Raj Sounds and Lights ತಂಡದ ಹೊಸ ಸಿನಿಮಾ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ಗೆ ಮುಹೂರ್ತ
Team Udayavani, Oct 22, 2023, 5:09 PM IST
ಮಂಗಳೂರು: ವೈಭವ್ ಫ್ಲಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರ ತಂಡದ ಹೊಸ ಸಿನಿಮಾದ ಮುಹೂರ್ತ ಮತ್ತು ಶೀರ್ಷಿಕೆಯ ಅನಾವರಣ ಸಮಾರಂಭವು ಡೊಂಗರಕೇರಿ ಭುವನೇಂದ್ರ ಅಡಿಟೋರಿಯಂನಲ್ಲಿ ನಡೆಯಿತು.
“ಮಿಡ್ಲ್ ಕ್ಲಾಸ್ ಫ್ಯಾಮಿಲಿ” ಶೀರ್ಷಿಕೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅನಾವರಣ ಗೊಳಿಸಿ, ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಿನಿಮಾ ದೇಶ ವಿದೇಶಗಳಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ದಾಖಲಿಸಿದೆ. ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ಯನ್ನು ಎಲ್ಲಾ ವರ್ಗದ ಜನರು ನೋಡಿ ಪ್ರೋತ್ಸಾಹಿಸಲಿ ಎಂದು ಹರಸಿದರು.
ಕ್ಲ್ಯಾಪ್ ಮಾಡಿದ ಖ್ಯಾತ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ವಿನೀತ್ ಕುಮಾರ್, ರಾಹುಲ್ ಅಮೀನ್ ಸಹಿತ ಯುವಕರ ತಂಡವೇ ಮಿಡ್ಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಸಮಾರಂಭದಲ್ಲಿ ಕಿಶೋರ್ ಡಿ. ಶೆಟ್ಟಿ, ಚಿತ್ರನಟ ಅರವಿಂದ ಬೋಳಾರ್, ತುಳು ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ದಯಾನಂದ್ ಕತ್ತಲ್ ಸಾರ್, ನಿರ್ಮಾಪಕ ಆನಂದ್ ಎನ್ ಕುಂಪಲ, ಸಹ ನಿರ್ಮಾಪಕರಾದ ಗಣೇಶ್ ಕೊಲ್ಯ, ಭರತ್ ಕುಮಾರ್ ಗಟ್ಟಿ, ಅಶ್ವಿನಿ ರಕ್ಷಿತ್, ಪವನ್ ಕುಮಾರ್, ಅಶೋಕ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಸುಹಾನ್ ಪ್ರಸಾದ್, ಕಿರಣ್ ಶೆಟ್ಟಿ, ಸ್ವಸ್ತಿಕ್ ಅಚಾರ್ಯ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಕಾರ್ಯದರ್ಶಿ ದಯಾನಂದ್ ಬಂಟ್ವಾಳ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾದ ಸತೀಶ್ ಕುಂಪಲ, ಕೆ.ಟಿ.ಸಿ ಪ್ರಾಂಶುಪಾಲರು ರೆ.ಡಾ.ಹೆಚ್ ಎಂ ವಾಟ್ಸನ್, ವಾಸುದೇವ ರಾವ್, ಹರೀಶ್ ಅಡ್ಯಾರ್, ಸಾಯಿ ಪರಿವಾರ್ ಟ್ರಸ್ಟಿನ ಪ್ರಮುಖರಾದ ಪ್ರವೀಣ್ ಕುಂಪಲ, ಪುರುಷೋತ್ತಮ ಕಲ್ಲಾಪು, ಗಣೇಶ್, ಆತ್ಮಶಕ್ತಿ ಬ್ಯಾಂಕಿನ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್,ಉದ್ಯಮಿ ದಿನೇಶ್ ಶೆಟ್ಟಿ, ಉದ್ಯಮಿ ಹರೀಶ್ ಶೇರಿಗಾರ್, ಪುಳಿಮುಂಚಿ ನಿರ್ಮಾಪಕರಾದ ಹರೀಶ್ ಕುಮಾರ್ ರೈ, ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ, ಫ್ಲವರ್ ಡೆಕೊರೇಶನ್ ನ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಶೋಭರಾಜ್ ಪಾವೂರು, ಸತೀಶ್ ಬಂದಲೆ, ರಾಹುಲ್ ಅಮೀನ್, ವಿನೀತ್ ಕುಮಾರ್, ಸಮತಾ ಅಮೀನ್, ಹಿರಿಯ ಕಲಾ ನಿರ್ದೇಶಕ ತಮ್ಮ ಲಕ್ಷಣ, ಪಮ್ಮಿ ಕೊಡಿಯಾಲ್ ಬೈಲ್, ಬಿಗ್ ಸಿನಿಮಾಸ್ ನ ಬಾಲಕೃಷ್ಣ ಶೆಟ್ಟಿ , ನಿರ್ಮಾಪಕ ರವಿ ರೈ ಕಲಸ, ಮಾಜಿ ಮೇಯರ್ ಗಳಾದ ದಿವಾಕರ್ ಕೆ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.