ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ: ದರ್ಶನಕ್ಕೆ ಹರಿದು ಬರುತ್ತಿರುವ ಜನಸಾಗರ
1 ಲಕ್ಷಕ್ಕೂ ಅಧಿಕ ಮಂದಿ ರಾತ್ರಿ ಉಪಾಹಾರ ಸೇವಿಸಿದ್ದಾರೆ.
Team Udayavani, Oct 20, 2023, 6:16 PM IST
ಕಾಪು: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಉಚ್ಚಿಲ ದಸರಾ 2023ಕ್ಕೆ ಜನಸಾಗರ ಹರಿದು ಬರುತ್ತಿದೆ. ಕಳೆದ ಐದು ದಿನಗಳಲ್ಲಿ ಎರಡು ಲಕ್ಷಕ್ಕೂ ಅಧಿಕ ಮಂದಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು ಇನ್ನುಳಿದ ದಿನಗಳಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಮತ್ತು ಸಂದರ್ಶಕರ ಸಂಖ್ಯೆ ಮತ್ತಷ್ಟು ಹೆಚ್ಚಳಗೊಂಡು ದಾಖಲೆ ಬರೆಯುವ ನಿರೀಕ್ಷೆಯಿದೆ.
ಮೊಗವೀರ ಮಹಾಜನ ಸಂಘದ ವ್ಯಾಪ್ತಿಯ ಉಳ್ಳಾಲದಿಂದ ಶೀರೂರು ವರೆಗಿನ ಮೂರು ಹೋಬಳಿಗಳ ವಿವಿಧ ದೇವಸ್ಥಾನ, ಸಂಘ ಸಂಸ್ಥೆಗಳು, ವಿವಿಧ ಶಾಖೆಗಳ ಪ್ರತಿನಿಧಿಗಳು, ಮಹಿಳಾ ವಿಭಾಗ, ಕಾಪು ನಾಲ್ಕು ಪಟ್ಣ ಮೊಗವೀರ ಮಹಾಸಭಾ ಮತ್ತು ಮೊಗವೀರ ಮಹಿಳಾ ಸಂಘದ ಸದಸ್ಯರ ಸಹಿತ ವಿವಿಧ ಊರುಗಳಿಂದ ಬಂದಿರುವ ಸಾವಿರಾರು ಮಂದಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರೂವಾರಿ ಡಾ| ಜಿ. ಶಂಕರ್, ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್
ಮಾರ್ಗದರ್ಶನದಲ್ಲಿ ಸ್ವಯಂಸೇವಕರ ನಿರ್ವಹಣೆಗಾಗಿ ಸತೀಶ್ ಕುಂದರ್ ಮತ್ತು ಶರಣ್ ಮಟ್ಟು ನೇತೃತ್ವದಲ್ಲಿ 18
ಉಪಸಮಿತಿಗಳನ್ನು ರಚಿಸಲಾಗಿದ್ದು ಪ್ರತೀ ಸಮಿತಿಯ ಸಂಚಾಲಕರು, ಪದಾಧಿಕಾರಿಗಳು ಮತ್ತು ಸದಸ್ಯರು ದಿನದ 24 ಗಂಟೆಯೂ ತಮ್ಮ ಪಾಳಿಗಳಲ್ಲಿ ಬಂದು ಸೇವೆ ಸಲ್ಲಿಸುತ್ತಿದ್ದಾರೆ.
