Abdul Nazir Saab: ಅಂಥಾ ಧೀಮಂತ ಇನ್‌ ಸಿಕ್ಕಿನಾ ಸ್ವಾಮಿ?


Team Udayavani, Oct 24, 2023, 1:30 PM IST

Abdul Nazir Saab: ಅಂಥಾ ಧೀಮಂತ ಇನ್‌ ಸಿಕ್ಕಿನಾ ಸ್ವಾಮಿ?

ಅಂವ ಇನ್ನೂ ಸ್ಯಾನೇ ವರ್ಸ ಬದುಕ್ಬೇಕಿತ್ತು ಬುಡಿ, ಅನ್ನಾಯ್ಕರ ದೇವ್ರು ಬ್ಯಾಗ್ನೆ ಕರ್ಕಬುಟ್ಟ’ ಎಂದು ಮಾತು ಶುರು ಮಾಡಿದರು ಆ ಅಜ್ಜ.  ನನಗೆ ಆಸಕ್ತಿಯಿಲ್ಲದ ವ್ಯಕ್ತಿಗಳ ಬಗ್ಗೆ ಯಾರಾದರೂ ಮಾತಾಡ­ತೊಡಗಿದರೆ ಇನ್ಯಾವುದೋ ವಿಷಯಕ್ಕೆ ಹೊರಳಿ ಅವರ ಮಾತನ್ನು ಮೊಟಕುಗೊಳಿಸಿಬಿಡುತ್ತೇನೆ. ಆದರೆ ಆ ತೊಂಭತ್ತರ ವಯಸ್ಸಿನ ಅಜ್ಜ ಮಾತಾಡುತ್ತಿದ್ದುದು ನಾನು ಗೌರವಾದರಗಳಿಂದ ಸ್ಮರಿಸಿಕೊಳ್ಳುವ ಒಂದು ಅದ್ಭುತ ವ್ಯಕ್ತಿತ್ವದ ಬಗ್ಗೆ.

ನನ್ನ ಕಣ್ಣು, ಕಿವಿ ಎರಡೂ ಚುರುಕಾದವು. “ಸಿಗ್ರೇಟು ಅನಾಹುತ ಮಾಡುºಡು¤ ಸಾ, ಒಂದ್‌ ದಿನ್ಕ ಒಂದ್‌ ಗುಡ್ಡ ಸೇದ್‌ ಬಿಸಾಕುºಡ್ತಿದ್ದ’ ಎಂದು ಬೇಸರದಿಂದ ನುಡಿದರು. ನನ್ನೊಡನೆಯ ಮಾತುಕತೆಯಲ್ಲಿ ಅವರು ಬಳಸುತ್ತಿದ್ದುದು ಅಭಿಮಾನದ ಏಕವಚನ. ಜನಸಾಮಾನ್ಯರು ರಾಜ್‌ಕುಮಾರನ ಬಗ್ಗೆ ಮಾತಾಡುವ ಹಾಗೆ.

“ನಿಮ್ಗೆ ಅಷ್ಟು ಚೆನ್ನಾಗಿ ಗೊತ್ತಾ ಅವ್ರು’ ಎಂದು ಕೇಳಿದೆ.

“ಗೊತ್ತಾ ಅಂತಿದ್ದರ್ಯಲ್ಲ ಸ್ವಾಮಿ? ನಾನು ಅವನೊಂದ್ಗ ಮೂವತ್‌ ವರ್ಸ ತಿರ್ಗಿನಿ’ ಎಂದು ಉದ್ಘಾರವೆತ್ತಿದರು.

“ಅವ್ರು ನಿಮ್ಗೆ ತುಂಬಾ ಆಪ್ತರಾಗಿದ್ರು ಅಂತೀರಿ.. ಅವ್ರನ್ನ ನೆನೆಸ್ಕಂಡಾಗ ಏನೇನು ನೆನಪಾಗುತ್ತೆ?’

“ಮರೆಯಕ್ಕಾದದ ಸ್ವಾಮಿ! ಕನ್ನಡ! ಅವನ್‌ ಕಂಡಗ ಕನ್ನಡ ಭಾಷೆನ ಮಾತಾಡªವ್ರ ನಾನು ನೋಡ್ದೆ ಇಲ್ಲ. ಅಷ್ಟು ಸೊಗಸಾಗಿ ಮಾತಾಡ್ತಿದ್ದ ‘.

“ನಿಮ್ಮೂರಿಗೆಲ್ಲ ಬರ್ತಿದ್ರಾ ಅವ್ರು?’

“ನಮ್ಮನೆಗ್‌ ಬಂದ್ರ ಇದೇ ಪಡಸಾಲೆ ಮ್ಯಾಲೆ ಮಲಿಕ ಬುಡ್ತಿದ್ದ. ಇದೇನ್‌ ಸ್ವಾಮಿ ನೀವು, ಬನ್ನಿ ಒಳಗ್‌ ಮಲಿಕ್ಕಳ್ಳಿ ಅಂದ್ರ, ಇಲ್ಲೇ ನನಗ ಸುಕ್ವಾಗಿ ನಿದ್ದ ಬತ್ತದ ತತ್ತಯ್ಯ ಒಂದ್‌ ಮಂದಲ್ಗಾé ಅಂದ್ಬುಟ್ಟು ದಿಂಬು ಮಂದಲ್ಗ ಈಸ್ಕಂಡು ಅಲ್ಲೇ ಹಾಸ್ಗಂಡು ಮಲಿಕಬುಡ್ತಿದ್ದ.’

