![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Oct 23, 2023, 2:05 PM IST
ಹುಕ್ಕೇರಿ: ಇಲ್ಲಿನ ರಾಯಲ್ ಲಾಯರ್ ವತಿಯಿಂದ ಪಟ್ಟಣದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಆಹ್ವಾನಿತ
ವಕೀಲರ ಸಂಘಗಳ ಅಡ್ವೋಕೇಟ್ ಪ್ರೀಮಿಯರ್ ಲೀಗ್ (ಎಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜಯಪುರ ತಂಡ ಪ್ರಥಮ ಸ್ಥಾನ ಪಡೆದು ಟ್ರೋಫಿಗೆ ಮುತ್ತಿಕ್ಕಿದ್ದು, ಅಥಣಿ ತಂಡ ರನ್ನರ್ ಅಪ್ ಆಗಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಈ ಮೂಲಕ ಕಳೆದ ಮೂರು ದಿನಗಳಿಂದ ಪಟ್ಟಣ ಹೊರವಲಯದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಗೆ ವರ್ಣರಂಜಿತ ತೆರೆ ಬಿದ್ದಿದೆ.
ರವಿವಾರ ನಡೆದ ಪಂದ್ಯಾವಳಿ ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಜಯಪುರ ತಂಡ ನಿಗದಿತ 8 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 88 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಅಥಣಿ ತಂಡ 7 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿತು. ಈ ಮೂಲಕ 20 ರನ್‌ಗಳಿಂದ ಸೋಲುಂಡಿತು.
ತೃತೀಯ ಸ್ಥಾನ ಬೆಳಗಾವಿ-ಎ ತಂಡ, ನಾಲ್ಕನೇ ಬಹುಮಾನ ಮೂಡಲಗಿ ತಂಡ ಪಡೆಯಿತು. ಇನ್ನು ಪಂದ್ಯಾವಳಿ ಶ್ರೇಷ್ಠ ಬ್ಯಾಟ್ಸ್
ಮನ್ ವಿಜಯಪುರ ತಂಡದ ವಿನಾಯಕ ನಾಯಕ, ಶ್ರೇಷ್ಠ ಬೌಲರ್ ಶಾಂತೇಶ, ಶ್ರೇಷ್ಠ ಕ್ಷೇತ್ರ ರಕ್ಷಕ ಎಂ.ಎನ್. ಕೌರ್, ಶ್ರೇಷ್ಠ ಆಲ್
ರೌಂಡರ್ ಹುಕ್ಕೇರಿಯ ಮಹಾಂತೇಶ ಬೋರಗಲ್ಲಿ ವೈಯಕ್ತಿಕ ಬಹುಮಾನಗಳಿಗೆ ಭಾಜನರಾದರು.
ಹಿರಿಯ ದಿವಾಣಿ ನ್ಯಾಯಾಧೀಶ ಕೆ.ಎಸ್. ರೊಟ್ಟೇರ್ ಮೂಡಲಗಿ ತಂಡ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಭಾಗವಹಿಸುವುದು ಮುಖ್ಯವಾಗಿದೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್ .ಪಿ. ಚೌಗಲಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದ ಜಂಜಾಟದಿಂದ ಹೊರ ಬರಲು
ಈ ಕ್ರಿಕೆಟ್ ನೆರವಾಗಿದೆ. ಇಂಥ ಕ್ರೀಡೆಗಳು ಕೋರ್ಟ್ ಕಾರ್ಯ-ಕಲಾಪಗಳ ನಡುವೆ ವಕೀಲರು ಅನುಭವಿಸುವ ಒತ್ತಡ ಕಡಿಮೆ
ಮಾಡಲಿವೆ ಎಂದರು.
ಹಿರಿಯ ನ್ಯಾಯವಾದಿ ಪಿ.ಆರ್. ಚೌಗಲಾ ಮಾತನಾಡಿ, ವಕೀಲರಲ್ಲಿ ಕ್ರೀಡಾಸಕ್ತಿ ಮೂಡಿಸಲು ಏರ್ಪಡಿಸಿರುವ ಪಂದ್ಯಾವಳಿ
ಪ್ರತಿ ವರ್ಷವೂ ಮುಂದುವರಿಸಲಾಗುವುದು. 2024ರ ಡಿಸೆಂಬರ್‌ನಲ್ಲಿ ಹೊನಲು-ಬೆಳಕಿನಲ್ಲಿ ಪುನಃ ಪಂದ್ಯಾವಳಿ ಆಯೋಜಿಸಲಾಗುವುದು ಎಂದರು.
ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 18 ತಂಡಗಳು ಭಾಗವಹಿಸಿದ್ದವು.
ಶಾನೂರ್ ಫಿರಜಾದೆ, ಆಸ್ಕರ್ ನಾಯಿಕವಾಡಿ, ಆಸೀಫ್ ಮೊಖಾಶಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ಈ ವೇಳೆ ಅಪರ ಸರ್ಕಾರಿ ನ್ಯಾಯವಾದಿ ಅನಿಲ್ ಕರೋಶಿ, ನ್ಯಾಯವಾದಿಗಳಾದ ಬಿ.ಬಿ.ಪಾಸಪ್ಪಗೋಳ, ಡಿ.ಕೆ. ಅವರಗೋಳ,
ಎ.ಬಿ. ತೊದಲ, ಕೆ.ಎಲ್. ಜಿನರಾಳಿ, ಭೀಮಸೇನ ಭಾಗಿ, ಸಂಜು ಮಗದುಮ್ಮ, ಉಮೇಶ ಪಾಟೀಲ, ಅನೀಸ್ ವಂಟಮುರಿ,
ಬಸವರಾಜ ಗಂಗಣ್ಣವರ, ಬಿ.ಎಂ. ಜಿನರಾಳಿ, ವಿನಯ ಪಾಟೀಲ, ಬಿ.ಎಂ.ಪಾಟೀಲ, ಕುಮಾರ ಬೆಂಕಿ, ವಿಠಲ ಗಸ್ತಿ ಇತರರಿದ್ದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.