First Martyr: ದೇಶದ ಮೊದಲ ಹುತಾತ್ಮ ನಿಚ್ಚಣಕಿಯ ಸರದಾರ ಗುರುಸಿದ್ದಪ್ಪ
ಕಿತ್ತೂರು ಸಂಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣ, ಬಿಚ್ಚುಗತ್ತಿ ಚನ್ನಬಸಪ್ಪ, ವಡ್ಡರ ಯಲ್ಲಣ್ಣ ನಿರ್ವಹಿಸಿರುವುದು ಗಮನಾರ್ಹ.
Team Udayavani, Oct 23, 2023, 2:24 PM IST
ಕಿತ್ತೂರು ರಾಣಿ ಚನ್ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಥಮ ವೀರ ಮಹಿಳೆ ಇತಿಹಾಸದಲ್ಲಿ ದಾಖಲಾಗದೆ ಹೋಗಿರುವುದು
ಬಹಳ ದುಃಖದ ಸಂಗತಿಯಾದರೆ ಕಿತ್ತೂರು ಸಂಸ್ಥಾನದಲ್ಲಿ ಬೆಳಕಿಗೆ ಬಾರದೇ ಅನೇಕ ಅಂಶಗಳು ಮುಚ್ಚಿ ಹೋಗಿರುವುದು ಅಷ್ಟೇ ಖೇದಕರ ಸಂಗತಿ.
ದೇಶದ ಮೊದಲ ಹುತಾತ್ಮ: 1852ರಲ್ಲಿ ಮಂಗಲ್ ಪಾಂಡೆ ಬ್ರಿಟಿಷ್ ಸೈನಿಕ ಹಂದಿ ಮತ್ತು ಹಸುವಿನ ಕೊಬ್ಬು ಸವರಿದ ಮದ್ದು ಗುಂಡು ಬಳಕೆ ಮಾಡಲು ನಿರಾಕರಿಸಿದ್ದು, ಆಗ ಮಂಗಲ್ ಪಾಂಡೆಗೆ ಬ್ರಿಟಿಷ್ ಅಧಿ ಕಾರಿ ಗಲ್ಲು ಶಿಕ್ಷೆ ವಿಧಿ ಸಿದ್ದನ್ನು ನಾವೆಲ್ಲರೂ ಇತಿಹಾಸದ ಪುಟಗಳಲ್ಲಿ ಓದಿದ್ದೇವೆ. ಆದರೆ ಅದಕ್ಕೂ 30 ವರ್ಷ ಮೊದಲೇ ಕಿತ್ತೂರು ಸಂಸ್ಥಾನದ ಸೇನಾ ದಂಡನಾಯಕ, ಸಂಸ್ಥಾನದ ಮಹಾ ಪ್ರಧಾನಿ, ದೇಶದ ಮೊದಲ ಹುತಾತ್ಮ ಇವತ್ತಿನ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದ ಸರದಾರ ಗುರುಸಿದ್ದಪ್ಪನವರು ಎಂಬ ಸಂಗತಿ ನಾಡಿನ ಮಹಾ ಜನತೆಗೆ ಗೂತ್ತಿಲ್ಲದೇ ಇರುವುದು ಖೇದಕರ ವಿಷಯ.
