World Cup; ಇತರ ಪಂದ್ಯಗಳಿಗಾಗಿ ಎದುರು ನೋಡುತ್ತಿದ್ದೇವೆ…: ಹಶ್ಮತುಲ್ಲಾ ವಿಶ್ವಾಸದ ನುಡಿ
ಪಾಕಿಸ್ಥಾನ ವಿರುದ್ದದ ಗೆಲುವಿನ ರುಚಿ ಚೆನ್ನಾಗಿದೆ ಎಂದ ಅಫ್ಘಾನ್ ನಾಯಕ
Team Udayavani, Oct 24, 2023, 6:21 AM IST
Hashmatullah Shahidi, win, tastes nice. ICC, World cup, Cricket, Pakistan, Afghanistan
ಚೆನ್ನೈ: ‘ಪಾಕಿಸ್ಥಾನ ವಿರುದ್ಧದ ಈ ಗೆಲುವಿನ ರುಚಿ ಚೆನ್ನಾಗಿದೆ. ನಾವು ಗುರಿ ಬೆನ್ನಟ್ಟಿದ ರೀತಿ ತುಂಬಾ ವೃತ್ತಿಪರವಾಗಿತ್ತು. ಇತರ ಪಂದ್ಯಗಳಿಗಾಗಿ ಎದುರು ನೋಡುತ್ತಿದ್ದೇವೆ” ಎಂದು ಅಫ್ಘಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ವಿಶ್ವಾಸದ ನುಡಿಗಳನ್ನಾಡಿದ್ದಾರೆ.
ವಿಶ್ವಕಪ್ ಪಂದ್ಯದಲ್ಲಿಪಾಕಿಸ್ಥಾನ ವಿರುದ್ಧ 8 ವಿಕೆಟ್ ಗಳ ಅಮೋಘ ಗೆಲುವು ಸಾಧಿಸಿದ ಬಳಿಕ ಪ್ರಸ್ತುತಿ ಸಮಾರಂಭದಲ್ಲಿ ಮಾತನಾಡಿದ ಅಫ್ಘಾನ್ ತಂಡದ ನಾಯಕ” ನಾವು ಇಂದು ಬೆನ್ನಟ್ಟಿದ ರೀತಿಯಲ್ಲಿ ಮತ್ತೆ ಆಡುತ್ತೇವೆ. ಕಳೆದೆರಡು ವರ್ಷಗಳಿಂದ ನಾವು ಆಡುತ್ತಿರುವ ಗುಣಮಟ್ಟದ ಕ್ರಿಕೆಟ್, ನಂಬಿಕೆ ಏಷ್ಯಾಕಪ್ ಆಡುವಾಗಲೂ ಇತ್ತು. ಪಂದ್ಯಾವಳಿಯ ಪ್ರಾರಂಭದಲ್ಲಿ, ನಮ್ಮ ದೇಶದ ಜನರಿಗೆ ಈ ಪಂದ್ಯಾವಳಿಯನ್ನು ಐತಿಹಾಸಿಕವಾಗಿಸಲು ನಾವು ಬಯಸುತ್ತೇವೆ ಎಂದು ನಾನು ಹೇಳಿದ್ದೆ, ಮೊದಲು ಇಂಗ್ಲೆಂಡ್, ಇಂದು ಪಾಕಿಸ್ಥಾನ, ಇತರ ಪಂದ್ಯಗಳಿಗಾಗಿ ಎದುರು ನೋಡುತ್ತಿದ್ದೇವೆ” ಎಂದರು.
”ಈ ವಿಶ್ವಕಪ್ನಲ್ಲಿ ನಾವು ಧನಾತ್ಮಕ ಕ್ರಿಕೆಟ್ ಆಡಲು ಮತ್ತು ನಮ್ಮ ದೇಶಕ್ಕಾಗಿ ಸಾಕಷ್ಟು ಸಾಧನೆ ಮಾಡಲು ಪ್ರಯತ್ನಿಸುತ್ತೇವೆ. ಸ್ಪಿನ್ ಬೌಲಿಂಗ್ ವಿಭಾಗ ಉತ್ತಮ ಪ್ರದರ್ಶನ ನೀಡಿದೆ. ನಾವು ನೂರ್ಗೆ ಅವಕಾಶ ನೀಡಿದ್ದೇವೆ ಮತ್ತು ಅವರ ಮೇಲೆ ನಂಬಿಕೆ ಇಟ್ಟಿದ್ದೇವೆ, ಅವರು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ” ಎಂದರು.
”ಗುರ್ಬಾಜ್ ಮತ್ತು ಇಬ್ರಾಹಿಂ ಇನ್ನಿಂಗ್ಸ್ ಆರಂಭಿಸಿದ ರೀತಿ, ಅವರು ಆ ವೇಗ ಮತ್ತು ಆತ್ಮವಿಶ್ವಾಸವನ್ನು ನೀಡಿದರು. ಆಟ ಆರಂಭದಿಂದ ಕೊನೆಯವರೆಗೂ ನಮ್ಮ ಕೈಯಲ್ಲಿತ್ತು. ನಾನು ಮತ್ತು ರಹಮತ್ ಆಡಿದ ಕೊನೆಯ ಜೊತೆಯಾಟವೂ ಉತ್ತಮವಾಗಿತ್ತು” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.