Bahrain; “ಎಲ್ಲಾದರೂ ಇರು ಎಂತಾದರೂ ಇರು”: ಅ 27ಕ್ಕೆ ಕನ್ನಡ ಕಿರು ಚಿತ್ರ ತೆರೆಗೆ

ಬಹರೇನ್ ನಲ್ಲಿ ಕನ್ನಡಿಗನೊಬ್ಬನ ಸಾಧನೆ

Team Udayavani, Oct 21, 2023, 7:25 PM IST

1-sdsadsa

ಬಹರೇನ್ : ಸಂಪೂರ್ಣವಾಗಿ ಬಹರೇನ್ ದ್ವೀಪರಾಷ್ಟ್ರದಲ್ಲಿ ಚಿತ್ರೀಕರಣಗೊಂಡಿರುವ ಕಿರು ಚಲನ ಚಿತ್ರ “ಎಲ್ಲಾದರೂ ಇರು ಎಂತಾದರೂ ಇರು ” ಅಕ್ಟೋಬರ್ 27ರಂದು ತೆರೆಗೆ ಬರಲಿದೆ.

ಕನ್ನಡಿಗ ಚರಣ್ ಅಕ್ಷಯ್ ರವರು ಸಾಹಸಕ್ಕೆ ಕೈ ಹಾಕಿದ್ದು, ಚಿತ್ರವು ಅಕ್ಟೋಬರ್ 27ರಂದು ಇಲ್ಲಿನ ಮನಾಮದಲ್ಲಿರುವ ಅಲ್ ಹಮ್ರಾ ಚಿತ್ರ ಮಂದಿರದಲ್ಲಿ ಮಧ್ಯಾಹ್ನ 2.30ಕ್ಕೆ ಪ್ರೀಮಿಯರ್ ಪ್ರದರ್ಶನ ಕಾಣಲಿದೆ. ಸ್ನೇಹಿತರ ಗಾಢ ಸ್ನೇಹದ ಜೊತೆಗೆ ಕನ್ನಡ ನಾಡು,ನುಡಿಯ ಬಗ್ಗೆ ಇರುವ ಕಾಳಜಿಯ ಎಳೆಯೊಂದನ್ನು ಇಟ್ಟುಕೊಂಡು ಮಾಡಿರುವ ಚಿತ್ರವನ್ನು ಚರಣ್ ಅಕ್ಷಯ್ ರವರು ನಿರ್ಮಿಸಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಭಿಷೇಕ್ ಕಲ್ಲಡ್ಕ,ಸಂಪತ್ ಜತ್ತನ್ನ ,ಪುಷ್ಪರಾಜ್ ಶೆಟ್ಟಿ ,ವಿಶಾಲ್ ಶೆಟ್ಟಿ , ಖುಷಿ ,ಸುಹಾನಿ ,ಸುಜಯ ಲಕ್ಷ್ಮೀಶ್,ಫೆರಿಲ್ ರೊಡ್ರಿಗಸ್ ಮುಖ್ಯ ತಾರಾಗಣದಲ್ಲಿದ್ದು ಉಳಿದಂತೆ ಇದರಲ್ಲಿ ದ್ವೀಪದ ಕಲಾವಿದರೇ ಕಾಣಿಸಿಕೊಂಡಿದ್ದಾರೆ.

ಈ ಚಿತ್ರವನ್ನು “ಕ್ಷಮಿಸು ನಿಮ್ಮ ಖಾತೆಯಲ್ಲಿ ಹಣವಿಲ್ಲ ” ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗದಲ್ಲಿ ಭರವಸೆ ಮೂಡಿಸರುವ ಯುವ ನಿರ್ದೇಶಕ ವಿನಾಯಕ ಗೋಡ್ಸೆರೆ ನಿರ್ದೇಶನ ಮಾಡಿದ್ದು ,ಖ್ಯಾತ ಛಾಯಾಗ್ರಾಹಕ ವಿನೀತ್ ಸುವರ್ಣ ರವರು ಬಹರೇನ್ ದ್ವೀಪದ ಸುಂದರ ತಾಣಗಳನ್ನು ತಮ್ಮ ಕೆಮರಾ ಕಣ್ಣುಗಳಿಂದ ಸೆರೆಹಿಡಿದಿದ್ದಾರೆ.

