Parijatha Flower: ಮನೆಯಂಗಳದ ಅಪ್ಸರೆ ಪಾರಿಜಾತ
Team Udayavani, Oct 24, 2023, 12:00 PM IST
ಪಾರಿಜಾತ ಹೆಸರಲ್ಲೇ ಏನೋ ವಿಶೇಷ ಸೆಳೆತವಿದೆ. ಮೋಹಕತೆಯಿದೆ. ಇದು ಪುಷ್ಪ ಪ್ರಬೇಧದಲ್ಲೇ ವಿಶೇಷ ಸ್ಥಾನಮಾನ ಪಡೆದಿರುವ ಹೂವು. ದೇವತೆಗಳು ಮತ್ತು ಅಸುರರು ಅಮೃತವನ್ನು ಪಡೆಯಲು ಸಮುದ್ರ ಮಥನ ನಡೆಸಿದ ಸಂದರ್ಭದಲ್ಲಿ ಕ್ಷೀರ ಸಮುದ್ರದಿಂದ 14 ಅಮೂಲ್ಯ ರತ್ನಗಳಲ್ಲದೆ 5 ಕಲ್ಪವೃಕ್ಷಗಳು ಹುಟ್ಟಿದವೆಂದು ನಂಬಿಕೆಯಿದೆ. ಅವುಗಳೆಂದರೆ ಪಾರಿಜಾತ, ಮಂದಾರ, ಸಂತಾನ, ನಾರೀಕೇಳ (ತೆಂಗು) ಮತ್ತು ಹರಿಚಂದನ.
ಭಗವಾನ್ ಶ್ರೀಕೃಷ್ಣನು ದೇವಲೋಕದಿಂದ ಪಾರಿಜಾತ ಸಸ್ಯವನ್ನು ತಂದು ಸತ್ಯಭಾಮೆಯ ಮನೆಯ ಅಂಗಳದಲ್ಲಿ ನೆಟ್ಟು, ಅದರ ಹೂವುಗಳು ರುಕ್ಮಿಣಿಯ ಮನೆಯ ಅಂಗಳಕ್ಕೆ ಬೀಳುವಂತೆ ಮಾಡುತ್ತಾನೆ. ಈ ಮೂಲಕ ಸತ್ಯಭಾಮೆಯ ಮನದಲ್ಲಿ ಮನೆ ಮಾಡಿದ್ದ ದುರಹಂಕಾರ ನಿರ್ಮೂಲವಾಯಿತು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಇನ್ನೊಂದು ಕಥೆಯ ಪ್ರಕಾರ ಸೂರ್ಯದೇವನನ್ನು ಪ್ರೀತಿಸುವ ಪಾರಿಜಾತಕ ಎಂಬ ರಾಜಕುಮಾರಿಯು ಅವನಿಂದ ಉಪೇಕ್ಷೆಗೊಳಗಾಗುತ್ತಾಳೆ. ಇದರಿಂದ ಮನನೊಂದ ರಾಜಕುಮಾರಿ, ಅಗ್ನಿಗೆ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ಪಾರಿಜಾತಕಳ ಚಿತಾಭಸ್ಮದಿಂದ ಒಂದು ಸಸ್ಯ ಹುಟ್ಟುತ್ತದೆ. ಅದೇ ಪಾರಿಜಾತ! ಸೂರ್ಯಾಸ್ತದ ನಂತರ ಅರಳುವ ಪಾರಿಜಾತದ ಹೂವು ಸೂರ್ಯೋದಯವಾಗುತ್ತಲೇ ಗಿಡದಿಂದ ಉದುರಿ ಬೀಳುವ ಮೂಲಕ, ತಾನು ಮತ್ತೆಂದೂ ಸೂರ್ಯನನ್ನು ನೋಡಲಾರನೆಂಬ ಪಾರಿಜಾತಳ ಪ್ರತಿಜ್ಞೆಯನ್ನು ಪಾಲಿಸುತ್ತದೆ ಎಂಬುದು ಕಥೆಯ ಸಾರ.