ಈ ಸಂಗತಿಗಳು ಇತಿಹಾಸದ ಅಧಿಕೃತ ದಾಖಲೆಗಳಲ್ಲಿ ಸಿಗುವುದಿಲ್ಲ. ಜನಪದದ ಶಕ್ತಿಯೇ ಅಂಥದ್ದು. ಇತಿಹಾಸ ವಂಚಿಸಿದರೂ ಜನಪದ ವಂಚಿಸುವುದಿಲ್ಲ. ತೊಂಭತ್ತು ವರ್ಷದ ಅಜ್ಜ ಮೂವತ್ತೈದು ವರ್ಷಗಳ ಹಿಂದೆಯೇ ಗತಿಸಿದ ಆ ವ್ಯಕ್ತಿಯನ್ನು ನೆನೆಸಿಕೊಂಡು ಅಭಿಮಾನದಿಂದ ಗುಣಗಾನ ಮಾಡುತ್ತಿದ್ದುದೇ ಇದಕ್ಕೆ ಸಾಕ್ಷಿ.

“ತುಗ್ರಿ ಕಾಳಿನ್‌ ಸಾರು ಅಂದ್ರ ಅವನ್ಗ ಸ್ಯಾನೆ ಇಸ್ಟ, ಟೇಸ್ಟಲ್ಲಿ ಇದು ನಾವ್‌ ಮಾಡೋ ಮೀನ್‌ ಸಾರ್ನೂ ಹೊಡಾªಕ್ತದ ಕಯ್ನಾ ಅಂತಿದ್ದ. ಚಪ್ಪರಿಸ್ಕಂಡ್‌ ತಿನ್ತಿದ್ದ. ಅಂವ ಮನ್ಸ್‌ ಮಾಡಿದ್ರ ದೊಡೊªಡ್‌ ಬಂಗ್ಲ ಕಟ್ಟಸ್ಬುಬೌದಾಗಿತ್ತು. ಆದ್ರ ಸಾಯಗಂಟ್ಲೂ ಒಂದ್‌ ಮನ ಕಟ್ಗನಿಲ್ಲ. ಅದೇ ಹಳ ಮನೇಲೆ ಜೀಂವ ಬುಟ್ಟ…’

ಆ ಅಜ್ಜ ಮಾತು ಮುಂದುವರಿ­ಸಿದರು: “ಅಂವ ತನ್‌ ಮನ ಜನ್ಕ ಮಾಡ್ತ್ ಒಂದೇ ಒಂದು ಉಪಕಾರ ಅಂದ್ರ ಮೂರ್‌ ಹೆಣ್‌ ಮಕ್ಕಳ್ತೋವಿ ಒಳ್ಳೆ ಜಾಗಕ್ಕೆ ಮದುವ ಮಾಡುದ್ದು. ಅದು ಬುಟ್ರ ತನ್ನವ್ರಗಾ ಅಂತ ದುಡ್ಡು ಮಾಡ್ನಿಲ್ಲ, ಆಸ್ತಿ ಮಾಡ್ನಿಲ್ಲ. ಒಬ್‌ ಮಿನಿಷ್ಟ್ರಾಗಿದ್ರೂವ, ದಾರೀಲಿ ಆರಂಬಕಾರ್ರು, ದನ ಕಾಯೋರು, ಕೂಲಿ ಕಂಬ್ಳ ಮಾಡವ್ರು ಕಂಡ್ರ ಕಾರ್‌ ನಿಲ್ಲುಸ್ಬುಟ್ಟು ಕಸ್ಟಸುಖ ಇಚಾರಸ್ಬುಟ್ಟು ಮುಂದಕ್ಕೋಯ್ತಿದ್ದ, ಅಂಥ ಧೀಮಂತ ಇನ್‌ ಸಿಕ್ಕಿನಾ ಸ್ವಾಮಿ’ ಎಂದು ನಿಟ್ಟುಸಿರುಬಿಟ್ಟರು.

ಹೌದು, ನೀವು ಈಗಾಗಲೇ ಊಹಿಸಿರಬಹುದು. ಆ ಅಜ್ಜ ಮಾತಾಡುತ್ತಿದ್ದುದು, ನೀರ್‌ ಸಾಬ್‌ ಎಂದೇ ಖ್ಯಾತರಾಗಿದ್ದ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ದಿವಂಗತ ಅಬ್ದುಲ್‌ ನಜೀರ್‌ ಸಾಬ್‌ ಅವರ ಬಗ್ಗೆ.

(8-10-2023ರಂದು ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದೆ.)

-ಡಾ. ಗವಿ ಸ್ವಾಮಿ, ಗುಂಡ್ಲುಪೇಟೆ

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.