Kasaragod ಮಹಿಳೆಯ ಆರೈಕೆ: ಮರಳಿ ಕುಟುಂಬಸ್ಥರ ಮಡಿಲಿಗೆ
Team Udayavani, Oct 24, 2023, 11:06 PM IST
ಮಂಗಳೂರು: ಕಾಸರಗೋಡು ಬಸ್ ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ತಮಿಳುನಾಡು ಮೂಲದ ಮಹಿಳೆ ಮಾರಿಮುತ್ತು (47) ಅವರನ್ನು ಅ. 14ರಂದು ಕಾಸರಗೋಡು ಪಿಂಕ್ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಿಸಿ ಮಂಜೇಶ್ವರದ ಪಾವೂರಿನ ಸ್ನೇಹಾಲಯ ಸಂಸ್ಥೆಗೆ ಒಪ್ಪಿಸಿದ್ದು, ಅಲ್ಲಿ ಆರೈಕೆ ಮಾಡಿ ಇದೀಗ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮಾರಿಮುತ್ತು, ಕೆಲಸದ ನಿಮಿತ್ತ ಕಾಸರಗೋಡಿಗೆ ಬಂದ ಸಂದರ್ಭ ವೈಯುಕ್ತಿಕ ಸಮಸ್ಯೆಗಳು ಎದುರಾಗಿ ಮಾನಸಿಕ ಆರೋಗ್ಯದ ಸಮಸ್ಯೆಗೆ ಒಳಗಾಗಿದ್ದರು. ಕಾಸರಗೋಡು ಬಸ್ ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಮಾರಿಮುತ್ತು ಅವರನ್ನು ಸ್ನೇಹಾಲಯಕ್ಕೆ ದಾಖಲಿಸಿದ ಬಳಿಕ ಅವರ ಆರೋಗ್ಯದಲ್ಲಿ ಸುಧಾರಣೆ ಉಂಟಾಗಿದೆ. ಮಾರಿಮುತ್ತು ಕುಟುಂಬದ ಬಗ್ಗೆ ಸಂಸ್ಥೆಯ ಸಿಬಂದಿಗಳ ಜತೆ ಮಾಹಿತಿ ಹಂಚಿಕೊಂಡಿದ್ದರು. ಬಳಿಕ ಕುಟುಂಬಸ್ಥರನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು. ಕುಟುಂಬ ಸದಸ್ಯರು ಸ್ನೇಹಾಲಯಕ್ಕೆ ಆಗಮಿಸಿ ಮಾರಿಮುತ್ತು ಅವರನ್ನು ತಮ್ಮೊಂದಿಗೆ ಕರೆದೊಯ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.