Dasara dolls: ಅಕ್ಕತಂಗಿಯರಿಂದ ದಸರಾ ಬೃಹತ್‌ ಬೊಂಬೆ ಹಬ್ಬ


Team Udayavani, Oct 23, 2023, 5:36 PM IST

tdy-14

ರಾಮನಗರ: ಪ್ರತಿ ಮನೆಯಲ್ಲಿ ಬೊಂಬೆಯನ್ನು ಕೂರಿಸುವುದು ಹಳೇ ಮೈಸೂರು ಭಾಗದಲ್ಲಿ ದಸರಾ ಹಬ್ಬದ ಆಚರಣೆಯ ಪ್ರಮುಖ ಸಂಪ್ರದಾಯ. ಜಿಲ್ಲೆಯ ಚನ್ನಪಟ್ಟಣದ ಕೋಟೆ ಜಟ್ಟಿಗರ ಬೀದಿಯಲ್ಲಿ ರಮಾಮಣಿ ಮತ್ತು ಸಹೋದರಿಯರು ಕೂರಿಸಿರುವ ಬೃಹತ್‌ ಬೊಂಬೆಗಳ ಪ್ರದರ್ಶನ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

ಕಳೆದ 40ವರ್ಷಗಳಿಂದ ವಿಶಿಷ್ಟ ರೀತಿಯಲ್ಲಿ ಬೊಂಬೆ ಹಬ್ಬವನ್ನು ಆಚರಿಸಿಕೊಂಡು ಬಂದಿರುವ ಚನ್ನಪಟ್ಟಣದ ವಾಸುದೇವ ಶಾಸ್ತ್ರಿ ಅವರ ಪುತ್ರಿಯರಾದ ರಮಾಮಣಿ, ಪುಷ್ಪವಲ್ಲಿ, ಲತಾ ಮತ್ತು ಮಾಲಿನಿ ಎಂಬ ನಾಲ್ಕು ಮಂದಿ ಸಹೋದರಿಯರು 2 ರಿಂದ 3 ಸಾವಿರದಷ್ಟು ಬೊಂಬೆಗಳನ್ನು ಕೂರಿಸಿದ್ದು, ಇವರ ಬೃಹತ್‌ ಬೊಂಬೆಗಳ ಸಂಗ್ರಹ ಎಲ್ಲರ ಗಮನ ಸೆಳೆಯುತ್ತಿದೆ. ತಮ್ಮ ಸಂಗ್ರಹದಲ್ಲಿ 4 ಸಾವಿರಕ್ಕೂ ಹೆಚ್ಚು ಬೊಂಬೆಗಳಿದ್ದು ಸ್ಥಳಾವಕಾಶದ ಕೊರತೆಯಿಂದ ಹೆಚ್ಚು ಬೊಂಬೆಗಳನ್ನು ಕೂರಿಸಿಲ್ಲ ಎಂದು ಸಹೋದರಿಯರು ಹೇಳುತ್ತಾರೆ.

ಏನೆಲ್ಲಾ ಬೊಂಬೆಗಳಿವೆ: ನಾಲ್ಕು ಮಂದಿ ಸೋದರಿಯರು ಅತ್ಯಂತ ಆಸಕ್ತಿಯಿಂದ ಪ್ರತಿವರ್ಷ ಕೂರಿಸುತ್ತಿರುವ ಬೊಂಬೆಗಳ ಸಂಗ್ರಹದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಬೊಂಬೆಗಳು, ಮಹಾಭಾರತ, ವಿಷ್ಣುವಿನ ದಶಾವತಾರ, ಸೀತಾಕಲ್ಯಾಣ, ಗಿರಿಜಾಕಲ್ಯಾಣ ಸೇರಿದಂತೆ ನಮ್ಮ ಧಾರ್ಮಿಕ ಹಿನ್ನೆಲೆ ಸಾರುವ ಬೊಂಬೆಗಳು, ಕೃಷಿ, ಗ್ರಾಮೀಣ ಜೀವನ, ಜನರ ಸಂಪ್ರದಾಯ ಸಾರುವ ಬೊಂಬೆಗಳು, ಮೈಸೂರು ದಸರಾ ಮಾದರಿಯ ಬೊಂಬೆಗಳು, ಹಲೇ ಮೈಸೂರು ಭಾಗದ ವಿಶಿಷ್ಟ ಬೊಂಬೆಗಳು ಎನಿಸಿರುವ ಚಂದನದ ಪಟ್ಟದ ಬೊಂಬೆಗಳು, ರಾಜರಾಣಿ ಬೊಂಬೆಗಳು ಹೀಗೆ ಬಹುದೊಡ್ಡ ಬೊಂಬೆಗಳನ್ನು ನಾವಿಲ್ಲಿ ಕಾಣಬಹುದಾಗಿದೆ.

