Hubballi: ಗರ್ಭಕೋಶ ಗಡ್ಡೆ ಕರಗಿಸಲು ಪಂಚಗವ್ಯ ಚಿಕಿತ್ಸೆಯಲ್ಲಿದೆ ಮದ್ದು
ಪಂಚಗವ್ಯ ಚಿಕಿತ್ಸೆ ಎಂದರೆ ವಿಶೇಷ ಚಿಕಿತ್ಸೆ ಏನು ಅಲ್ಲ.
Team Udayavani, Oct 25, 2023, 1:39 PM IST
ಹುಬ್ಬಳ್ಳಿ: ಕ್ಯಾನ್ಸರ್ ರೂಪ ತಾಳಬಹುದಾದ ಗರ್ಭಕೋಶ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ನಡೆಸಿ ತೆಗೆಯುವ ಬದಲು ಪಂಚಗವ್ಯ-ಮರ್ಮ ಚಿಕಿತ್ಸೆ ಹಾಗೂ ಅರೋಮಾ ಥೆರಪಿ ಮೂಲಕ ವಾಸಿ ಮಾಡಬಹುದು.
ಹೀಗೆಂದವರು ನಗರದ ಪಾರಂಪರಿಕ ಗವ್ಯಸಿದ್ಧ ವೈದ್ಯೆ ಎನ್.ಎಸ್.ಸವಿತಾ. “ಉದಯವಾಣಿ’ ಜತೆ ಮಾತ ನಾ ಡಿದ ಅವರು ಹೇಳಿದ್ದಿಷ್ಟು: ಬದಲಾದ ಜೀವನಶೈಲಿ, ಆಹಾರ ಪದ್ಧತಿ ಇನ್ನಿತರ ಕಾರಣಗಳಿಂದಾಗಿ ಸಣ್ಣ ವಯಸ್ಸಿನ ಮಹಿಳೆಯರಲ್ಲಿಯೂ ಈ ಸಮಸ್ಯೆ ಎದುರಾಗುತ್ತಿದೆ. ಗರ್ಭಕೋಶ ಗಡ್ಡೆ ಎಂದ ಕೂಡಲೇ ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ , ಅದನ್ನು ಮೀರಿದ್ದರೆ ಗರ್ಭಕೋಶವನ್ನೇ ತೆಗೆದು ಹಾಕುವುದು ಸದ್ಯದ ವೈದ್ಯ ಪದ್ಧತಿಯಲ್ಲಿದೆ. ಆದರೆ, ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಪಂಚಗವ್ಯ ಇನ್ನಿತರ ಗಿಡಮೂಲಿಕೆ ಔಷಧಗಳಿಂದ ವಾಸಿ ಪಡಿಸಬಹುದಾಗಿದೆ.
ಪಂಚಗವ್ಯ ಚಿಕಿತ್ಸೆ ಎಂದರೆ ವಿಶೇಷ ಚಿಕಿತ್ಸೆ ಏನು ಅಲ್ಲ. ಪಂಚಗವ್ಯ ಎಂಬ ಹೆಸರು ಸೂಚಿಸಿದಂತೆಯೇ ದೇಸಿ ಹಸುವಿನ ಉತ್ಪನ್ನಗಳನ್ನು ಬಳಸಿ ತಯಾರಿಸಿದ ಔಷಧವಾಗಿದೆ. ಪಂಚಗವ್ಯದ ಜತೆಗೆ ಕೆಲ ಗಿಡಮೂಲಿಕೆಗಳನ್ನು ಸೇರಿ ಮಾತ್ರೆ
ರೂಪದಲ್ಲಿ ಔಷಧ ತಯಾರಿಸಲಾಗುತ್ತದೆ.
