ಕಾರಾಗೃಹಗಳು ಬಂದಿಖಾನೆ ಆಗಬಾರದು, ಪರಿವರ್ತನೆಯ ತಾಣವಾಗಬೇಕು, ಬಿ.ಎಸ್ ರಮೇಶ್


Team Udayavani, Oct 20, 2023, 1:40 PM IST

ಕಾರಾಗೃಹಗಳು ಬಂದಿಖಾನೆ ಆಗಬಾರದು, ಪರಿವರ್ತನೆಯ ತಾಣವಾಗಬೇಕು, ಬಿ.ಎಸ್ ರಮೇಶ್

ಮೈಸೂರು: ಇತ್ತೀಚಿನ ಕಾರಾಗೃಹಗಳು ಅಪರಾಧಿಗಳಿಗೆ ದಂಡನೆ ಶಿಕ್ಷೆ ಬಂಧನಗಳನ್ನು ನೀಡುತ್ತಿಲ್ಲ ಬದಲಾಗಿ ಮನಃಪರಿವರ್ತನೆಗೆ ಅವಕಾಶ ಮಾಡಿಕೊಟ್ಟು ಸಮಾಜದಲ್ಲಿ ಶಾಂತಿಯನ್ನು ನಡೆಸುವಂತಹ ಕೆಲಸಗಳನ್ನು ಕಾರಾಗೃಹಗಳು ಮಾಡುತ್ತಿವೆ ಎಂದು ಮೈಸೂರು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಅಧೀಕ್ಷಕ ಬಿ.ಎಸ್ ರಮೇಶ್ ಅವರು ತಿಳಿಸಿದರು.

ಇಂದು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾ ಕಾರಾಗೃಹದಲ್ಲಿ ಯೋಗದಸರ ಉಪ ಸಮಿತಿಯಿಂದ ಆಯೋಜಿಸಿದ್ದ ಕಾರಾಗೃಹ ವಾಸಿಗಳಿಗೆ ವಿಶಿಷ್ಟ ಯೋಗಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಆರೋಗ್ಯ ತನ್ನಿಂದ ತಾನೇ ಬರುವಂತಹ ವಸ್ತುವಲ್ಲ ಅದಕ್ಕೆ ನಿರ್ವಹಣೆಯ ಅವಶ್ಯಕತೆ ಇದೆ. ನಮ್ಮ ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಯೋಗ ಅತಿ ಅವಶ್ಯಕ. ನಾಡ ಹಬ್ಬ ಮೈಸೂರು ದಸರಾ ಸವಿ ನೆನಪು ಕಟ್ಟಿಕೊಳ್ಳಲು ಇಂದು  ನಮ್ಮ ಕಾರಾಗೃಹದಲ್ಲಿ ವಿಶಿಷ್ಟ ಯೋಗ ಅಭ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಒಂದು ವಿನೂತನ ಪ್ರಯತ್ನ ಎಂದರು.

ದಸರಾ ಉತ್ಸವದ ಜೊತೆಗೆ ಯೋಗದ ಉಪ ಸಮಿತಿ ಈ ಬಾರಿ ಯೋಗ ಉತ್ಸವವನ್ನು ಮಾಡುತ್ತಿದೆ.ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಂದು ಯೋಗಭ್ಯಾಸ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ. ಕಾರಾಗೃಹದಲ್ಲಿ ವಾಸಿಸುವ ನೀವುಗಳು ಅಲ್ಪ ಕಾಲಕ್ಕೆ ಮಾತ್ರ ಇಲ್ಲಿ ವಾಸಿಸುತ್ತೀರಾ. ಹಾಗಾಗಿ ಯಾವುದು ಕ್ಷಣಾರ್ಧದಲ್ಲಿ ಮಾಡಿದ ತಪ್ಪಿಗೆ ಸೆರೆಮನೆಯ ವಾಸವನ್ನು ಅನುಭವಿಸುತ್ತಿದ್ದೀರಿ. ಇಲ್ಲಿಂದ ಹೊರಡುವ ಮುನ್ನ ಮನಃಪರಿವರ್ತನೆ ಮಾಡಿಕೊಂಡು ಪ್ರತಿಯೊಬ್ಬರು ಸಮಾಜಕ್ಕೆ ಒಳ್ಳೆಯದನ್ನು ಬಯಸುವಂತಹ ಮನಸ್ಸನ್ನು ಇಟ್ಟು ಹೊರಡಬೇಕು. ವಿವಿಧ ಸಂಘ ಸಂಸ್ಥೆಗಳ ಅಡಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ನಿಮ್ಮಲ್ಲಿರುವ ಒಳ್ಳೆಯ ಗುಣಗಳನ್ನು ಪೋಷಣೆ ಮಾಡಿ ಸಮಾಜಕ್ಕೆ ಉತ್ತಮ ನಾಗರಿಕರನ್ನಾಗಿ ಮಾಡುವ ಪ್ರಯತ್ನವನ್ನು ಇಂದಿನ ಕಾರಾಗೃಹಗಳು ಮಾಡುತ್ತಿವೆ ಎಂದರು.