ಅರ್ಚಕರು, ಋತ್ವಿಜರ ಸಹಕಾರ ದೊಂದಿಗೆ ನಿತ್ಯ ಚಂಡಿಕಾ ಹೋಮ, ಅಲಂಕಾರ ಪೂಜೆ, ಕಲ್ಪೋಕ್ತ ಪೂಜೆ, ನವ ದುರ್ಗೆಯರು, ಶಾರದಾ ಮಾತೆಗೆ ನಿತ್ಯ ಪೂಜೆ, ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ ನಡೆಯುತ್ತಿದೆ. ವಿವಿಧ ಭಾಗಗಳ ಮಹಿಳೆ ಯರು ನಿತ್ಯ ಪ್ರಸಾದ ತಯಾರಿಯಲ್ಲಿ ನಿರತ ರಾಗಿದ್ದಾರೆ. ಸ್ವತ್ಛತೆ, ಸರತಿ ಸಾಲಿನಲ್ಲಿ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡುವುದು, ನಾಣ್ಯ ಎಣಿಕೆ ಮೊದಲಾದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ವ್ಯವಸ್ಥೆಗಳ ನಿರ್ವಹಣ ಸಮಿತಿಗಳ ಸದಸ್ಯರು ಅಚ್ಚುಕಟ್ಟಿನ ಸೇವೆ ನೀಡುತ್ತಿದ್ದಾರೆ.
ಮಂಗಳೂರು – ಬಾಕೂìರು ಹೋಬಳಿಯ ವಿವಿಧ ಗ್ರಾಮ ಸಭೆಗಳ 150 ಮಂದಿ ಬಫೆ ಊಟ ನಿರ್ವಹಣೆಗೆ, 50 ಮಂದಿ ಪಂಕ್ತಿ ಊಟದಲ್ಲಿ ಸಹಕರಿಸುತ್ತಿದ್ದಾರೆ. ಐದು ದಿನಗಳಲ್ಲಿ ಸುಮಾರು 75 ಸಾವಿರಕ್ಕೂ ಅಧಿಕ ಮಂದಿ ಭೋಜನ ಪ್ರಸಾದ ಸ್ವೀ ಕರಿಸಿದ್ದು 1 ಲಕ್ಷಕ್ಕೂ ಅಧಿಕ ಮಂದಿ ರಾತ್ರಿ ಉಪಾಹಾರ ಸೇವಿಸಿದ್ದಾರೆ.
ಅನ್ನಸಂತರ್ಪಣೆಯಲ್ಲಿ ಹೋಳಿಗೆ, ಮೋಹನ್ ಲಡ್ಡು, ರವಾ ಲಡ್ಡು, ಜಿಲೇಬಿ, ಕೊಕೋ ಬರ್ಫಿ, ಸಾಟ್, ಪಂಚರತ್ನ ಕಡಿ, ಗೋಧಿ ಕಡಿ ಸಹಿತ ವಿವಿಧ ಭಕ್ಷ್ಯಗಳನ್ನು ಉಣಬಡಿಸಲಾಗುತ್ತಿದೆ. ಮಹಾಚಂಡಿಕಾ ಯಾಗದಂದು ಭುವನೇಂದ್ರ ಕಿದಿಯೂರು ಅವರ ಸೇವಾರ್ಥ ಹಾಲು ಪಾಯಸ ಸೇವೆ ನಡೆಯಲಿದೆ.
ಪಾಲ್ಗೊಳ್ಳುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿವಿಧ ಕಾರ್ಯಕ್ರಮ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ನಡೆಯುತ್ತಿವೆ. ಅನ್ನ ಸಂತರ್ಪಣೆ, ಉಪಾಹಾರ ವಿತರಣೆಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿವಿಧ ಸೌಕರ್ಯ, ಸೌಲಭ್ಯಗಳನ್ನು ಜೋಡಿಸಲಾಗಿದ್ದು ಯಾವುದೇ ರೀತಿಯಲ್ಲೂ ಕುಂದಾಗದಂತೆ ಮೊಗವೀರ
ಮಹಾಜನ ಸಂಘ, ಕ್ಷೇತ್ರಾಡಳಿತ ಸಮಿತಿ, ಸ್ವಯಂಸೇವಕರ ತಂಡ ಉತ್ಸಾಹದಿಂದ ಕೆಲಸ ಮಾಡುತ್ತಿದೆ ಎನ್ನುತ್ತಾರೆ ರೂವಾರಿ
ಡಾ| ಜಿ. ಶಂಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.