Leopard attack: ದ್ರಾಕ್ಷಿ ತೋಟದಲ್ಲಿದ್ದ ಮೇಕೆ ಬಲಿ
Team Udayavani, Oct 23, 2023, 11:54 AM IST
ದೊಡ್ಡಬಳ್ಳಾಪುರ: ಚಿರತೆಯೊಂದು ದಾಳಿ ನಡೆಸಿದ ಪರಿಣಾಮ ದ್ರಾಕ್ಷಿ ತೋಟದಲ್ಲಿ ಕಟ್ಟಲಾಗಿದ್ದ ಮೇಕೆ ಸಾವನಪ್ಪಿರುವ ಘಟನೆ ತಾಲೂಕಿನ ಹೊನ್ನಾಘಟ್ಟ ಗ್ರಾಮದ ಹೊರವಲಯದಲ್ಲಿ ಆ.22ರ ಭಾನುವಾರ ಸಂಜೆ ನಡೆದಿದೆ.
ಹೊನ್ನಾಘಟ್ಟ ಗ್ರಾಮದ ಜಗನ್ನಾಥ್ ಎನ್ನುವವರಿಗೆ ಸೇರಿದ ದ್ರಾಕ್ಷಿ ತೋಟದಲ್ಲಿ ಮೇಕೆಯನ್ನು ಕಟ್ಟಿ ಮೇಯಿಸಲಾಗುತ್ತಿದ್ದು, ಈ ವೇಳೆ ಚಿರತೆ ದಾಳಿ ನಡೆಸಿದೆ. ಆದರೆ ಮೇಕೆಯನ್ನು ಕಟ್ಟಿದ್ದ ಕಾರಣ ಎಳೆದೊಯ್ಯಲಾಗದೆ ಅಲ್ಲಿಯೇ ಮೇಕೆ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿದೆ.
ಇದೇ ಸಂದರ್ಭದಲ್ಲಿ ಮೇಕೆ ಕೂಗಾಟ ಕಂಡು ಮಧು ಎನ್ನುವವರು ಸ್ಥಳಕ್ಕೆ ತೆರಳಿದ್ದು, ಚಿರತೆ ಗಾಬರಿಗೊಂಡು ಪರಾರಿಯಾಗಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುಖಂಡ ತಳಗವಾರ ಪುನೀತ್, ಅನೇಕ ದಿನಗಳಿಂದ ಈ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಕಂಡು ಬರುತ್ತಿದ್ದು, ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಳ್ಳದೇ ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.