CWC 2023; ಈ ಆಟಗಾರನನ್ನು ಹೊರಗಿಟ್ಟು ಶಮಿಯನ್ನು ಆಡಿಸಿ: ತಂಡಕ್ಕೆ ಹರ್ಭಜನ್ ಸಲಹೆ
Team Udayavani, Oct 21, 2023, 4:54 PM IST
ಧರ್ಮಶಾಲಾ: ಟೀಮ್ ಇಂಡಿಯಾ ವಿಶ್ವಕಪ್ 2023ರ ತನ್ನ ಹಿಂದಿನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಉಪನಾಯಕ ಹಾರ್ದಿಕ್ ಪಾಂಡ್ಯ ಪಾದದ ಗಾಯಕ್ಕೆ ಒಳಗಾಗಿದ್ದರಿಂದ ದೊಡ್ಡ ಹೊಡೆತವನ್ನು ಅನುಭವಿಸಿತು. ಸ್ಟಾರ್ ಆಲ್‌ರೌಂಡರ್ ಪಿಚ್ ನಿಂದ ಕುಂಟಿಗೊಂದು ಮೈದಾನದಿಂದ ಹೊರನಡೆದರು. ಅಕ್ಟೋಬರ್ 22 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಭಾರತದ ಮುಂದಿನ ಪಂದ್ಯದಿಂದ ಹಾರ್ದಿಕ್ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಶುಕ್ರವಾರ ಪ್ರಕಟಿಸಿದೆ.
ಹಾರ್ದಿಕ್ ಅನುಪಸ್ಥಿತಿಯು ಇದೀಗ ತಂಡದ ಮ್ಯಾನೇಜ್ ಮೆಂಟನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಿವೀಸ್ ವಿರುದ್ಧದ ಪ್ರಮುಖ ಪಂದ್ಯದಲ್ಲಿ ತಂಡದ ಪ್ಲೇಯಿಂಗ್ ಇಲೆವೆನ್ ಸಂಯೋಜನೆ ಮಾಡುವುದೇ ಕಷ್ಟವಾಗಿದೆ.
ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಆತಿಥೇಯರಿಗೆ ಸಲಹೆ ನೀಡಿದ್ದು, ರೋಹಿತ್ ಶರ್ಮಾ ನೇತೃತ್ವದ ತಂಡವು ಶಾರ್ದೂಲ್ ಠಾಕೂರ್ ಮತ್ತು ರವಿಚಂದ್ರನ್ ಅಶ್ವಿನ್ ಬದಲಿಗೆ ಮೊಹಮ್ಮದ್ ಶಮಿ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಸೇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
“ಹಾರ್ದಿಕ್ ಪಾಂಡ್ಯ ಫಿಟ್ ಆಗದಿದ್ದರೆ ಅದು ಭಾರತಕ್ಕೆ ದೊಡ್ಡ ಸಮಸ್ಯೆ, ಅವರು ಒಂದು ಸಂಯೋಜನೆಯನ್ನು ಒದಗಿಸುತ್ತಾರೆ. ಅವರು ಆಡದಿದ್ದರೆ ನೀವು ಆ ಕಾಂಬಿನೇಶನ್ ಬದಲಾಯಿಸಬೇಕಾಗುತ್ತದೆ. ನೀವು ಇಶಾನ್ ಕಿಶನ್ ಅಥವಾ ಸೂರ್ಯಕುಮಾರ್ ಯಾದವ್ ಅವರನ್ನು ಪೂರ್ಣ ಬ್ಯಾಟರ್ ಆಗಿ ಆಡಿಸಬಹುದು. ಶಾರ್ದೂಲ್ ಠಾಕೂರ್ ಅವರ ಆಲ್‌ರೌಂಡರ್ ಸಾಮರ್ಥ್ಯದ ಕಾರಣ ಅವರನ್ನು ಆಡುತ್ತಿದ್ದೇವೆ. ನೀವು ಅವರ ಸ್ಥಾನಕ್ಕೆ ಮೊಹಮ್ಮದ್ ಶಮಿಯನ್ನು ಕರೆತರಬೇಕು ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಅವರು ನಿಮಗೆ 10 ಓವರ್‌ಗಳನ್ನು ನೀಡಬಲ್ಲರು” ಎಂದು ಹರ್ಭಜನ್ ತಿಳಿಸಿದರು.
ಶಮಿ ಮತ್ತು ಸೂರ್ಯ ಇಬ್ಬರೂ ಈ ವಿಶ್ವಕಪ್ ನಲ್ಲಿ ಇನ್ನೂ ಆಡುವ ಅವಕಾಶ ಪಡೆದಿಲ್ಲ. ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧ ಭಾರತದ ಆರಂಭಿಕ ಪಂದ್ಯದಲ್ಲಿ ಆಡಿದ್ದಾರೆ. ಠಾಕೂರ್ ಅವರು ಮೂರು ಪಂದ್ಯಗಳಲ್ಲಿ ಆಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.