ಕೆಲವು ಪ್ರದೇಶದ ಕರಕುಶಲ ವಸ್ತುಗಳು: ಚನ್ನಪಟ್ಟಣದ ಸಾಂಪ್ರದಾಯಿಕ ಬೊಂಬೆಗಳ ಬಹುದೊಡ್ಡ ಸಂಗ್ರಹದ ಜೊತೆಗೆ ಆಂಧ್ರ, ಛತ್ತೀಸ್‌ ಘಡ, ಗುಜರಾತ್‌, ಮಥುರಾ, ಒರಿಸ್ಸಾ ಹೀಗೆ ದೇಶದ ವಿವಿಧ ಪ್ರದೇಶಗಳಲ್ಲಿನ ಕರಕುಶಲ ಬೊಂಬೆಗಳು ಇವರ ಸಂಗ್ರಹದಲ್ಲಿದ್ದು, ಹೊರಗೆ ಪ್ರವಾಸ ಹೋದಾಗಲೆಲ್ಲಾ ಅಲ್ಲಿ ಕಾಣುವ ಸ್ಥಳೀಯ ಬೊಂಬೆಗಳನ್ನು ಖರೀದಿಸಿ ತಂದು ತಮ್ಮ ಸಂಗ್ರಹದಲ್ಲಿರಿಸುತ್ತಿದ್ದಾರೆ. ಬೊಂಬೆಗಳನ್ನು ಸಂಗ್ರಹಿಸುವ ಹಾಗೂ ಪ್ರತಿವರ್ಷ ದಸರಾ ಸಮಯದಲ್ಲಿ 9 ದಿನಗಳ ಕಾಲ ನವರಾತ್ರಿ ಬೊಂಬೆಯನ್ನು ಕೂಡಿಸುವ ಹವ್ಯಾಸವನ್ನು ಈ ಸೋದರಿಯರು ಬೆಳೆಸಿಕೊಂಡು ಬಂದಿದ್ದಾರೆ.

ನೂರಾರು ವರ್ಷಗಳ ಹಳೆ ಬೊಂಬೆಗಳೂ ಇವೆ: ಇನ್ನು ಈ ಸಹೋದರಿಯರ ಬೊಂಬೆಗಳ ಸಂಗ್ರಹದಲ್ಲಿ ನೂರಾರು ವರ್ಷಗಳಷ್ಟು ಹಳೆಯ ಬೊಂಬೆಗಳ ಸಂಗ್ರಹವೂ ಇದೆ. ತಲೆಮಾರುಗಳಿಂದ ಬಂದಿರುವ ಅಪರೂಪದ ಬೊಂಬೆಗಳನ್ನು ಸಂರಕ್ಷಣೆ ಮಾಡಿಕೊಂಡು ಬಂದಿರುವ ಇವರು, ಇವುಗಳು ಹಾಳಾಗದಂತೆ ಕಾಪಾಡಿಕೊಂಡು ಬಂದಿದ್ದು, ಒಂದು ವೇಳೆ ಪುರಾತನ ಬೊಂಬೆಗಳಿಗೆ ಅಲ್ಪಸ್ವಲ್ಪ ಹಾನಿಯಾದಲ್ಲಿ ಅವುಗಳನ್ನು ಅದೇ ರೀತಿ ರಿಪೇರಿಮಾಡುವ ಕೆಲಸವನ್ನು ಮಾಡಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಇವರ ಸಂಗ್ರಹದಲ್ಲಿ ಸಾಕಷ್ಟು ಹಳೆಯ ಕಾಲದ ಬೊಂಬೆಗಳನ್ನು ಕಾಣಬಹುದಾಗಿದೆ.

