Byadgi: ವಿದ್ಯಾವಂತ ಯುವಕರು ಸ್ವ ಉದ್ಯೋಗಕ್ಕೆ ಮುಂದಾಗಲಿ-ಮಂಜುಳಾ ಜಯಪ್ಪ
ಪ್ರಯತ್ನಗಳು ಎಂದಿಗೂ ವಿಫಲವಾಗುವುದಿಲ್ಲ ನಂಬಿಕೆ ನಮ್ಮಲ್ಲಿರಬೇಕು
Team Udayavani, Oct 21, 2023, 6:03 PM IST
ಬ್ಯಾಡಗಿ: ವಿದ್ಯಾವಂತ ಯುವಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದರಿಂದ ಉದ್ಯೋಗಾವಕಾಶಗಳು ವಿರಳವಾಗಿವೆ. ಸರ್ಕಾರಿ ಉದ್ಯೋಗದ ವ್ಯಾಮೋಹಕ್ಕೆ ಬಿದ್ದಿರುವ ಬಹುತೇಕ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದಾರೆ. ಆದರೆ,
ವಿಶ್ವದ ನಂ.1 ಶ್ರೀಮಂತರೆಲ್ಲರೂ ತಮ್ಮ ವೃತ್ತಿ ಜೀವನದಲ್ಲಿ ಒಂದಿಲ್ಲೊಂದು ಸ್ವಯಂ ಉದ್ಯೋಗ ಆರಂಭಿಸಿಯೇ ಆರ್ಥಿಕ ಪ್ರಗತಿ ಸಾ ಧಿಸಿದ್ದಾರೆ. ಇನ್ನಾದರೂ ದೇಶದ ಯುವಕರು ಯಾವುದಾದರೊಂದು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳುವಂತೆ ಬ್ಯಾಂಕ್ ಆಫ್ ಬರೋಡಾ ತರಬೇತಿ ಕೇಂದ್ರದ ಜಿಲ್ಲಾ ಸಂಘಟಕಿ ಮಂಜುಳಾ ಜಯಪ್ಪ ಕರೆ ನೀಡಿದರು.
ಪಟ್ಟಣದ ಸ್ನೇಹ ಸದನ ಟ್ರಸ್ಟ್, ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸ್ವಯಂ ಉದ್ಯೋಗದ ಕುರಿತು ಯುವಕರಿಗೆ ಏರ್ಪಡಿಸಿದ್ದ ವಿವಿಧ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಯಾವುದೇ ಶಿಕ್ಷಣ ಸಂಸ್ಥೆಗಳು ಉದ್ಯೋಗ ನೀಡುವ ಭರವಸೆ ಮೇಲೆ ಶಿಕ್ಷಣ ನೀಡುತ್ತಿರುವ ಉದಾಹರಣೆಗಳಿಲ್ಲ. ವಿದ್ಯೆ ಕೊಟ್ಟವರು ಉದ್ಯೋಗ ಕೊಡಬೇಕೆಂಬ ನಿಯಮಗಳಿಲ್ಲ. ಶಿಕ್ಷಣವಂತರನ್ನಾಗಿಸುವುದಷ್ಟೇ ಸರ್ಕಾರದ ಕೆಲಸ. ಸ್ನಾತಕೋತ್ತರ ಪದವೀಧರರಿಗೂ ಉದ್ಯೋಗ ನೀಡಲು ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಿಂದ ಸಾಧ್ಯವಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಶೈಕ್ಷಣಿಕ ಅರ್ಹತೆ ಹೊಂದಿರುವವರು ಸ್ವಯಂ ಉದ್ಯೋಗದ ಬಗ್ಗೆ ಯೋಚಿಸುವಂತೆ ಸಲಹೆ ನೀಡಿದರು. ಬ್ಯಾಂಕ್‌ಗಳ ಹಣಕಾಸಿನ ಬೆಂಬಲದೊಂದಿಗೆ ಗ್ರಾಮೀಣ ಪ್ರದೇಶದಲ್ಲಿನ ಸ್ವ-ಸಹಾಯ ಗುಂಪುಗಳು ಇಂದು ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿವೆ. ಇಂತಹ ಹತ್ತು ಹಲವು ಕ್ಷೇತ್ರಗಳಲ್ಲಿ ಬ್ಯಾಂಕ್‌ಗಳ ಸಹಕಾರದೊಂದಿಗೆ ವೇಗವಾಗಿ ಪ್ರಗತಿ ಕಾಣುತ್ತಿದ್ದೇವೆ. ವಿದ್ಯಾವಂತ ಯುವಕರಿಗೆ ಉದ್ಯಮಗಳನ್ನು ಆರಂಭಿಸಲು ಬ್ಯಾಂಕ್ ಗಳು ಸಾಲ ಸೌಲಭ್ಯಗಳನ್ನು ಆರಂಭಿಸಿದ್ದು, ಅವುಗಳ ಪ್ರಯೋಜನ ಪಡೆದುಕೊಳ್ಳು ವಂತೆ ಮನವಿ ಮಾಡಿದರು.