ರಾತ್ರಿ ಅರಳುವ ಹೂ:
ಸೂರ್ಯ ಕಿರಣಗಳ ಶಾಖ ತಡೆಯುವ ಶಕ್ತಿ ಇಲ್ಲದೇ ಉದುರಿ ಬೀಳುವ ಈ ಹೂವಿನ ಗುಣದಿಂದಾಗಿ ಈ ಮರಕ್ಕೆ “ಸೊರಗಿದ ಮರ’ವೆಂದೂ ಕರೆಯಲಾಗುತ್ತದೆ. ಪಾರಿಜಾತದಲ್ಲಿ ಎರಡು ಬಗೆಯಿದ್ದು, ಮೊದಲನೆಯದ್ದು ಆರು ಎಸಳುಗಳು ಪ್ರತ್ಯೇಕ ಪ್ರತ್ಯೇಕವಾಗಿದ್ದು ಮುದುರಿಕೊಂಡಿದ್ದರೆ, ಇನ್ನೊಂದು ಅಗಲ ಅಗಲವಾದ ದಳಗಳಿಂದ ಕೂಡಿದ್ದು ಒಂದಕ್ಕೊಂದು ಸೇರಿಕೊಂಡಿರುತ್ತದೆ. ಸುವಾಸನೆಯಿಂದ ಕೂಡಿರುವ ಈ ಹೂವು ಬಿಳಿಯ ಎಸಳುಗಳು, ಕೇಸರಿ ತೊಟ್ಟು ಮತ್ತು ಸೂಕ್ಷ್ಮ ದಳಗಳನ್ನು ಹೊಂದಿದೆ. ಬೀಜದಿಂದ ಹಾಗೂ ಮಳೆಗಾಲದಲ್ಲಿ ಗೆಲ್ಲುಗಳನ್ನು ಕಡಿದು ನೆಡುವ ಮೂಲಕವೂ ಈ ಗಿಡದ ವಂಶಾಭಿವೃದ್ಧಿ ಮಾಡಬಹುದಾಗಿದೆ. ಹತ್ತರಿಂದ ಹದಿನೈದು ಅಡಿ ಎತ್ತರದವರೆಗೂ ಬೆಳೆಯಬಲ್ಲ ಈ ಸಸ್ಯಕ್ಕೆ ಆಂಗ್ಲ ಭಾಷೆಯಲ್ಲಿ “ನೈಟ್ ಜಾಸ್ಮಿನ್’ ಅಥವಾ “ಕೋರಲ್ ಜಾಸ್ಮಿನ್’ ಎಂಬ ಹೆಸರಿದೆ.
ಔಷಧೀಯ ಗುಣ:
ಆಯುರ್ವೇದ ಹಾಗೂ ಸುಶ್ರುತ ವೈದ್ಯಶಾಸ್ತ್ರದ ಪ್ರಕಾರ, ಪಾರಿಜಾತ ಸಸ್ಯದಲ್ಲಿ ಔಷಧೀಯ ಗುಣವಿದ್ದು, ಇದರ ತೊಗಟೆಯಿಂದ ತಯಾರಿಸಲಾದ ಕಷಾಯದಿಂದ ಹುಣ್ಣು ಅಥವಾ ಗಾಯವನ್ನು ತೊಳೆದರೆ ಗಾಯ ಉಪಶಮನವಾಗುವುದು ಎನ್ನಲಾಗುತ್ತದೆ.
ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಗೆ ಈ ಸಸ್ಯದ ಎಲೆಯ ರಸವನ್ನು ಬಳಸುತ್ತಾರೆ. ಪಾರಿಜಾತ ಗಿಡದ ಎಲೆಯಿಂದ ತೆಗೆಯಲಾದ ರಸ ಸೇವಿಸಿದರೆ ಹೊಟ್ಟೆಯ ಜಂತುಹುಳ ಬಾಧೆ ಶಮನವಾಗುವುದು.
ಪಾರಿಜಾತವನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹೂವನ್ನು ಅರೆದು ಮುಖಕ್ಕೆ ಹಚ್ಚಿ ಅರ್ಧ ಗಂಟೆ ನಂತರ ತೊಳೆದರೆ ಮುಖವು ಕಾಂತಿಯುತವಾಗುತ್ತದೆ ಎಂಬ ಮಾತಿದೆ.
ದೇವಲೋಕದ ಪುಷ್ಪ :
ರಾತ್ರಿ ಹೊತ್ತೇ ಅರಳಿ ಸುಗಂಧ ಪಸರಿಸುವುದರಿಂದ ಇದನ್ನು “ಟ್ರೀ ಆಫ್ ಸ್ಯಾಡೆ°ಸ್’ ಎಂದೂ ಕರೆಯಲಾಗುತ್ತದೆ. ಮನೆಯಂಗಳದಲ್ಲಿ ಒಂದು ಪಾರಿಜಾತ ಗಿಡವಿದ್ದರೆ ಸಾಕು; ಸುತ್ತಮುತ್ತಲಿನ ಪ್ರದೇಶವನ್ನು ತಂಪಾಗಿಸುತ್ತದೆ. ಸಂಜೆ ಮತ್ತು ರಾತ್ರಿ ವೇಳೆ ಅರಳಿ ಕಂಪನ್ನು ಪಸರಿಸುವ ಈ ಹೂವನ್ನು ನೋಡಿದವರು, ಇದನ್ನು ದೇವಲೋಕದ ಪುಷ್ಪವೆನ್ನದೇ ಇರಲಾರರು.
ಸಂತೋಷ್ ರಾವ್. ಪೆರ್ಮುಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.