Sanadalwood: ರಮ್ಯಾ ನಿರ್ಮಾಣದ ʼಸ್ವಾತಿ ಮುತ್ತಿನ ಮಳೆ ಹನಿಯೇʼ ರಿಲೀಸ್‌ಗೆ ಡೇಟ್ ಫಿಕ್ಸ್
Team Udayavani, Oct 24, 2023, 1:09 PM IST
ಬೆಂಗಳೂರು: ಮೋಹಕ ತಾರೆ ರಮ್ಯಾ ಅವರ ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ನ ಮೊದಲ ಸಿನಿಮಾ ʼಸ್ವಾತಿ ಮುತ್ತಿನ ಮಳೆ ಹನಿಯೇʼ ವಿಜಯದಶಮಿ ಹಬ್ಬಕ್ಕೆ ಬಿಗ್ ಅಪ್ಡೇಟ್ ನೀಡಿದೆ.
ರಾಜ್ ಬಿ ಶೆಟ್ಟಿ ಹಾಗೂ ಸಿರಿ ರವಿ ಕುಮಾರ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ʼಸ್ವಾತಿ ಮತ್ತಿನ ಮಳೆ ಹನಿಯೇʼ ಸಿನಿಮಾ ಶೂಟಿಂಗ್ ಮುಕ್ತಾಯದ ಬಳಿಕ ಟೈಟಲ್ ವಿವಾದದಲ್ಲಿ ಸಿಲುಕಿಕೊಂಡಿತ್ತು. ವಿವಾದದ ಬಳಿಕ ಇದೀಗ ಸಿನಿಮಾ ತಂಡ ಬಿಗ್ ಅಪ್ಡೇಟ್‌ವೊಂದನ್ನು ನೀಡಿದೆ.
ಮೋಹಕ ತಾರೆ ರಮ್ಯಾ ನಿರ್ಮಾಣದ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಅವರು ನಿರ್ದೇಶನದೊಂದಿಗೆ ಲೀಡ್ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ವಿಜಯದಶಮಿ ಹಬ್ಬದಂದು ಸಿನಿಮಾದ ರಿಲೀಸ್ ಡೇಟದ ನ್ನು ಅನೌನ್ಸ್ ಮಾಡಿದೆ.
ಇದನ್ನೂ ಓದಿ: Tollywood: ದಸರಾ ಹಬ್ಬಕ್ಕೆ ಸ್ಪೆಷೆಲ್ ಅಪ್ಡೇಟ್ ಕೊಟ್ಟ ಮಹೇಶ್ ಬಾಬು ʼಗುಂಟೂರು ಕಾರಮ್ʼ
“ಎಲ್ಲರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು! ನಮ್ಮ ಚಿತ್ರ “ಸ್ವಾತಿ ಮುತ್ತಿನ ಮಳೆ ಹನಿಯೇ” ನವೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ” ಎಂದು ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಹೇಳಿದೆ.
ರಾಜ್ ಬಿ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ಅವರೊಂದಿಗೆ ಬಾಲಾಜಿ ಮನೋಹರ್, ರೇಖಾ ಕೂಡ್ಲಿಗಿ ,ಸ್ನೇಹಶರ್ಮಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಾಜ್.ಬಿ.ಶೆಟ್ಟಿ ಅವರು ʼಗುರುಡ ಗಮನ ವೃಷಭ ವಾಹನʼಕ್ಕೆ ಮ್ಯೂಸಿಕ್ ನೀಡಿದ್ದ ಮಿಧುನ್ ಮುಕುಂದನ್ ಈ ಚಿತತ್ರಕ್ಕೆ ಮ್ಯೂಸಿಕ್ ನೀಡಿದ್ದಾರೆ. ಪ್ರವೀಣ್ ಶ್ರೀಯಾನ್ ಈ ಚಿತ್ರಕ್ಕೆ ಡಿಓಪಿ ಆಗಿ ವರ್ಕ್ ಮಾಡಿದ್ದಾರೆ.
ಎಲ್ಲರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು!
ನಮ್ಮ ಚಿತ್ರ “ಸ್ವಾತಿ ಮುತ್ತಿನ ಮಳೆ ಹನಿಯೇ” ನವೆಂಬರ್ ೨೪ ರಂದು ರಾಜ್ಯಾದ್ಯಂತ ಬಿಡುಗಡೆ.Wish you all Happy Vijayadashami. We are elated to share the release date of #SwathiMutthinaMaleHaniye with all of you. See you at the movies 🍿#SMMHonNovember24… pic.twitter.com/KIdCQxefyR
— Applebox Studios (@StudiosApplebox) October 24, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.