ಧಾರ್ಮಿಕ ಉಪನ್ಯಾಸಗಳು, ಕ್ರೀಡೆ ಕುರಿತಾದ ಕಾರ್ಯಕ್ರಮಗಳು ಹೀಗೆ ಹಲವಾರು ಕಾರ್ಯಕ್ರಮಗಳನ್ನು ಕಾರಾಗೃಹದಲ್ಲಿ ಏರ್ಪಡಿಸುವ ಮೂಲಕ ನಿಮ್ಮನ್ನು ಕೂಡ ಸಮಾಜಕ್ಕೆ ಸೇರಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಆರೋಗ್ಯದ ಭಾಗವಾಗಿ ಯೋಗವನ್ನು ನಿರ್ವಹಿಸಿ ಆರೋಗ್ಯವಂತ ಸಮಾಜಕ್ಕಾಗಿ ಶ್ರಮಿಸಬೇಕು. ಪ್ರತಿನಿತ್ಯವೂ ಕೂಡ ಕಾರಾಗೃಹದಲ್ಲಿ ಯೋಗವನ್ನು ಮಾಡುವುದರ ಮೂಲಕ ಧನಾತ್ಮಕ ಪರಿವರ್ತನೆಯಾಗಿ ಕಾರಾಗೃಹದಿಂದ ಮುಕ್ತಿ ಹೊಂದಿರಿ ಎಂದು ತಿಳಿಸಿದರು.

ಯೋಗದಸರದ ಉಪ ಸಮಿತಿಯ ಅಧ್ಯಕ್ಷ ದೇವರಾಜ ರವರು ಮಾತನಾಡಿ ನಿಮ್ಮ ಜೀವನದ ಯಾವುದೋ ಒಂದು ಕಹಿ ಘಟನೆಯಿಂದ ನೀವೆಲ್ಲರೂ ಸೆರೆಮನೆ ವಾಸವನ್ನು ಅನುಭವಿಸುತ್ತಿದ್ದೀರಾ. ಮನುಷ್ಯನಾದವನು ಕಹಿ ಘಟನೆ ಮತ್ತು ಕಹಿ ಕ್ಷಣಗಳನ್ನು ಮರೆತು ಮುಂದೆ ಸಾಗಬೇಕು. ಅದೇ ರೀತಿಯಾಗಿ ನೀವು ಕೂಡ ಇಲ್ಲಿಂದ ಹೊರಡುವಾಗ ಉತ್ತಮ ನಾಗರಿಕರಾಗಿ ಹೊರಡಬೇಕು. ಯೋಗವು ಮನುಷ್ಯನನ್ನು ಹೇಗೆ ಬದಲಾಯಿಸುತ್ತದೆ ಎಂಬುವುದರ ಬಗ್ಗೆ ತಿಳಿಯಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಳೆದ ಒಂದು ತಿಂಗಳಿಂದ ನೀವೆಲ್ಲರೂ ಯೋಗಭ್ಯಾಸವನ್ನು ಮಾಡಿದ್ದೀರಿ ನಿಮ್ಮಲ್ಲಿ ಸ್ವಲ್ಪಮಟ್ಟಿಗಾದರೂ ಬದಲಾವಣೆ ಆಗಿದೆ ಎಂದು ಭಾವಿಸಿದ್ದೇನೆ. ಪ್ರತಿನಿತ್ಯವೂ ಯೋಗ ಮಾಡುವುದರ ಮೂಲಕ ಋಣಾತ್ಮಕ ಚಿಂತನೆಯನ್ನು ತೊಳಗಿಸಿ ಧನಾತ್ಮಕ ಚಿಂತನೆಯತ್ತ ಮುಖ ಮಾಡಿ ಎಂದರು.