ಸೇನಾದಂಡನಾಯಕ ಸರದಾರ ಗುರುಸಿದ್ದಪ್ಪ : ದೊರೆ ಮಲ್ಲಸರ್ಜ ಹಾಗೂ ಶಿವಲಿಂಗ ರುದ್ರ ಸರ್ಜನ ಸಮಕಾಲಿನ ಸರದಾರ ಕಿತ್ತೂರು ಸಂಸ್ಥಾನದ ಸೇನಾದಂಡ ನಾಯಕ ಮಲ್ಲಸರ್ಜ ಮತ್ತು ಶಿವಲಿಂಗ ರುದ್ರಸರ್ಜನ ಆಳ್ವಿಕೆಯಲ್ಲಿ ಸೇನಾ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸಿ 1824 ಅ.23 ರಂದು ಜರುಗಿದ ಕಿತ್ತೂರು ಕದನದಲ್ಲಿ ಮಹತ್ವದ ಪಾತ್ರ ವಹಿಸಿದವರು ಗುರುಸಿದ್ದಪ್ಪನವರು. ಸೇನಾದಂಡನಾಯಕ ಅಷ್ಟೇ ಅಲ್ಲ ಮಹಾ ಪ್ರಧಾನಿಯೂ ಆಗಿದ್ದರು ಎಂದು ಇತಿಹಾಸದಲ್ಲಿ ದಾಖಲಾಗದೇ ಹಾಗೆ ಉಳಿದಿದೆ. ದೊರೆ ಮಲ್ಲಸರ್ಜನ ಪಂಚಪ್ರಾಣದಂತಿದ್ದ ಗುರುಸಿದ್ದಪ್ಪನವರು ಸಂಸ್ಥಾನಕ್ಕೆ ಉತ್ತಮವಾದ ಸಲಹೆ-ಸೂಚನೆ ನೀಡುವ ಮೂಲಕ ಸಂಸ್ಥಾನಕ್ಕೆ ಆಧಾರ ಸ್ತಂಭವಾಗಿದ್ದರು. ಅಷ್ಟೇ ಸ್ವಾಮಿ ನಿಷ್ಠರಾಗಿದ್ದರು.
ಕಿತ್ತೂರು ಕಾಳಗದಲ್ಲಿ ಗುರುಸಿದ್ದಪ್ಪನವರ ಪಾತ್ರ: ರಾಣಿ ಚನ್ನಮ್ಮನವರು 1824 ಅ.23ರ ಯುದ್ಧಕ್ಕೆ ದೇಶದ ಮೊದಲ ಹುತಾತ್ಮ ನಿಚ್ಚಣಕಿಯ ಸರದಾರ ಗುರುಸಿದ್ಧಪ್ಪ ಸೇನಾ ಮುಖ್ಯಸ್ಥನಾಗಿ ಕಾರ್ಯ ನಿರ್ವಹಣೆ 1824 ಅ.23ರಂದು ಜರುಗಿದ ಕಿತ್ತೂರು ಕದನದಲ್ಲಿ ಮಹತ್ವದ ಪಾತ್ರ ಮಹಾ ಪ್ರಧಾನಿಯೂ ಆಗಿದ್ದರು. ಥ್ಯಾಕರೆಯ ದಬ್ಟಾಳಿಕೆ ಪ್ರಶ್ನಿಸಿದ ಮೊದಲ ವ್ಯಕ್ತಿ
ಸನ್ನದ್ಧವಾಗುವ ಪೂರ್ವದಲ್ಲಿ ಅಂತಿಮವಾಗಿ ಸರದಾರ ಗುರುಸಿದ್ದಪ್ಪನವರಿಂದ ಸಲಹೆ ಕೇಳಿದರು.
1824 ಅಕ್ಟೋಬರ್ ತಿಂಗಳ ಯುದ್ಧದ ಸಮಯದಲ್ಲಿ ಕಿತ್ತೂರು ಸಂಸ್ಥಾನದ ಸೈನ್ಯ ಮುನ್ನಡೆಸಿದ ವ್ಯಕ್ತಿ ಸರದಾರ
ಗುರುಸಿದ್ದಪ್ಪನವರು. ಯುದ್ಧದ ರಣತಂತ್ರ ರೂಪಿಸಿದ್ದು ಮತ್ತು ಬ್ರಿಟಿಷ್ ಸಹನೆ ಕೆಣಕುವಂತೆ ಮಾಡಿ ಅವರನ್ನು ರೊಚ್ಚಿಗೆಬ್ಬಿಸಿದ್ದು ಇದೇ ಸರದಾರ ಗುರುಸಿದ್ದಪ್ಪನವರು.
