Shiva Rajkumar: ಅಪ್ಪುವಿನ ಸಮಾಧಿ ಕಡೆ ಹೋಗುವುದಿಲ್ಲ.. ಪುನೀತ್ ನೆನೆದು ಶಿವಣ್ಣನ ಮಾತು
ಸಮಾಧಿ ಪೂಜೆಯ ಕಲ್ಪನೆಯಲ್ಲಿ ನಂಬಿಕೆಯಿಲ್ಲ
Team Udayavani, Oct 19, 2023, 4:03 PM IST
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ʼಘೋಸ್ಟ್ʼ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳು ಮುಂಜಾನೆಯೇ ಥಿಯೇಟರ್ ಮುಂದೆ ಸಾಲಾಗಿ ನಿಂತು ʼಒರಿಜಿನಲ್ ಗ್ಯಾಂಗ್ ಸ್ಟರ್ʼ ಗೆ ಜೈಕಾರ ಹಾಕಿದ್ದಾರೆ.
ʼಜೈಲರ್ʼ ಬಳಿಕ ಶಿವರಾಜ್ ಕುಮಾರ್ ಅವರಿಗೆ ಬೇಡಿಕೆ ಹೆಚ್ಚಾಗಿದೆ. ʼನರಸಿಂಹʼನ ಪಾತ್ರದ ಬಳಿಕ ಅದೇ ರೀತಿಯ ಪಾತ್ರಕ್ಕಾಗಿ ಶಿವಣ್ಣನಿಗೆ ಈಗಾಗಲೇ ಆಫರ್ ಗಳು ಬಂದಿದೆ. ಸದ್ಯ ಶಿವರಾಜ್ ಸಿನಿಮಾದ ಪ್ರಚಾರದ ಅಂಗವಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ʼಪಿಂಕ್ ವಿಲ್ಲಾʼ ನಡೆಸಿದ ಸಂದರ್ಶನದಲ್ಲಿ ನಟ ಶಿವರಾಜ್ ಕುಮಾರ್ ಪವರ್ ಸ್ಟಾರ್ ಅಪ್ಪು ಅವರ ಬಗ್ಗೆ ಮಾತನಾಡಿದ್ದಾರೆ. ಪುನೀತ್ ಕಳೆದುಕೊಂಡದ್ದರ ಬಗ್ಗೆ ಶಿವರಾಜ್ ಕುಮಾರ್ ಮಾತನಾಡಿದ್ದಾರೆ.
“ನನಗೆ ಅಪ್ಪು ನಮ್ಮಿಂದ ದೂರವಾಗಿದ್ದಾರೆ ಎಂದು ಅನ್ನಿಸುತ್ತಿಲ್ಲ. ಅಪ್ಪು ಯಾವಾಗಲೂ ನನ್ನೊಂದಿಗೆ ಇದ್ದಾನೆ” ಎಂದು ಶಿವಣ್ಣ ಹೇಳಿದ್ದಾರೆ.
“ನಾನು ಅಪ್ಪುವಿನ ಸಮಾಧಿ ಕಡೆ ಹೋಗುವುದಿಲ್ಲ. ಆ ಕಲ್ಪನೆಯ ಬಗ್ಗೆ ನನಗೆ ನಂಬಿಕೆ ಇಲ್ಲ.ನನ್ನ ಅಪ್ಪ – ಅಮ್ಮನ ವಿಚಾರದಲ್ಲೂ ಹೀಗೆಯೇ” ಎಂದು ನಟ ಹೇಳಿದ್ದಾರೆ.
“ಅಪ್ಪುವಿನ ಸಮಾಧಿ ಇರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಶೂಟಿಂಗ್ ವಿದ್ದರೆ ಮಾತ್ರ ನಾನು ಅಲ್ಲಿಗೆ ಅಪರೂಪಕ್ಕೆ ಹೋಗುತ್ತೇನೆ. ಇಲ್ಲದಿದ್ದರೆ ಹೋಗುವುದಿಲ್ಲ. ನನಗೆ ಅಪ್ಪು ನನ್ನೊಂದಿಗೆ ಇಲ್ಲ ಎನ್ನುವ ಅನುಭವವಾಗಿಲ್ಲ. ಸಮಾಧಿವಿರುವ ಜಾಗಕ್ಕೆ ಹೋಗಿ ಪೂಜೆ ಎಲ್ಲ ಮಾಡಿದರೆ ನಾವು ಅವರನ್ನು ಕಳುಹಿಸಿದ್ದೇನೆ ಎನ್ನುವ ಭಾವನೆ ಬರುತ್ತದೆ. ಈ ಕಾರಣಕ್ಕಾಗಿ ನಾನು ಹಾಗೆ ಮಾಡಲು ಬಯಸುವುದಿಲ್ಲ” ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಪುನೀತ್ ರಾಜ್‌ಕುಮಾರ್ ಅವರನ್ನು ಪ್ರೀತಿಸುವ ಪ್ರತಿಯೊಬ್ಬರ ಹೃದಯದಲ್ಲಿ ಯಾವಾಗಲೂ ಅವರು ಇರುತ್ತಾರೆ. ಅವರನ್ನು ಸದಾ ನಮ್ಮೊಂದಿಗೆ ಬದುಕುವಂತೆ ಮಾಡಬೇಕೆಂಬುದು ನನ್ನ ಆಸೆ’ ಎಂದು ಶಿವಣ್ಣ ಹೇಳಿದ್ದಾರೆ.
ಶಿವರಾಜ್ ಕುಮಾರ್ ಧನುಷ್ ಅವರ ʼಕ್ಯಾಪ್ಟನ್ ಮಿಲ್ಲರ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೋಹನ್ ಲಾಲ್ – ಪೃಥ್ವಿರಾಜ್ ಅವರ ʼ ಲೂಸಿಫರ್-2ʼ(ಎಂಪುರಾನ್) ಸಿನಿಮಾದಲ್ಲಿ ಶಿವರಾಜ್ ಬಣ್ಣ ಹಚ್ಚಲಿದ್ದಾರೆ ಎನ್ನಲಾಗಿದೆ. ಆದರೆ ಇದು ಇನ್ನಷ್ಟೇ ಅಧಿಕೃತವಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Lacchi Kannada Movie: ಲಚ್ಚಿ ಚಿತ್ರಕ್ಕೆ ಪ್ರಶಸ್ತಿ ಗರಿ
Chowkidar Movie: ಶೂಟಿಂಗ್ ಮುಗಿಸಿದ ಚೌಕಿದಾರ್
KD Movie: ಪ್ರೇಮ್ ಕೆಡಿಗೆ ಅಜಯ್ ದೇವಗನ್ ಸಾಥ್; ಶಿವನ ಹಾಡಿಗೆ ಧ್ರುವ ಭರ್ಜರಿ ಸ್ಟೆಪ್ಸ್
Rajendra Babu: ನಟರಿಗೆ ಪ್ಯಾನ್ ಇಂಡಿಯಾ ಭೂತ ಹಿಡಿದಿದೆ: ಬಾಬು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
Bus Service launch: ಮಂಗಳೂರು, ಕುಂದಾಪುರಕ್ಕೆ “ಅಂಬಾರಿ ಉತ್ಸವ’
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.