ಶಾರುಖ್‌,ರಜಿನಿ ದಾಖಲೆ ಬ್ರೇಕ್‌ ಮಾಡಿದ ʼLEOʼ: ಅತೀ ಹೆಚ್ಚು ಗಳಿಕೆಯಲ್ಲಿ ದಳಪತಿಯೇ ಮುಂದೆ  


Team Udayavani, Oct 21, 2023, 9:49 AM IST

TDY-2

ಚೆನ್ನೈ: ದಳಪತಿ ವಿಜಯ್‌ ಅವರ ʼಲಿಯೋʼ ಸಿನಿಮಾ ಅಂದುಕೊಂಡ ಹಾಗೆ ದೊಡ್ಡಮಟ್ಟದ ಓಪನಿಂಗ್‌ ಪಡೆದುಕೊಂಡಿದೆ. ಬಾಕ್ಸ್‌ ಆಫೀಸ್‌ ಗಳಕೆಯಲ್ಲಿ ಸಿನಿಮಾ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ.

ವರ್ಲ್ಡ್‌ ವೈಡ್‌ ʼಲಿಯೋದಾಸ್‌ʼ ಅಬ್ಬರಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ಸಿಕ್ಕಿದೆ. ಮೊದಲ ದಿನ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ʼಲಿಯೋʼ 68 ಕೋಟಿ ರೂ.ಗಳಿಕೆ ಕಂಡಿತ್ತು. ವರ್ಲ್ಡ್‌ ವೈಡ್‌  148.5 ಕೋಟಿ ರೂ. ಗಳಕೆ ಕಂಡಿತ್ತು. ಇದು ಭಾರತೀಯ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದಿದೆ.

‘ಲಿಯೋ’ ಕಲೆಕ್ಷನ್‌ ಬಗ್ಗೆ ʼಇಂಡಿಯಾ ಟುಡೇʼ ಜೊತೆ ಮಾತನಾಡಿದ ಟ್ರೇಡ್ ಎಕ್ಸ್‌ಪರ್ಟ್ ರಮೇಶ್ ಬಾಲ ರಮೇಶ್‌ ಬಾಲ, “ದಸರಾ ರಜಾ ಸಮಯದ ವೇಳೆ ʼಲಿಯೋʼ ಸಿನಿಮಾಕ್ಕೆ  ಪ್ರಯೋಜನವಾಗಲಿದೆ. ತಮಿಳು ಸಿನಿಮಾರಂಗದಲ್ಲಿ ʼಲಿಯೋʼ ದೊಡ್ಡ ಓಪನಿಂಗ್‌ ಪಡೆದುಕೊಂಡಿದೆ. ‘ಜೈಲರ್’ ಮತ್ತು ‘ಪೊನ್ನಿಯಿನ್ ಸೆಲ್ವನ್’ ಚಿತ್ರಗಳಿಗಿಂತ ‘ಲಿಯೋ’ ಉತ್ತಮ ಪ್ರದರ್ಶನ ನೀಡಿದೆ. ಗ್ಲೋಬಲ್‌ ಮಾರ್ಕೆಟ್‌ ನಿಂದಾಗಿ ದೊಡ್ಡ ಓಪನಿಂಗ್‌ ಪಡೆಯಲು ಕಾರಣವಾಗಿದೆ. ತಮಿಳುನಾಡಿನಲ್ಲಿ ʼಲಿಯೋʼ ದಾಖಲೆ ಬರೆಯಲು ಸಾಧ್ಯವಾಗಿಲ್ಲ. ಏಕೆಂದರೆ ಅಲ್ಲಿ ಮುಂಜಾನೆ 4 ಹಾಗೂ 7 ಗಂಟೆಯ ಶೋಗಳಿರಲಿಲ್ಲ. ಆದರೆ, ಕರ್ನಾಟಕ ಮತ್ತು ಕೇರಳದಂತಹ ಇತರ ಸ್ಥಳಗಳಲ್ಲಿ ಮಾರ್ನಿಂಗ್‌ ಶೋಗಳಿತ್ತು, ಪ್ರಿಮಿಯರ್‌ ಶೋಗಳಿತ್ತು. ಇದು ಚಿತ್ರಕ್ಕೆ ಪ್ಲಸ್‌ ಆಯಿತು. ವಿದೇಶದ ಮಾರ್ಕೆಟ್‌ ನಲ್ಲಿ ಮೊದಲೇ ಸಿನಿಮಾದ ಪ್ರಚಾರ ಆರಂಭಿಸಲಾಗಿತ್ತು. ಇದರಿಂದ ವಿದೇಶದಲ್ಲಿ ಟಿಕೆಟ್‌ ಬುಕ್‌ ಮಾಡಲು ತುಂಬಾ ಸಮಯ ಸಿಕ್ಕಿತ್ತು” ಎಂದಿದ್ದಾರೆ.

