Raichur: ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯಲ್ಲಿ ಭೂಕಂಪನ; ಬೆಚ್ಚಿಬಿದ್ದ ಜನತೆ
Team Udayavani, Oct 24, 2023, 12:36 PM IST
ಹಟ್ಟಿ(ರಾಯಚೂರು): ಹಟ್ಟಿ ಚಿನ್ನ ದಗಣಿ ಕಂಪನಿಯಲ್ಲಿ ಸೋಮವಾರ ಬೆಳಗ್ಗಿನ 2.51ರ ಸುಮಾರಿಗೆ 2.7 ತೀವ್ರತೆಯ ಭೂಕಂಪ ಸಂಭವಿಸಿದ್ದು ಸುತ್ತಲಿನ ಹಳ್ಳಿಗಳ ಜನರು ಆತಂಕಗೊಂಡಿದ್ದಾರೆ.
ಲಿಂಗಸುಗೂರು ತಾಲೂಕಿನಿಂದ 13 ಕಿ.ಮೀ ಪೂರ್ವ ದಿಕ್ಕಿನ ವ್ಯಾಪ್ತಿಯ ಹಟ್ಟಿ ಪ.ಪಂ, ಗೆಜ್ಜಲಗಟ್ಟಾ ಗ್ರಾಪಂ ವ್ಯಾಪ್ತಿಯ ಗೆಜ್ಜಲಗಟ್ಟಾ, ನಿಲೋಗಲ್, ವೀರಾಪೂರ್ ಗ್ರಾಮದಲ್ಲಿ ಭೂ ಕಂಪನಗೊಂಡಿರುವುದನ್ನು ಕರ್ನಾಟಕ ರಾಜ್ಯ ವಿಪತ್ತು ಮೇಲ್ವಿಚಾರಣಾ ಕೇಂದ್ರ ಧೃಡಪಡಿಸಿದೆ.
ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ಸೋಮವಾರ ಬೆಳಗಿನ ಜಾವ ಕಂಪನದ ಅನುಭವ ಉಂಟಾಗಿದೆ. ಟೇಬಲ್ ಫ್ಯಾನ್‌ಗಳು, ಮನೆಯಲ್ಲಿನ ಪಾತ್ರೆ-ಪಗಡೆಗಳು ಬಿದ್ದಿವೆ. ಅಲ್ಮೆರಾ ಬಾಗಿಲು ಏಕಾಏಕಿ ತೆಗೆದಿರುವುದು, ಶ್ವಾನ ಬೊಗಳುವುದು ಸೇರಿದಂತೆ ಹಲವು ಘಟನೆಗಳು ಅನುಭವಕ್ಕೆ ಬಂದರೂ ಗಣಿ ವ್ಯಾಪ್ತಿಯಲ್ಲಿ ಸಹಜವಾಗಿಯೆ ಸ್ಫೋಟ ನಡೆಯುವುದರಿಂದ ಕೆಲವರು ನಿರ್ಲಕ್ಷ್ಯ ವಹಿಸಿದ್ದಾರೆ. ಸೋಮವಾರ ಮಧ್ಯಾಹ್ನದ ಸುಮಾರಿಗೆ ಸಾರ್ವಜನಿಕರಲ್ಲಿ ಚರ್ಚೆ ಜೋರಾಗಿದ್ದು ಇಲಾಖೆ ವರದಿ ಬಿಡುಗಡೆ ಮಾಡಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಗಮನಿಸಿದ ಪ್ರಮಾಣ ಮತ್ತು ತೀವ್ರತೆ ಎರಡು ಕಡಿಮೆ ಇರುವುದರಿಂದ ಸಮುದಾಯಕ್ಕೆ ಯಾವುದೆ ಅಪಾಯವಿಲ್ಲ ಎಂದು ಕೆಎಸ್‌ಎನ್‌ಡಿಎಂಸಿ ಪ್ರಕಟಣೆ ಹೊರಡಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.