Asian ಪ್ಯಾರಾ ಗೇಮ್ಸ್: ಭಾರತಕ್ಕೆ ಒಂದೇ ದಿನ 18 ಪದಕ
Team Udayavani, Oct 24, 2023, 11:22 PM IST
ಹ್ಯಾಂಗ್ಝೂ (ಚೀನ): ಏಷ್ಯನ್ ಪ್ಯಾರಾ ಗೇಮ್ಸ್ನ ಮಂಗಳವಾರದ ಸ್ಪರ್ಧೆಗಳಲ್ಲಿ ಭಾರತ ಬರೋಬ್ಬರಿ 18 ಪದಕಗಳನ್ನು ಜಯಿಸಿದೆ. ಇದರಲ್ಲಿ 4 ಚಿನ್ನದ ಪದಕಗಳು ಸೇರಿವೆ. ಇದರೊಂದಿಗೆ ಮೊದಲೆರಡು ದಿನಗಳಲ್ಲಿ ಭಾರತದ ಪದಕಗಳ ಸಂಖ್ಯೆ 35ಕ್ಕೆ ಏರಿದೆ.
ಪದಕಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ. 10 ಚಿನ್ನ, 12 ಬೆಳ್ಳಿ ಮತ್ತು 13 ಕಂಚಿನ ಪದಕಗಳು ಭಾರತದ ಖಾತೆಯಲ್ಲಿವೆ. ಚೀನ (155), ಇರಾನ್ (44) ಮತ್ತು ಉಜ್ಬೆಕಿಸ್ಥಾನ್ (38) ಮೊದಲ 3 ಸ್ಥಾನದಲ್ಲಿವೆ.
ಪ್ರಾಚಿ ಯಾದವ್ ಸಾಧನೆ
ಪ್ರಾಚಿ ದೇಸಾಯಿ ಕನೋಯಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಸಾಧಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸೋಮವಾರವಷ್ಟೇ ವಿಎಲ್2 ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದ ಪ್ರಾಚಿ, ಮಂಗಳವಾರ ಕೆಎಲ್2 ಸ್ಪರ್ಧೆಯಲ್ಲಿ ಚಿನ್ನಕ್ಕೆ ಮುತ್ತಿಟ್ಟರು.
ಮಂಗಳವಾರ ಚಿನ್ನದ ಪದಕ ಜಯಿಸಿದ ಭಾರತದ ಇತರ ಸಾಧಕರೆಂದರೆ ದೀಪ್ತಿ ಜೀವಾಂಜಿ (ವನಿತೆಯರ ಟಿ20 400 ಮೀ.), ಕರ್ನಾಟಕದ ಶರತ್ ಶಂಕರಪ್ಪ ಮಾಕನಹಳ್ಳಿ (ಪುರುಷರ ಟಿ13 5,000 ಮೀ.) ಮತ್ತು ನೀರಜ್ ಯಾದವ್ (ಪುರುಷರ ಎಫ್54/55/56 ಡಿಸ್ಕಸ್ ತ್ರೋ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.