“ಸರ್ಕಸ್ “, “ಗಿರ್ಗಿಟ್ ” ಚಿತ್ರಗಳ ಖ್ಯಾತಿಯ ಸಂಕಲನಕಾರ ರಾಹುಲ್ ಅವರ ಸಂಕಲನ ಈ ಚಿತ್ರಕ್ಕಿದೆ .ನಿರ್ಮಾಣದ ಮೇಲ್ವಿಚಾರಕರಾಗಿ ಪ್ರಕಾಶ್ ಹಾಗು ಕಿರಣ್ ಸುವರ್ಣ ರವರು ಕಾರ್ಯನಿರ್ವಹಿಸಿದ್ದಾರೆ . ಚಿತ್ರದಲ್ಲಿ ಕನ್ನಡ ಹಿರಿಮೆ ಗರಿಮೆಗಳನ್ನು ಸಾರುವ ಒಂದು ಹಾಡು ಅದ್ಭುತವಾಗಿ ಮೂಡಿಬಂದಿದ್ದು ಇದನ್ನು ಖ್ಯಾತ ಹಿನ್ನೆಲೆ ಗಾಯಕ ಕೀರ್ತನ್ ಹೊಳ್ಳರವರು ಹಾಡಿದ್ದಾರೆ ,ರೋಹಿತ್ ಪೂಜಾರಿಯವರ ಸಂಗೀತ ಈ ಚಿತ್ರಕ್ಕಿದೆ.

ಈ ಚಿತ್ರವು ಗುಣಮಟ್ಟದಲ್ಲಿ ಯಾವುದೇ ರಾಜಿಮಾಡಿಕೊಳ್ಳದೆ ವೃತ್ತಿಪರ ತಂತ್ರಜ್ಞರು ದ್ವೀಪದಲ್ಲಿ ಮಾಡಿರುವ ಪ್ರಪ್ರಥಮ ಕನ್ನಡ ಚಲನಚಿತ್ರ ವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ . ಈ ಚಿತ್ರದ ಬಗ್ಗೆ ಈಗಾಗಲೇ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದು ಚಿತ್ರದ ಯಶಸ್ಸಿಗೆ ಕನ್ನಡ ಚಲನಚಿತ್ರರಂಗದ ನಟ ,ನಟಿಯರು ,ಗಾಯಕ ಗಾಯಕಿಯರು ,ಸಂಗೀತ ನಿರ್ದೇಶಕರು ಶುಭ ಹಾರೈಸಿದ್ದಾರೆ . 435 ಆಸನಗಳಿರುವ “ಮನಮಾ”ದಲ್ಲಿರುವ ಬ್ರಹತ್ ಚಿತ್ರ ಮಂದಿರದಲ್ಲಿ ಈ ಚಿತ್ರ ತೆರೆಕಾಣಲಿದ್ದು ಪ್ರೀಮಿಯರ್ ಪ್ರದರ್ಶನದ ಬಹುತೇಕ ಟಿಕೇಟುಗಳು ಇದಾಗಲೇ ಮುಂಗಡವಾಗಿ ಮಾರಾಟವಾಗಿದೆ . ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಚಿತ್ರ ನಿರ್ಮಾಪಕ ಚರಣ್ ಅಕ್ಷಯ್ ರವರನ್ನು ದೂರವಾಣಿ ಸಂಖ್ಯೆ 00973 38006315 ಮೂಲಕ ಸಂಪರ್ಕಿಸಬಹುದು.

ವರದಿ: ಕಮಲಾಕ್ಷ ಅಮೀನ್

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.