ಮೊದಲ ದಿನ ವರ್ಲ್ಡ್‌ ವೈಡ್‌ ಸೇರಿ 130 ಕೋಟಿಗೂ ಅಧಿಕ ಕಲೆಕ್ಷನ್‌  ಮಾಡಿದೆ. ಇದೊಂದು ಬಿಗೆಸ್ಟ್‌ ವರ್ಲ್ಡ್‌ ವೈಡ್‌ ಕಲೆಕ್ಷನ್‌ ಆಗಿದೆ. ಈ ಹಿಂದೆ ರಜಿನಿಕಾಂತ್‌ ಅವರ ʼ2.0ʼ ಸಿನಿಮಾ ವರ್ಲ್ಡ್‌ ವೈಡ್‌ ನಲ್ಲಿ  ಮೊದಲ ದಿನವೇ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾವಿತ್ತು. ಈ ದಾಖಲೆಯನ್ನು ಈಗ ʼಲಿಯೋʼ ಮೀರಿಸಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ ‘ಲಿಯೋ’ ವಿಶ್ವಾದ್ಯಂತ 148.5 ಕೋಟಿ ರೂಪಾಯಿಗಳನ್ನು ಗಳಿಸಿದೆ, ಇದು ಯಾವುದೇ ಭಾರತೀಯ ಚಿತ್ರಕ್ಕೆ ವಿಶ್ವದಾದ್ಯಂತ ಆದ ಅತೀ ಹೆಚ್ಚು ಕಲೆಕ್ಷನ್‌ ಆಗಿದೆ. ಆ ಮೂಲಕ ʼಜವಾನ್‌ʼ ಸಿನಿಮಾದ ದಾಖಲೆಯನ್ನೂ ʼಲಿಯೋʼ ಬ್ರೇಕ್‌ ಮಾಡಿದೆ.

ದಳಪತಿ ವಿಜಯ್‌ ಹಾಗೂ ಕನಕರಾಜ್‌ ಅವರಿಗೆ ʼಲಿಯೋʼ ಅತೀ ಹೆಚ್ಚು ಗಳಿಕೆ ತಂದುಕೊಡುತ್ತದೆಯೋ ಎನ್ನುವುದರ ಬಗ್ಗೆ ಕಾದು ನೋಡಬೇಕಿದೆ. ವಿಜಯ್‌ ಅವರಿಗೆ ʼವಾರಿಸುʼ ಸಿನಿಮಾ ಅತೀ ಹೆಚ್ಚು ಗಳಿಕೆ ತಂದುಕೊಟ್ಟಿದ್ದು, ಲೋಕೇಶ್‌ ಅವರಿಗೆ ʼವಿಕ್ರಮ್‌ʼ ಸಿನಿಮಾ ಅತೀ ಹೆಚ್ಚು ಗಳಿಕೆ ತಂದುಕೊಟ್ಟ ಸಿನಿಮಾವಾಗಿದೆ. ʼಲಿಯೋʼ 400 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದರೆ ಇಬ್ಬರಿಗೂ ಸಾರ್ವಕಾಲಿಕ ಗಳಿಕೆ ತಂದುಕೊಟ್ಟ ಸಿನಿಮಾವಾಗುತ್ತದೆ. ಯಾವುದಕ್ಕೂ ಈ ಕೆಲ ದಿನಗಳವರೆಗೆ ಕಾದುನೋಡಬೇಕಿದೆ.

 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಪಿಕ್ಸ್

Kantara Chapter 1: ರಿಷಬ್‌ ಶೆಟ್ಟಿ ʼಕಾಂತಾರ ಚಾಪ್ಟರ್‌ -1ʼ ರಿಲೀಸ್ ಗೆ ಡೇಟ್‌ ಫಿಕ್ಸ್

1-wewrewre

The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ

Aishwarya Rai  ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್‌

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.