Bagalkote: 2025ಕ್ಕೆ 1 ಲಕ್ಷ ಟನ್‌ ಕಬ್ಬು ನುರಿಸುವ ಗುರಿ

ಕಬ್ಬು ರೈತರಿಗೆ ಒಳ್ಳೆಯ ಆದಾಯ ತಂದು ಕೊಡುತ್ತಿದೆ.

Team Udayavani, Oct 25, 2023, 6:05 PM IST

Bagalkote: 2025ಕ್ಕೆ 1 ಲಕ್ಷ ಟನ್‌ ಕಬ್ಬು ನುರಿಸುವ ಗುರಿ

ಬಾಗಲಕೋಟೆ: ನಿರಾಣಿ ಉದ್ಯಮ ಸಮೂಹ ಈಗಾಗಲೇ ಇಥೇನಾಲ್‌ ಉತ್ಪಾದನೆಯಲ್ಲಿ ದೇಶದಲ್ಲಿಯೇ ನಂ. 1 ಸ್ಥಾನದಲ್ಲಿದ್ದು, 2025ರ ವೇಳೆಗೆ 1 ಲಕ್ಷ ಟನ್‌ ಕಬ್ಬು ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಮೂಲಕ ಸಕ್ಕರೆ ಉತ್ಪಾದನೆಯಲ್ಲಿಯೂ ನಂ.1 ಸ್ಥಾನಕ್ಕೆ ಏರಲಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಮುಧೋಳದ ನಿರಾಣಿ ಶುಗರ್ಸ್‌ ಕಾರ್ಖಾನೆಯಲ್ಲಿ ನಡೆದ 2023-24ನೇ ಸಾಲಿನ  ಕಬ್ಬು ನುರಿಸುವ ಹಂಗಾಮು ಪ್ರಾರಂಭದ
ನಿಮಿತ್ತ ಆಯೋಜಿಸಿದ ಸನ್‌ 2023-24ನೇ ಸಾಲಿನ ಬಾಯ್ಲರ್‌ ಅಗ್ನಿ ಪ್ರದೀಪನ ಹಾಗೂ ಕೇನ್‌ ಕ್ಯಾರಿಯರ್‌ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ 25 ವರ್ಷಗಳಲ್ಲಿ ನಿರಾಣಿ ಸಮೂಹ ದೇಶದ ಅತಿ ಚಿಕ್ಕ ಕಾರ್ಖಾನೆಯಿಂದ ಆರಂಭಗೊಂಡು, ಇಂದು ದೇಶದ ದೊಡ್ಡ
ಕಾರ್ಖಾನೆಯಾಗಿ ಬೆಳೆದಿದೆ. ಇದಕ್ಕೆ ರೈತ ಕುಟುಂಬಗಳ ಪ್ರೀತಿ, ಅಭಿಮಾನ ಹಾಗೂ ನಿರಾಣಿ ಸಮೂಹದ ಮೇಲೆ ಅವರಿಟ್ಟ ವಿಶ್ವಾಸವೇ ಕಾರಣ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ಅನುಗುಣವಾಗಿ ನಿರಾಣಿ ಸಮೂಹ, ಇಂಧನ ಕ್ಷೇತ್ರದಲ್ಲಿ ದಿಟ್ಟ ಹೆಚ್ಚೆ ಇಟ್ಟಿದೆ. ಈಗಾಗಲೇ ಇಥೆನಾಲ್‌ ಉತ್ಪಾದನೆಯಲ್ಲಿ ನಿರಾಣಿ ಸಮೂಹ ಜಗತ್ತಿನಲ್ಲಿ ಅಗ್ರ ಸ್ಥಾನದಲ್ಲಿದೆ. ಸಾಯಿಪ್ರೀಯಾ ಶುಗರ್ಸ್‌ ಆವರಣದಲ್ಲಿ ಸಿಎನ್‌ಜಿ ಉತ್ಪಾದನೆಯನ್ನು ಪ್ರಾಯೋಗಿಕವಾಗಿ ನಡೆಸಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ
ಕಾರ್ಖಾನೆಗಳಿಗೆ ಇದು ವಿಸ್ತರಣೆಯಾಗಲಿದೆ ಎಂದರು.

