ ಸಮಾಜದ ಪಾಲು ಇದೆ ಎಂಬುದನ್ನು ಅಥೈಸಿಕೊಳ್ಳಬೇಕಾಗಿದೆ.
ಮಕ್ಕಳ ಮಾನಸಿಕ ಸ್ಥಿತಿ ದೃಢಗೊಳ್ಳಬೇಕಿದೆ
ಮಕ್ಕಳನ್ನು ಸಣ್ಣ ಪ್ರಾಯದಿಂದಲೇ ಮಾನಸಿ ಕವಾಗಿ ಗಟ್ಟಿಗೊಳಿಸುವುದು ಈಗಿನ ಅಗತ್ಯ ವಾಗಿದೆ. ಅಂಥದ್ದೊಂದು ಗಟ್ಟಿ ಪ್ರಯತ್ನ ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ಶಿಕ್ಷಣ ಸಂಸ್ಥೆಗಳಿಂದಲೂ ಆಗಬೇಕಾಗಿದೆ. ಎಷ್ಟೋ ಶಿಕ್ಷಣ ಸಂಸ್ಥೆಗಳು ತಮ್ಮ ಸ್ವಾರ್ಥಕ್ಕಾಗಿ ವಿದ್ಯಾರ್ಥಿಗಳನ್ನು ರಾತ್ರಿ, ಹಗಲೆನ್ನದೆ ಕೂಡಿ ಹಾಕಿ ಓದಿಸುವುದೂ ಇದೆ. ಮಕ್ಕಳ ಮನಸ್ಸಿನ ಮೇಲೆ ಈ ರೀತಿಯ ಬಲವಂತ, ಅತಿಯಾದ ನಿಯಂತ್ರಣವು ಅವರ ಭಾವನೆಗಳನ್ನು ಕೊಲ್ಲುತ್ತದೆ. ಭಾವನೆ ಗಳು ದುರ್ಬಲವಾದರೆ ವ್ಯಕ್ತಿ ದುರ್ಬಲ ವಾದಂತೆಯೇ. ಆದ್ದರಿಂದ ಮಕ್ಕಳನ್ನು ಮಾನ ಸಿಕವಾಗಿ ದೃಢಗೊಳಿಸುತ್ತಾ ಶಿಕ್ಷಣ ಕೊಡಿಸುವ ಪ್ರಯತ್ನ ಕುರಿತು ಚಿಂತಿಸುವ ಅಗತ್ಯವಿದೆ.
ಪುತ್ತಿಗೆ ಪದ್ಮನಾಭ ರೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.