ಸಾರ್ವಜನಿಕ ವೀಕ್ಷಣೆಗೆ ಅವಕಾಶ: ಪ್ರತಿವರ್ಷ ಬೊಂಬೆಗಳನ್ನು ಕೂರಿಸುವ ಇವರು ದಸರಾ ಸಮ ಯದಲ್ಲಿ 10 ದಿನಗಳ ಕಾಲ ಬೊಂಬೆಗಳನ್ನು ಸಾರ್ವಜನಿಕರು ಮುಕ್ತವಾಗಿ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಯಾವುದೇ ನಿರ್ಬಂಧವಿಲ್ಲದೆ ಎಲ್ಲರೂ ಬೊಂಬೆಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದು, ಪ್ರತಿದಿನ ಇವರ ಮನೆಗೆ ನೂರಾರು ಮಂದಿ ಭೇಟಿ ನೀಡಿ ಬೊಂಬೆಗಳನ್ನು ವೀಕ್ಷಿಸಿ ಸಂತೋಷ ಪಡು ತ್ತಿದ್ದಾರೆ. ಅದರಲ್ಲೂ ಮಕ್ಕಳು ಬೊಂಬೆಗಳನ್ನು ನೋಡಿ ಆನಂದಿಸುತ್ತಿದ್ದಾರೆ.

ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ಬೊಂಬೆಗಳನ್ನು ಕೂರಿಸುತ್ತಿದ್ದರು. ಅವರಿಂದ ಪ್ರೇರಿತರಾಗಿ ನಾವು ಬೊಂಬೆ ಕೂರಿಸುವ ಹವ್ಯಾಸವನ್ನು ಬೆಳೆಸಿಕೊಂಡೆವು. ನಾವು ಹೋದಕಡೆಯಲೆಲ್ಲಾ ಬೊಂಬೆಗಳನ್ನು ತಂದು ಮನೆಯಲ್ಲಿ ಸಂಗ್ರಹ ಮಾಡಿದ್ದು, ನಮ್ಮ ಕುಟುಂಬದಲ್ಲಿ ತಲೆಮಾರುಗಳಿಂದ ಬಂದ ಬೊಂಬೆಗಳು ನಮ್ಮ ಬಳಿ ಇವೆ. ಇವು ಹಾನಿಯಾದರೆ ಅದನ್ನು ಮರುಸೃಷ್ಟಿ ಮಾಡುತ್ತೇವೆ. ದಸರಾ ಸಮಯದಲ್ಲಿ ಸಾರ್ವಜನಿಕರು ಈ ಬೊಂಬೆಗಳನ್ನು ಮುಕ್ತವಾಗಿ ವೀಕ್ಷಣೆ ಮಾಡಬಹುದಾಗಿದೆ. – ರಮಾಮಣಿ, ಬೊಂಬೆಕೂರಿಸಿರುವವರು

ದಸರಾ ಸಮಯದಲ್ಲಿ ಬೊಂಬೆಗಳನ್ನು ಕೂರಿಸುವ ಸಂಪ್ರದಾಯ ಹಳೇ ಮೈಸೂರು ಭಾಗದ ಸಾಕಷ್ಟು ಕುಟುಂಬಗಳಲ್ಲಿ ಇವೆ. ಆದರೆ, ಇಷ್ಟೋಂದು ಬೊಂಬೆಗಳನ್ನು ನಾವು ಎಲ್ಲೂ ನೋಡಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯನ್ನು ಪಾಲಿಸುತ್ತಾ, ಎಲ್ಲರಿಗೂ ಇದರ ಬಗ್ಗೆ ಅರಿವು ಮೂಡಿಸುತ್ತಿರುವ ಈ ಸಹೋದರಿಯರ ಕಾರ್ಯ ನಿಜಕ್ಕೂ ಶ್ಲಾಘನಾರ್ಹ. – ಹೊಯ್ಸಳ, ಇಸ್ರೋ ನೌಕರ, ಚನ್ನಪಟ್ಟಣ

-ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kanakapura-laxmi

New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Untitled-1

Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.