ಯೋಗಭ್ಯಾಸದ ಕುರಿತು ಅಭಿಪ್ರಾಯ ಹಂಚಿಕೊಂಡ ಕಾರಾಗೃಹದ ವಾಸಿಗಳು ಯೋಗದಿಂದ ನಮ್ಮ ಮನಸ್ಸು ದೇಹ ಸಮ ಸ್ಥಿತಿಯಲ್ಲಿರುತ್ತದೆ. ಧ್ಯಾನದ ಮೂಲಕ ನಮ್ಮ ಮಾನಸಿಕ ಚಿಂತೆಯನ್ನು ದೂರ ಮಾಡಬಹುದು. ಯೋಗವು ಸಕಲ ರೋಗಗಳಿಂದ ಸಂರಕ್ಷಣೆಯ ಮಂತ್ರವಾಗಿದೆ. ಮುಂದಿನ ದಿನಗಳಲ್ಲಿ ಯೋಗವನ್ನು ಚಿಕ್ಕ ವಯಸ್ಸಿನಿಂದ ಅಭ್ಯಾಸ ಮಾಡುವುದು ಉತ್ತಮ. ಹೀಗೆ ಮಾಡಿದರೆ ದೀರ್ಘಾಯುಷಿಯಾಗಿ ಬದುಕಬಹುದು. ಪೂಜೆಗೆ ಒಂದು ದೇವಾಲಯ, ಓದಿಗೊಂದು ಗ್ರಂಥಾಲಯ, ಅದೇ ರೀತಿಯಾಗಿ ಉತ್ತಮ ಆರೋಗ್ಯಕ್ಕಾಗಿ ಒಂದು ಯೋಗಾಲಯವಿರಬೇಕು ಎಂದು ತಿಳಿಸಿದರು.

ಕಳೆದ ಒಂದು ತಿಂಗಳಿಂದ ಕಾರಾಗೃಹದಲ್ಲಿ ಯೋಗ ತರಬೇತಿಯನ್ನು SPYSS ಸಂಸ್ಥೆಯಿಂದ ನೀಡಲಾಗಿತ್ತು. ಸುಮಾರು 300 ಸೆರೆಮನೆ ವಾಸಿಗರು  ಎರಡು ಗಂಟೆಗಳ ಕಾಲ ಯೋಗವನ್ನು ಅಭ್ಯಾಸ ಮಾಡಿದರು. ಚಾಮರಾಜನಗರ ಜಿಲ್ಲಾ ಆಡಳಿತ, ಆಯುಷ್ ಸಂಸ್ಥೆಯ ಸದಸ್ಯರು, ದಸರಾ ಯೋಗ ಉಪಸಮಿತಿಯ ಸದಸ್ಯರು ಎಲ್ಲರೂ ಕೂಡ ಯೋಗ ಮಾಡಿ ಸಿಹಿ ಹಂಚಿ ಯೋಗ ದಸರಾವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಕಾರಾಗೃಹದ ಕಾರ್ಯನಿರ್ವಾಹದ ದಾಮೋದರ್ ,ಯೋಗ ದಸರಾ ಉಪ ಸಮಿತಿಯ ಉಪಾಧ್ಯಕ್ಷರಾದ ಮಹೇಶ್, ಭೂ ದಾಖಲೆಗಳ ಉಪ ನಿರ್ದೇಶಕರಾದ ಕೆ ರಮ್ಯಾ, ಯೋಗ ದಸರಾ ಉಪ ಸಮಿತಿಯ ಕಾರ್ಯಧ್ಯಕ್ಷರಾದ ಡಿ.ಎಮ್ ರಾಣಿ, ಹಾಗೂ ಕಾರ್ಯದರ್ಶಿ ಡಾ.ಪುಷ್ಪಾ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸದಸ್ಯರು, ಯೋಗ ಶಿಕ್ಷಣ ಮತ್ತು ಸಂಶೋಧನೆಯ ಸದಸ್ಯರು, ಮತ್ತು ಯೋಗ ದಸರಾ ಉಪ ಸಮಿತಿಯ ಸದಸ್ಯರು ಹಾಜರಿದ್ದರು.

ಟಾಪ್ ನ್ಯೂಸ್

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

prithvi shaw

Mumbai Cricket: ಸಚಿನ್‌ ತೆಂಡೂಲ್ಕರ್‌ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..

Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.