![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Oct 19, 2023, 12:12 AM IST
ಮಂಗಳೂರು: ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಕಾಯಕಲ್ಪ ನೀಡಲು ಆರೋಗ್ಯ ಇಲಾಖೆ ಮುಂದಾಗಿದ್ದು, 11 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಗೆ ಮೂಲಸೌಕರ್ಯ ಒದಗಿಸಲಾಗುವುದು ಎಂದು ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ವೆನ್ಲಾಕ್ ನಲ್ಲಿ ಬುಧವಾರ ಪ್ರಗತಿ ಪರಿಶೀಲನ ಸಭೆ ನಡೆಸಿ ಅವರು ಮಾತನಾಡಿದರು.
ಆಸ್ಪತ್ರೆಯಲ್ಲಿ 5 ಕೋಟಿ ರೂ. ಅನುದಾನದಲ್ಲಿ ಔಷಧ ಉಗ್ರಾಣ, ವೈದ್ಯಕೀಯ ದಾಖಲೆ ವಿಭಾಗ, ಎಂ.ಡಿ.ಆರ್.ಟಿ.ಬಿ ವಾರ್ಡ್, ಜೀವ ವೈದ್ಯಕೀಯ ತ್ಯಾಜ್ಯ ಕೊಠಡಿಗೆ ಹೊಸ ಕಟ್ಟಡಗಳ ನಿರ್ಮಾಣವಾಗಲಿದೆ. 2 ಕೋಟಿ ರೂ. ವೆಚ್ಚದಲ್ಲಿ 30 ಬೆಡ್ ಹಾಸಿಗೆಗಳ ಹೊಸ ಡಯಾಲಿಸಿಸ್ ಘಟಕ ನಿರ್ಮಾಣ, ಫೈರ್ ಸೇಫ್ಟಿ ಕಾಮಗಾರಿಗಳಿಗೆ 1.75 ಕೋಟಿ ರೂ., ಹೊರರೋಗಿ ಮತ್ತು ಆಡಳಿತ ವಿಭಾಗ ಹಳೆಯ ಕಟ್ಟಡದಲ್ಲಿದ್ದು, ಕಟ್ಟಡ ದುರಸ್ತಿ ಮತ್ತು ನವೀಕರಣಕ್ಕೆ 2 ಕೋಟಿ ರೂ., ಆಸ್ಪತ್ರೆಯ ಅಡುಗೆ ಕಟ್ಟಡ ನಿರ್ಮಾಣಕ್ಕೆ 1.5 ಕೋಟಿ ರೂ., ನೂತನ ಸರ್ಜಿಕಲ್ ಬ್ಲಾಕ್ ವೈದ್ಯಕೀಯ ಉಪಕರಣ ಹಾಗೂ ಪೀಠೊಪಕರಣ ಖರೀದಿಗೆ ಎಬಿ-ಎಆರ್‌ಕೆ ಅನುದಾನದಿಂದ 2 ಕೋಟಿ ರೂ. ಹಾಗೂ ಕೆಎಂಸಿಯಿಂದ 2 ಕೋಟಿ ರೂ. ಬಳಕೆಗೆ ಸೂಚನೆ ನೀಡಿದ ಅವರು, ಹೊಸ ಮೆಡಿಕಲ್ ಬ್ಲಾಕ್‌ನಿಂದ ಟ್ರಾಮಾ ಬ್ಲಾಕ್‌ಗೆ 1 ಕೋಟಿ ವೆಚ್ಚ ರೂ. ವೆಚ್ಚದಲ್ಲಿ ಓವರ್ ಕನೆಕ್ಟಿಂಗ್ ಬ್ರಿಜ್ ನಿರ್ಮಿಸಲಾಗುವುದು ಎಂದರು.
ಡಯಾಲಿಸಿಸ್‌ಗೆ 13 ಹೊಸ ಯಂತ್ರ
ಡಯಾಲಿಸಿಸ್ ಘಟಕಕ್ಕೆ ಭೇಟಿ ನೀಡಿದ ಸಚಿವರು, ಅಲ್ಲಿಯ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಡಯಾಲಿಸಿಸ್ ಯಂತ್ರಗಳ ಸಮಸ್ಯೆ ಇದೆ. ತತ್‌ಕ್ಷಣ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು. ಡಯಾಲಿಸಿಸ್ ಘಟಕಕ್ಕೆ ಇನ್ನೂ 13 ಹೊಸ ಸಿಂಗಲ್ ಬಳಕೆಯ ಡಯಾಲಿಸಿಸ್ ಯಂತ್ರಗಳನ್ನು ನೀಡುವುದಾಗಿ ತಿಳಿಸಿದರು.
You seem to have an Ad Blocker on.
To continue reading, please turn it off or whitelist Udayavani.