ಸ್ವಯಂ ಉದ್ಯೋಗ ಯುವಕರ ಶೈಕ್ಷಣಿಕ ಅರ್ಹತೆಗೆ ತಕ್ಕ ಉದ್ಯೋಗ ನೀಡದಿರ ಬಹುದು. ಆದರೆ ನಿರುದ್ಯೋಗಿಗಳು ಕೆಲಸವಿಲ್ಲದೇ ಬೇಸರಗೊಳ್ಳದೇ ಉದ್ಯಮಿಗಳಾಗುವತ್ತ ಯೋಚಿಸಬೇಕು. ಆರಂಭಿಕ ಹಂತದಲ್ಲಿ ಕೆಲವು ಸಮಸ್ಯೆಗಳಿರಬಹುದು. ಅದನ್ನು ಕ್ರಮೇಣ ನಿವಾರಿಸಿಕೊಳ್ಳಬೇಕು. ವ್ಯಾಪಾರ, ವಹಿವಾಟಿನಿಂದ ಬದಲಾದ ಯಶಸ್ವಿ ಉದ್ಯಮಿಗಳಿಗೇನು ಕೊರತೆಯಿಲ್ಲ. ಆದರೆ ನಾವು ಮಾಡುವ ಪ್ರಯತ್ನಗಳು ಎಂದಿಗೂ ವಿಫಲವಾಗುವುದಿಲ್ಲ ನಂಬಿಕೆ ನಮ್ಮಲ್ಲಿರಬೇಕು ಎಂದರು.
ಯಾರಿಗೂ ಹೊರೆಯಾಗದಂತೆ 30 ಸಾವಿರ ರೂ. ಒಳಗೆ ಮಾಡಬಹುದಾದ ಕೃಷಿ, ಹೈನುಗಾರಿಕೆ, ಎಲೆಕ್ಟ್ರಿಷಿಯನ್, ಮತ್ಸ್ಯೋ ದ್ಯಮ, ಜೇನು ಸಾಕಾಣಿಕೆ, ಗುಡಿ ಕೈಗಾರಿಕೆ ಇನ್ನಿತರ ಸ್ವಯಂ ಉದ್ಯೋಗಗಳ ಕುರಿತು ತರಬೇತಿ ನೀಡಿದ ಅವರು, ಆಸಕ್ತ ಯುವಕರು ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕಿ ರೂಪಾ, ನಿರ್ದೇಶಕ ಗ್ಲೋರಿಯಾ ತೆರೆಸಿಟಾ, ಆರೋಗ್ಯ ವಿಭಾಗದ ಸಂಯೋಜಕರಾದ ಅಚಲಾ ಯುವಕಲರಾದ, ಫಕ್ಕೀರಪ್ಪ ಮಾಳಪ್ಪನವರ, ಸೋಮೇಶ ನಾಯಕ, ಮಹಾಂತೇಶ ಕಳಕ್ಕನವರ, ಸಂಯೋಜಕರಾದ ಈರಣ್ಣ ಮಾಸಣಗಿ, ಎಲ್.ಶಿವಪ್ಪ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 42 ಯುವಕರು ಉಪಸ್ಥಿತರಿದ್ದರು. ಕುಟೀರದ ಮಕ್ಕಳು ಪ್ರಾರ್ಥನೆ ಸಲ್ಲಿಸಿದರು. ಸಂಯೋಜಕಿ ಸುವರ್ಣಾ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Deepika Das: ನಟಿ ದೀಪಿಕಾ ದಾಸ್ ಕುಟುಂಬಕ್ಕೆ ಬೆದರಿಕೆ ಕರೆ; ಯುವಕನ ವಿರುದ್ಧ ದೂರು
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.