World Cup; ರಾಹುಲ್ ಒತ್ತಾಸೆಯಿಂದ ಕೊಹ್ಲಿ ಶತಕ: ತ್ಯಾಗಕ್ಕೆ ಸಿದ್ಧರಾಗಿದ್ದರು!
Team Udayavani, Oct 20, 2023, 11:01 PM IST
ಪುಣೆ: ವಿರಾಟ್ ಕೊಹ್ಲಿ ಶತಕದ ಬಯಕೆ ಹೊಂದಿರಲಿಲ್ಲ. ಸೆಂಚುರಿ ತ್ಯಾಗಕ್ಕೆ ಅವರು ಸಿದ್ಧರಾಗಿದ್ದರು. ಆದರೆ ನಾನೇ ಅವರಿಗೆ ಒತ್ತಾಯಿಸಿದೆ. ಶತಕ ಬರುವುದಿದ್ದರೆ ಬಂದೇ ಬಿಡಲಿ ಎಂದು ಒಂಟಿ ರನ್ ನಿರಾಕರಿಸಿದೆ’ ಎಂಬುದಾಗಿ ಕೆ.ಎಲ್. ರಾಹುಲ್ ಹೇಳಿದ್ದಾರೆ. ಬಾಂಗ್ಲಾದೇಶ ವಿರುದ್ಧ ಸಾಧಿಸಿದ ಗೆಲುವಿನ ಬಳಿಕ ಅವರು ಮಾಧ್ಯಮದವರಲ್ಲಿ ಮಾತಾಡುತ್ತಿದ್ದರು.
“ಕೊಹ್ಲಿ ಬಹಳ ಗೊಂದಲದಲ್ಲಿದ್ದರು. ಕೊನೆಯ 3-4 ಓವರ್‌ಗಳಲ್ಲಿ ಸಿಂಗಲ್ ರನ್ ನಿರಾಕರಿಸುವುದು ಸರಿಯಲ್ಲ ಎಂಬುದು ಅವರ ಭಾವನೆಯಾಗಿತ್ತು. ತಾನು ವೈಯಕ್ತಿಕ ಮೈಲುಗಲ್ಲು ನೆಡಲೆಂದೇ ಹೀಗೆ ಮಾಡುತ್ತಿದ್ದೇನೆ ಎಂದು ಜನರು ಆಡಿಕೊಳ್ಳುವ ಅಪಾಯವಿತ್ತು ಎಂದು ಅವರು ಭಾವಿಸಿದ್ದರು. ಆದರೆ ಈ ಸಂದರ್ಭದಲ್ಲಿ ನಾನೇ ಅವರನ್ನು ಒಪ್ಪಿಸಿ ಶತಕ ಪೂರ್ತಿಗೊಳಿಸುವಂತೆ ಹೇಳಿದೆ. ಈ ಪಂದ್ಯದಲ್ಲಿ ನಾವು ಸುಲಭ ಜಯ ಸಾಧಿಸುವ ಹಾದಿಯಲ್ಲಿದ್ದೆವು. ಹೀಗಾಗಿ ನೀವು ಶತಕಕ್ಕೆ ಪ್ರಯತ್ನಿಸಿ ಎಂದು ಹೇಳಿದೆ’ ಎಂಬುದಾಗಿ ರಾಹುಲ್ ಪಂದ್ಯದ ಕೊನೆಯ ಹಂತವನ್ನು ತೆರೆದಿರಿಸಿದರು.
ಅಂತಿಮವಾಗಿ ನಾಸುಮ್ ಅಹ್ಮದ್ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದ ವಿರಾಟ್ ಕೊಹ್ಲಿ, ತಂಡದ ಗೆಲುವು ಹಾಗೂ ತಮ್ಮ 48ನೇ ಏಕದಿನ ಸೆಂಚುರಿಯನ್ನು ಒಟ್ಟಿಗೇ ಸಾರಿದರು. ಇನ್ನೊಂದು ಶತಕ ಬಾರಿಸಿದರೆ ಸಚಿನ್ ತೆಂಡುಲ್ಕರ್ ಅವರ ವಿಶ್ವದಾಖಲೆಯನ್ನು ಸರಿದೂಗಿಸಲಿದ್ದಾರೆ. ಅನಂತರದ್ದು 50ನೇ ಶತಕ ಸಂಭ್ರಮದ ಅಸಾಮಾನ್ಯ ಸಾಧನೆ. ಈ ವಿಶ್ವಕಪ್‌ನಲ್ಲೇ ಇದಕ್ಕೆ ಕಾಲ ಕೂಡಿಬರಬಹುದು.
3ನೇ ವಿಶ್ವಕಪ್ ಸೆಂಚುರಿ
ಇದು ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ 3ನೇ ಸೆಂಚುರಿ. ಚೇಸಿಂಗ್ ವೇಳೆ ಮೊದಲನೆಯದು. ವಿಶ್ವಕಪ್‌ನಲ್ಲಿ ಅತ್ಯಧಿಕ 7 ಶತಕ ಬಾರಿಸಿದ ಭಾರತೀಯ ದಾಖಲೆ ರೋಹಿತ್ ಶರ್ಮ ಹೆಸರಲ್ಲಿದೆ. ಸಚಿನ್ ತೆಂಡುಲ್ಕರ್ 6, ಸೌರವ್ ಗಂಗೂಲಿ 4, ಶಿಖರ್ ಧವನ್ 3 ಶತಕ ಹೊಡೆದಿದ್ದಾರೆ.
ಇದರೊಂದಿಗೆ ವಿರಾಟ್ ಕೊಹ್ಲಿ 5 ಏಕದಿನ ತಾಣಗಳಲ್ಲಿ 500 ರನ್ ಪೂರ್ತಿಗೊಳಿಸಿದರು. ಅವರು ಪುಣೆಯಲ್ಲಿ ಈ ಸಾಧನೆಗೈದ ಭಾರತದ ಮೊದಲ ಆಟಗಾರ. ಉಳಿದಂತೆ ಢಾಕಾದಲ್ಲಿ 800 ರನ್, ಕೊಂಬೊದಲ್ಲಿ 644 ರನ್, ವಿಶಾಖಪಟ್ಟಣದಲ್ಲಿ 587 ರನ್, ಪೋರ್ಟ್ ಆಫ್ ಸ್ಪೇನ್‌ನಲ್ಲಿ 571 ರನ್ ಬಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.