Vande Bharat: 2024ರ ಆರಂಭದಲ್ಲಿ ವಂದೇ ಭಾರತ್ ಮೆಟ್ರೋ ಸಂಚಾರ
Team Udayavani, Oct 19, 2023, 12:21 AM IST
ಹೊಸದಿಲ್ಲಿ: 2024ರ ಆರಂಭದಲ್ಲಿ ವಂದೇ ಭಾರತ್ ಮೆಟ್ರೋರೈಲುಗಳ ಸಂಚಾರ ಆರಂಭವಾಗಲಿದೆ. ಕಡಿಮೆ ಅಂತರದ ಪ್ರಯಾಣಕ್ಕಾಗಿ ವೇಗದ, ಸಂಪೂರ್ಣ ವಾಯುನಿ ಯಂತ್ರಿತ ವಂದೇ ಭಾರತ್ ಮೆಟ್ರೋ ರೈಲುಗಳನ್ನು ಪರಿಚಯಿ ಸಲಾಗುತ್ತಿದೆ. ಇದರ ಗರಿಷ್ಠ ವೇಗ ಗಂಟೆಗೆ 130 ಕಿ.ಮೀ. ಇರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
“300 ಕಿ.ಮೀ. ವರೆಗಿನ ದೂರದ ಪ್ರಯಾಣಕ್ಕಾಗಿ ವಂದೇ ಮೆಟ್ರೋರೈಲುಗಳನ್ನು ವಿನ್ಯಾಸಗೊಳಿಸಲಾಗಿದೆ. ಭವಿಷ್ಯದಲ್ಲಿ ಇದು ಮೇನ್ಲೈನ್ ಇಎಂಯು(ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್) ರೈಲುಗಳ ಪರ್ಯಾ ಯವಾ ಗಲಿದೆ. ಮೊದಲ ವಂದೇ ಭಾರತ್ ಮೆಟ್ರೋರೈಲಿನ ತಯಾರಿಕೆ ಕಾರ್ಯವು ಚೆನ್ನೈನ ರೈಲ್ವೆ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿ(ಐಸಿಎಫ್)ಯಲ್ಲಿ ನಡೆಯು ತ್ತಿದೆ’ ಎಂದು ಐಸಿಎಫ್ ಪ್ರಧಾನ ವ್ಯವಸ್ಥಾಪಕ ಬಿ.ಜಿ.ಮಲ್ಯ ತಿಳಿಸಿದ್ದಾರೆ.
“ವಂದೇ ಭಾರತ್ ಮೆಟ್ರೋರೈಲುಗಳ ಪ್ರತಿ ಕೋಚ್ನಲ್ಲಿ ಪ್ರಯಾ ಣಿಕರು ಕುಳಿತುಕೊಳ್ಳಲು 100 ಆಸನಗಳು ಇರಲಿದ್ದು, 200 ಮಂದಿ ಪ್ರಯಾಣಿಕರು ನಿಂತು ಪ್ರಯಾಣಿಸಲು ಸ್ಥಳಾವಕಾಶ ಇರಲಿದೆ. ಸಿಸಿಟಿವಿ ಕ್ಯಾಮೆರಾಗಳು, ಎಲ್ಸಿಡಿ ಡಿಸ್ಪೇ, ಹವಾ ನಿಯಂತ್ರಿತ ವ್ಯವಸ್ಥೆ, ಮಾಡ್ನೂಲರ್ ಶೌಚಾಲಯ, ಮೊಬೈಲ್ ಚಾರ್ಜಿಂಗ್ ಸಾಕೆಟ್ ಸೇರಿ ಅತ್ಯಾಧುನಿಕ ಸೌಲಭ್ಯ ಹೊಂದಿರಲಿದೆ’ ಎಂದು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.