ಗರ್ಭಕೋಶ ಗಡ್ಡೆ ಸಮಸ್ಯೆ ಇದ್ದವರು ಈ ವಟಿ(ಮಾತ್ರೆ) ತೆಗೆದುಕೊಳ್ಳುವುದರ ಜತೆಗೆ ಪಥ್ಯೆಯನ್ನು ಕಟ್ಟುನಿಟ್ಟಾಗಿ
ಪಾಲಿಸಬೇಕಾಗಿದೆ. ಮುಖ್ಯವಾಗಿ ಮೈದಾ ಉತ್ಪನ್ನಗಳು, ಜಂಕ್‌ಫುಡ್ ಸೇರಿದಂತೆ ನಾವು ಸೂಚಿಸುವ ಆಹಾರ, ತರಕಾರಿ, ಹಣ್ಣು, ಇನ್ನಿತರ ಕೆಲ ಪದಾರ್ಥಗಳನ್ನು ಬಿಡಬೇಕಾಗುತ್ತದೆ. ಹೇಳಿಕೊಟ್ಟ ಯೋಗದ ಆಸನಗಳನ್ನು ನಿಯಮಿತವಾಗಿ ಮಾಡಿದರೆ ಖಂಡಿತಾ ಗರ್ಭಕೋಶದ ಗಡ್ಡೆ ಶಸ್ತ್ರಚಿಕಿತ್ಸೆ ಇಲ್ಲದೆಯೇ ವಾಸಿ ಮಾಡಬಹುದಾಗಿದೆ.
ಸುಮಾರು ಮೂರು ವರ್ಷಗಳಿಂದ ಗರ್ಭಕೋಶದ ಗಡ್ಡೆ ಸಂಕಷ್ಟ ಅನುಭವಿಸುತ್ತಿದ್ದ ಮಹಿಳೆಯೊಬ್ಬರು ರಕ್ತಸ್ರಾವ,
ಹೊಟ್ಟೆನೋವಿನಿಂದ ಬಳಲುತ್ತಿದ್ದರು. ತಪಾ ಸಣೆ ನಡೆಸಿದಾಗ ಸುಮಾರು ಏಳು ಸೆಂಟಿ ಮೀಟರ್ ಗಾತ್ರದ ಗಡ್ಡೆ ಇರುವುದು
ತಿಳಿಯಿತು. ನಾಡಿ ಪರೀಕ್ಷೆ ಕೈಗೊಂಡ ನಂತರ ಪಂಚಗವ್ಯ ಚಿಕಿತ್ಸೆ ಆರಂಭಿಸಲಾಯಿತು. ಕಟ್ಟುನಿಟ್ಟು ಪಥ್ಯೆ ಮಾಡುವಂತೆ
ಸೂಚಿಸಿದೆ. ಯೋಗಾಸನ ಬಗ್ಗೆ ಹೇಳಿಕೊಟ್ಟಿದ್ದೆ. ಚಿಕಿತ್ಸೆಗೆ ಸ್ಪಂದಿಸಿದರು. ಪೂರ್ಣ ಪ್ರಮಾಣದಲ್ಲಿ ಗಡ್ಡೆ ಕರಗಿತು. ಇದೇ ರೀತಿ ಹಲವು ಮಹಿಳೆಯರಿಗೆ ನೀಡಿದ ಚಿಕಿತ್ಸೆಯಲ್ಲೂ ಉತ್ತಮ ಫಲಿತಾಂಶ ಬಂದಿದೆ.
ರಾಷ್ಟ್ರ ಮಟ್ಟದ ಪ್ರಶಸ್ತಿ: ಪಂಚಗವ್ಯ ಚಿಕಿತ್ಸೆಯಡಿ ಗರ್ಭಕೋಶದ ಗಡ್ಡೆಯನ್ನು ವಾಸಿ ಮಾಡಿದ್ದರ ಹಿನ್ನೆಲೆಯಲ್ಲಿ ಕಾಂಚಿಪುರಂನ “ಪಂಚಗವ್ಯ ವಿದ್ಯಾಪೀಠಂ’ 2022ರಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಪಾರಂಪರಿಕ ವೈದ್ಯೆ ಎಂಬ ಹೆಮ್ಮೆ ನನಗಿದೆ. ಇದೀಗ ಬುದ್ಧಿಮಾಂದ್ಯ ಮಕ್ಕಳ ಮೇಲೆ ಪಂಚಗವ್ಯ ಚಿಕಿತ್ಸೆ ಪ್ರಯೋಗ ನಡೆಸಿದ್ದೇನೆ. ಫಲಿತಾಂಶ ಇನ್ನಷ್ಟೇ ಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
MUST WATCH
ಹೊಸ ಸೇರ್ಪಡೆ
By Election: ರಾಜ್ಯದ ಮೂರು ಕ್ಷೇತ್ರಗಳ ಪೈಕಿ ಎನ್‌ಡಿಎಗೆ ಯಾವುದು? ಕಾಂಗ್ರೆಸ್‌ಗೆ ಎಷ್ಟು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.