ಅಕ್ಟೋಬರ್ 21ರಂದು ಬ್ರಿಟಿಷ್ ಅಧಿಕಾರಿಗಳು ಕಿತ್ತೂರು ಖಜಾನೆ ಒಪ್ಪಂದಕ್ಕೆ ಸಹಿ ಹಾಕಲು ಮತ್ತು ಕಿತ್ತೂರು ಕೋಟೆಯ ದ್ವಾರದ
ಸೈನಿಕರ ಬದಲಾವಣೆಗೆ ಬ್ರಿಟಿಷ್ ಅಧಿ ಕಾರಿಗಳಾದ ಸ್ಟೀವನ್ಸನ್ ಮತ್ತು ಇಲಿಯಟ್ ಸ್ಪಷ್ಟವಾಗಿ ನಿರಾಕರಿಸಿ ಥ್ಯಾಕರೆಯ ದಬ್ಟಾಳಿಕೆಯನ್ನು ಪ್ರಶ್ನಿಸಿದ ಮೊದಲ ವ್ಯಕ್ತಿ ಸರದಾರ ಗುರುಸಿದ್ದಪ್ಪನವರು.ಇದರ ಸಿಟ್ಟನ್ನು ಮನಸಿನಲ್ಲಿಟ್ಟುಕೊಂಡು ದಗದಗಿಸುತ್ತಿದ್ದ ಬ್ರಿಟಿಷರು 1824 ಡಿ.3 ರಿಂದ 5ರವರೆಗೆ ಕಿತ್ತೂರಿನಲ್ಲಿ ನಡೆದ ಎರಡನೇ ಯುದ್ಧದಲ್ಲಿ 25 ಸಾವಿರ ಸೈನಿಕರನ್ನು
ಕೂಡಿಸಿ ಕಿತ್ತೂರು ಸಂಸ್ಥಾನದ ಮೇಲೆ ಯುದ್ಧ ಸಾರಿದರು.
1824 ಡಿ. 4 ಮತ್ತು 5ರಂದು ಗಡಾದ ಮರಡಿ ವಶಪಡಿಸಿಕೊಳ್ಳುವ ಸಮಯದಲ್ಲಿ ಸರದಾರ ಗುರುಸಿದ್ದಪ್ಪ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಮತ್ತಿತರರನ್ನು ಸೆರೆ ಹಿಡಿದರು. ನಂತರ ಇವರನ್ನು ಬಂಧಿಸಿ ಬೆಳಗಾವಿ ಜೈಲಿನಲ್ಲಿ ಇಟ್ಟರು. ಒಂದು ವರ್ಷದ ನಂತರ ಅಂದರೆ 1825 ರಲ್ಲಿ ಅಮಟೂರ ಬಾಳಪ್ಪ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಇತರರನ್ನು ಬ್ರಿಟಿಷ್ ಸರಕಾರ ಜಾಮೀನು ನೀಡಿ ಬಿಡುಗಡೆ ಮಾಡಿತು. ಆದರೆ ಸರದಾರ ಗುರುಸಿದ್ದಪ್ಪನವರಿಗೆ ಜಾಮೀನು ನೀಡದೆ ಅವರನ್ನು ಜೈಲಿನಲ್ಲಿ ಉಳಿಸಿಕೊಂಡು ಚಿತ್ರಹಿಂಸೆ ನೀಡಿದರು.