ರೈತ ಬೆಳೆದ ಕಬ್ಬಿಗೆ ಈಗ ನಿಶ್ಚಿತ ಮಾರುಕಟ್ಟೆ ಲಭಿಸಿದೆ. ಕಬ್ಬು ರೈತರಿಗೆ ಒಳ್ಳೆಯ ಆದಾಯ ತಂದು ಕೊಡುತ್ತಿದೆ. ಕೇಂದ್ರ ಸರ್ಕಾರದ ಇಬಿಪಿ ನೀತಿಯು ರೈತರನ್ನು ರಾಷ್ಟ್ರೀಯ ಇಂಧನ ಉತ್ಪಾದಕನನ್ನಾಗಿ ಪರಿವರ್ತಿಸಲಿದೆ. ಇದು ಇಂಧನ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಗೆ ಕಾರಣವಾಗಲಿದೆ. ಈ ಹಂಗಾಮಿನಲ್ಲಿಯೂ ರೈತರು ನಿರಾಣಿ ಸಮೂಹದ ಕಾರ್ಖಾನೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ನೀಡಿ ಹಂಗಾಮು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಕೇವಲ 500 ಮೆಟ್ರಿಕ್‌ ಟನ್‌ ಕಬ್ಬು ನುರಿಸುವ ಕಾರ್ಖಾನೆಯಿಂದ ಆರಂಭಗೊಂಡ ನಿರಾಣಿ ಉದ್ಯಮ ಸಮೂಹ, ಇಂದು
ಬಾಗಲಕೋಟೆ ಜಿಲ್ಲೆಯಲ್ಲಿಯೇ ಸುಮಾರು ಆರು ಸಕ್ಕರೆ ಕಾರ್ಖಾನೆಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಾತ್ರ ಇದ್ದ ನಮ್ಮ ರೈತರ ಸೇವಾ ಉದ್ಯಮ, ಇಂದು ದಕ್ಷಿಣಕ್ಕೂ ವಿಸ್ತರಿಸಿದೆ. ರೈತರಿಂದ ಕಬ್ಬು ಪಡೆದು, ಬಿಲ್‌ ಕೊಡುವುದು ಅಷ್ಟೇ ನಮ್ಮ ಉದ್ದೇಶವಲ್ಲ.ರೈತರ ಆರ್ಥಿಕಮಟ್ಟ ಸುಧಾರಿಸಲು ನಿರಂತರ ಸಲಹೆ-ತರಬೇತಿ, ಕೃಷಿ ತಂತ್ರಜ್ಞಾನ ಅಳವಡಿಕೆ ಸಹಿತ ಎಲ್ಲ ರೀತಿಯ ರೈತಸ್ನೇಹಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ನಿರಾಣಿ ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ,
ರೈತ ಮುಖಂಡರಾದ ವೆಂಕಣ್ಣ ಗಿಡ್ಡಪ್ಪನವರ, ಉದಯ ಸಾರವಾಡ, ಲಕ್ಷ್ಮಣ ದೊಡಮನಿ, ಗಿರಿಮಲ್ಲಯ್ಯ ಗಣಾಚಾರಿ, ಶಿವನಗೌಡ
ಪಾಟೀಲ, ಭರಮು ಉಳ್ಳಾಗಡ್ಡಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಮುತ್ತಪ್ಪ ಗಣಿ, ಸಿದ್ದಪ್ಪ ಕಡಪಟ್ಟಿ, ಸದಾಶಿವ ಕದಂ, ಸತ್ಯಪ್ಪ ಅಂತಾಪುರ ಮುಂತಾದವರು ಪಾಲ್ಗೊಂಡಿದ್ದರು.

ಕಳೆದ 25 ವರ್ಷಗಳಲ್ಲಿ ನಿರಾಣಿ ಸಮೂಹ ದೇಶದ ಅತಿ ಚಿಕ್ಕ ಕಾರ್ಖಾನೆಯಿಂದ ಆರಂಭಗೊಂಡು, ಇಂದು ದೇಶದ ದೊಡ್ಡ ಕಾರ್ಖಾನೆಯಾಗಿ ಬೆಳೆದಿದೆ. ಇದಕ್ಕೆ ರೈತ ಕುಟುಂಬಗಳ ಪ್ರೀತಿ, ಅಭಿಮಾನ ಹಾಗೂ ನಿರಾಣಿ ಸಮೂಹದ ಮೇಲೆ ಅವರಿಟ್ಟ ವಿಶ್ವಾಸವೇ ಕಾರಣ.
ಡಾ| ಮುರುಗೇಶ ನಿರಾಣಿ, ಮಾಜಿ
ಸಚಿವರು ಹಾಗೂ ಸಂಸ್ಥಾಪಕ ಅಧ್ಯಕ್ಷರು,
ಎಂಆರ್‌ಎನ್‌ ಉದ್ಯಮ ಸಮೂಹ

ಟಾಪ್ ನ್ಯೂಸ್

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…

Putturu-Police

Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

Explained: ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

8

Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.