![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 20, 2023, 1:14 AM IST
ಸುಳ್ಯ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣ ದಲ್ಲಿ ಡಾ| ರೇಣುಕಾ ಪ್ರಸಾದ್ ಮತ್ತು ಡಾ| ಜ್ಯೋತಿ ಆರ್. ಪ್ರಸಾದ್‌ರವರ ಆಡಳಿತದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳ ಮತ್ತು ಸಂಸ್ಥೆಯ ಉದ್ಯೋಗಿಗಳ ಬಗ್ಗೆ ಅವಹೇಳನಕಾರಿ ಬರಹಗಳನ್ನು ಬರೆಯಲಾಗುತ್ತಿದ್ದು, ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆ.ವಿ.ಜಿ. ಶಿಕ್ಷಣ ಸಂಸ್ಥೆಗಳ ಪಾಂಶು ಪಾಲರು ಮತ್ತು ಸಿಬಂದಿ ಮಂಗಳೂರಿನ ಜಿಲ್ಲಾ ಸೈಬರ್ ಕ್ರೈಂ ಅಧಿಕ್ಷಕರಿಗೆ ದೂರು ನೀಡಿದ್ದಾರೆ.
ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜು, ಕೆ.ವಿ.ಜಿ. ದಂತ ಮಹಾ ವಿದ್ಯಾಲಯ, ಕೆ.ವಿ.ಜಿ. ಪಾಲಿಟಿಕ್ನಿಕ್, ಕೆ.ವಿ.ಜಿ. ಐ.ಟಿ.ಐ. ಮತ್ತು ಕೆ.ವಿ.ಜಿ. ಐ.ಪಿ.ಎಸ್.ನ ಪ್ರಾಂಶುಪಾಲರು ಮತ್ತು ಸಿಬಂದಿ ಸಹಿ ಮಾಡಿದ ದೂರಿನ ಪ್ರತಿಯನ್ನು ಮಂಗಳೂರಿನ ಜಿಲ್ಲಾ ಸೈಬರ್ ಅಧೀಕ್ಷಕರಿಗೆ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್, ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮತ್ತು ಉದ್ಯೋಗಿಗಳ ಬಗ್ಗೆ ಅವಹೇಳನಕಾರಿ ಬರಹಗಳನ್ನು ಬರೆಯುವವರನ್ನು ಮತ್ತು ವರದಿ ಪ್ರಸಾರ ಮಾಡುವವರನ್ನು ತತ್‌ಕ್ಷಣ ಬಂಧಿಸಿ ಅವರ ಮೇಲೆ ಕಠಿನ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖೀಸಲಾಗಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.