ಸರದಾರ ಗುರುಸಿದ್ದಪ್ಪನವರನ್ನು ಬಿಡುಗಡೆ ಮಾಡಿದರೆ ಬ್ರಿಟಿಷ್ ಸರಕಾರಕ್ಕೆ ಆತಂಕ ಇದೆ ಎಂದು ಬ್ರಿಟಿಷ್ ಅಧಿಕಾರಿಗಳು ಪತ್ರ ವಿನಿಮಯ ಮಾಡಿಕೊಂಡ ದಾಖಲೆಗಳು ಈಗಲೂ ಲಭ್ಯವಿದೆ ಎಂದರೆ ಸರದಾರ ಗುರುಸಿದ್ದಪ್ಪನವರ ಕುರಿತು ಬ್ರಿಟಿಷ್ ಸಾಮ್ರಾಜ್ಯಷಾಹಿಗೆ ಇರುವ ಆತಂಕ ಅರಿವಾಗುತ್ತದೆ. ಸರದಾರ ಗುರುಸಿದ್ದಪ್ಪನವರನ್ನು ಬದುಕಲು ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದರಿತು ಬ್ರಿಟಿಷ್ ಅಧಿಕಾರಿಗಳು ಬೆಳಗಾವಿಯಲ್ಲಿ ಅವರನ್ನು ಗಲ್ಲು ಹಾಕಿ ಅವರ ಶವವನ್ನು ಹುಕ್ಕೇರಿ ತಾಲೂಕಿನ ಹಂದಿಗುಂದ ಗ್ರಾಮದ ಚರಂಡಿಯಲ್ಲಿ ತುಂಡು ತುಂಡಾಗಿ ಕತ್ತರಿಸಿ ಪ್ರಾಣಿ ಪಕ್ಷಿಗಳಿಗೆ ಹಂಚಿದರು. ಈ ಹೀನ ಕೃತ್ಯದಿಂದ ಬ್ರಿಟಿಷ್ ಸರ್ಕಾರ ಮತ್ತು ಅಧಿಕಾರಿಗಳಿಗೆ ಸರದಾರ ಗುರುಸಿದ್ದಪ್ಪನವರ ಮೇಲೆ ಎಷ್ಟೊಂದು ಸಿಟ್ಟು ಇತ್ತೆಂಬುವುದು
ಅರಿವಾಗುತ್ತದೆ.
ಇವತ್ತು ನಾವು ನೀವುಗಳೆಲ್ಲ ಕಿತ್ತೂರು ವಿಜಯೋತ್ಸವ ಆಚರಿಸುತ್ತಿದ್ದೇವೆ ಎಂದರೆ ಅದರಲ್ಲಿ ಕಿತ್ತೂರು ಸಂಸ್ಥಾನದ ರಾಜ-ರಾಣಿಯರ ಜತೆಗೆ ಸರದಾರ ಗುರುಸಿದ್ದಪ್ಪನವರ ಪಾತ್ರ ಬಹಳ ಮುಖ್ಯಎಂದರೆ ಅತಿಶಯೋಕ್ತಿಯಾಗಲಾರದು. ಸರದಾರ ಗುರುಸಿದ್ದಪ್ಪನವರಿಗೆ ಗಲ್ಲು ಹಾಕಿದ ನಂತರ ಅವರ ಪಾತ್ರವನ್ನು ಕಿತ್ತೂರು ಸಂಸ್ಥಾನದಲ್ಲಿ ಸಂಗೊಳ್ಳಿ ರಾಯಣ್ಣ, ಬಿಚ್ಚುಗತ್ತಿ ಚನ್ನಬಸಪ್ಪ, ವಡ್ಡರ ಯಲ್ಲಣ್ಣ ನಿರ್ವಹಿಸಿರುವುದು ಗಮನಾರ್ಹ.
ಬ್ರಿಟಿಷ್ ಅಧಿಕಾರಿಗಳ ಕಾಗದ ಪತ್ರ ತಿಳಿದರೆ ಮಾತ್ರ ಸರದಾರ ಗುರುಸಿದ್ದಪ್ಪನವರ ಭವ್ಯ ವ್ಯಕ್ತಿತ್ವ ಅರಿವಾಗುವುದು. ಗುರುಸಿದ್ದಪ್ಪನವರ ಕುರಿತು ಇರುವ ಭಯ-ಆತಂಕಗಳನ್ನು ಬ್ರಿಟಿಷ್ ಅಧಿ ಕಾರಿಗಳು ತಮ್ಮ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.ದೇಶದ ಮೊದಲ ಹುತಾತ್ಮ ಎಂದರೆ ಸರದಾರ ಗುರುಸಿದ್ದಪ್ಪನವರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಸರದಾರ ಶಿವಬಸಪ್ಪ
ಸರದಾರ ಗುರುಸಿದ್ದಪ್ಪ ಅವರ ಸಹೋದರ ಶಿವಬಸಪ್ಪ ಸರದಾರ ಅವರು ಡೋರಿ ಬೆಣಚಿಯಲ್ಲಿ ಇರುವ ಕಿತ್ತೂರು ಸಂಸ್ಥಾನದ
ಹೊಲದಿಂದ ದವಸ ಧಾನ್ಯಗಳ ರಾಶಿ ತೆಗೆದುಕೊಂಡು ಬರುವಾಗ ಬಿಡಿ ರಸ್ತೆಗೆ ಹೊಂದಿಕೊಂಡು ಇರುವ ರಾಣಿ ಚನ್ನಮ್ಮ
ಬಾಲಕಿಯರ ವಸತಿ ಶಾಲೆ ಹತ್ತಿರ ಇರುವ ಕೆರೆ ಪಕ್ಕದ ತಸ್ತೆಯಿಂದ ರಾಶಿ ತುಂಬಿದ ಹಳಬಂಡಿ ಹೊಡೆದುಕೊಂಡು ಬರುವ ವೇಳೆ ಬ್ರಿಟಿಷರ ಮತ್ತು ಸರದಾರ ಶಿವಬಸಪ್ಪನವರ ನಡುವೆ ಯುದ್ಧ ಆರಂಭವಾಗಿ ಬ್ರಿಟಿಷರ ಗುಂಡು ಶಿವಬಸಪ್ಪನವರ ದೇಹ ಹೊಕ್ಕು ಪ್ರಾಣ ತ್ಯಜಿಸಿದರು. ದೇಹ ಕೆಳಗೆ ಬೀಳದೆ ಹಳಬಂಡಿಯಲ್ಲಿ ಗುಂಡು ಹೊಡೆಯುವ ಸ್ಥಿತಿಯಲ್ಲಿ ದೇಹ ಹಾಗೆ ನಿಂತಿತ್ತು. ಇದನ್ನು
ನೋಡಿದರೆ ಅವರು ಎಂತಹ ವೀರರು ಎಂದು ಅರ್ಥವಾಗುತ್ತದೆ. ನಂತರ ಅವರ ದೇಹವನ್ನು ತೆಗೆದುಕೊಂಡು ನಿಚ್ಚಣಕಿ
ಗ್ರಾಮದ ಸರದಾರ ವಂಶಸ್ಥರಿಗೆ ಮೀಸಲಿಟ್ಟ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು. ನಂತರ ಆ ಸ್ಥಳದಲ್ಲಿ
ಶಿವಬಸಪ್ಪನವರ ಸಮಾಧಿ ಕಟ್ಟಿದ್ದಾರೆ ಅದರ ಮೇಲೆ ಕಿತ್ತೂರು ರಾಜರ ಸಮಾಧಿಗಳ ಮೇಲೆ ಇರುವಂತೆ ಕಿತ್ತೂರು ಸಂಸ್ಥಾನದ
ಲಾಂಛನವಾದ ಉತ್ತರಕ್ಕೆ ಮುಖ ಮಾಡಿ ನಂದಿ ಮತ್ತು ಈಶ್ವರನ ವಿಗ್ರಹಗಳು ಕಾಣ ಸಿಗುತ್ತವೆ. ಇಂದಿಗೂ ಶಿವಬಸಪ್ಪನವರ
ಸಮಾಧಿಯನ್ನು ನಿಚ್ಚಣಕಿ ಗ್ರಾಮದ ಸರದಾರ ವಂಶಸ್ಥರು ಸಂಪ್ರದಾಯದಂತೆ ಪೂಜೆ ಮಾಡುತ್ತಾ ಬರುತ್ತಿದ್ದಾರೆ.
*ಬಸವರಾಜ ಚಿನಗುಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.