Rajasthan: ಮಹಿಳೆಯರಿಗೆ 10 ಸಾವಿರ- ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಣೆ
Team Udayavani, Oct 25, 2023, 11:06 PM IST
ಹೊಸದಿಲ್ಲಿ: ಮಧ್ಯಪ್ರದೇಶದ ಬಳಿಕ ರಾಜಸ್ಥಾನದಲ್ಲಿ ಕೂಡ ಮಹಿಳೆಯರನ್ನು ಕೇಂದ್ರೀಕರಿಸಿ ಭರವಸೆಗಳನ್ನು ಕಾಂಗ್ರೆಸ್ ನೀಡಿದೆ. ಮಹಿಳೆಯೇ ಮುಖ್ಯ ಸ್ಥೆಯಾಗಿರುವ ಕುಟುಂಬಕ್ಕೆ ವಾರ್ಷಿಕವಾಗಿ 10 ಸಾವಿರ ರೂ., 500 ರೂ.ಗೆ ಅಡುಗೆ ಅನಿಲ ಸಿಲಿಂಡರ್ ನೀಡುವ ವಾಗ್ಧಾನ ಮಾಡಿದ್ದಾರೆ.
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಗೆದ್ದಿತ್ತು. ರಾಜಸ್ಥಾನ ಝುನ್‌ರನ್‌ನಲ್ಲಿ ರ್ಯಾಲಿಯಲ್ಲಿ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್ ಉಜ್ವಲ ಯೋಜನೆಯ ಅನ್ವಯ ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಸಿಲಿಂಡರ್ ಪಡೆದುಕೊಳ್ಳಲು ಅರ್ಹರಾಗಿ ದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ 500 ರೂ.ಗೆ ಸಿಲಿಂಡರ್ ನೀಡುತ್ತೇವೆ ಎಂದು ಗೆಹ್ಲೋಟ್ ವಾಗ್ಧಾನ ಮಾಡಿದ್ದಾರೆ. ಮಹಿಳೆಯೇ ಮುಖ್ಯಸ್ಥೆ ಯಾಗಿರುವ ಕುಟುಂಬಕ್ಕೆ ಮೂರು ಕಂತು ಗಳಲ್ಲಿ ಪ್ರತೀ ವರ್ಷ 10 ಸಾವಿರ ರೂ.ಗಳನ್ನು ಖಾತೆಗೆ ನೀಡಲಾಗುತ್ತದೆ ಎಂದರು.
ಪ್ರಿಯಾಂಕಾ ಆಕ್ರೋಶ: ಇದೇ ರ್ಯಾಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಪ್ರಿಯಾಂಕಾ ವಾದ್ರಾ ಮಾತ ನಾಡಿ ಬಿಜೆಪಿ ನೇತೃ ತ್ವದ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ಸಂಸತ್‌ನಲ್ಲಿ ಅನುಮೋದನೆಗೊಂಡ ಮಹಿಳಾ ಮೀಸಲು ಮಸೂದೆ ಹತ್ತು ವರ್ಷಗಳ ಬಳಿಕ ಅನುಷ್ಠಾನ ಗೊಳ್ಳುವುದಿದ್ದರೆ ಈಗ ಅದಕ್ಕೆ ಅನುಮೋದನೆ ಪಡೆದುಕೊಂಡದ್ದೇಕೆ ಎಂದು ಪ್ರಶ್ನಿಸಿದರು. ಕೇಂದ್ರ ಸರಕಾರದ ಯೋಜನೆ ಗಳೆಲ್ಲವೂ ಕೂಡ ಜನರಿಗೆ ಅನುಕೂಲವಾಗುವಂಥದ್ದಲ್ಲ. ಆದರೆ ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರ ಜಾರಿ ಮಾಡಿದ ಯೋಜನೆಗಳೆಲ್ಲ ಯಶಸ್ವಿಯಾಗಿ ಅನು ಷ್ಠಾನ ಗೊಂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿ ಧರ್ಮ ಮತ್ತು ಜಾತಿ ವಿಚಾರವನ್ನು ಮುಂದಿಡುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಸೇರ್ಪಡೆ: ತೆಲಂಗಾಣದಲ್ಲಿ ಬಿಜೆಪಿಗೆ ಹಿನ್ನಡೆ ಎಂಬಂತೆ ಕೋಮಟಿ ರೆಡ್ಡಿ ರಾಜಗೋಪಾಲ ರೆಡ್ಡಿಯವರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಅವರು ಶೀಘ್ರವೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ಇನ್ನೊಂದೆಡೆ ಛತ್ತೀಸ್‌ಗಢಕ್ಕಾಗಿ ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಹಾಲಿ ಶಾಸಕರೊಬ್ಬರಿಗೆ ಅವಕಾಶ ನೀಡಲಾಗಿಲ್ಲ. ಮಧ್ಯ ಪ್ರದೇ ಶ ದಲ್ಲಿ ಕೂಡ ಆಕ್ರೋಶ ನಿಯಂತ್ರಿಸುವ ನಿಟ್ಟಿನಲ್ಲಿ 4 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲು ಮಾಡಿದೆ.
ರಾಷ್ಟ್ರೀಯ ಐಕಾನ್: “ನ್ಯೂಟನ್’ ಸಿನೆಮಾ ಖ್ಯಾತಿ ಯ ರಾಜಕುಮಾರ್ ರಾವ್ ಅವರನ್ನು ಚುನಾವಣ ಆಯೋಗ “ರಾಷ್ಟ್ರೀಯ ಐಕಾನ್’ ಎಂದು ಘೋಷಿ ಸಿದೆ. ಈ ಬಗ್ಗೆ ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ಆದೇಶ ಹೊರಡಿಸಲಿದ್ದಾರೆ.
ಗೆದ್ದರೆ ಮತ್ತೆ ನಾನೇಕೆ ಸಿಎಂ ಆಗಬಾರದು?
“ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡರೆ ನಾನೇಕೆ ರಾಜಸ್ಥಾನದ ಸಿಎಂ ಹುದ್ದೆಯಲ್ಲಿ ಮುಂದುವರಿಯಬಾರದು?’ ಹೀಗೆಂದು ಅಶೋಕ್ ಗೆಹ್ಲೋಟ್ ಪ್ರಶ್ನಿಸಿದ್ದಾರೆ. ಈ ಮೂಲಕ ಸಚಿನ್ ಪೈಲಟ್‌ಗೆ ಅಧಿಕಾರ ಹಸ್ತಾಂತರ ಮಾಡುವುದು ಅಸಂಭವ ಎಂಬ ಸುಳಿವನ್ನೂ ನೀಡಿದ್ದಾರೆ. “ನ್ಯೂಸ್18” ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ಮಾಜಿ ಡಿಸಿಎಂ ಸಚಿನ್ ಪೈಲಟ್ ಬಗ್ಗೆ ತಮಗೆ ಮಮತೆ ಇದೆ. ನಾವಿಬ್ಬರೂ ಮರೆತು ಮತ್ತು ಕ್ಷಮಿಸಿ ಬಿಡು ಎಂಬ ಧೋರಣೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಬಿಜೆಪಿ ರಾಜಸ್ಥಾನದಲ್ಲಿ ಕೇವಲ ಧರ್ಮವನ್ನು ಮುಂದಿಟ್ಟು ಕೊಂಡು ರಾಜಕೀಯ ನಡೆಸುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ದೂರಿದ್ದಾರೆ. ಬಿಜೆಪಿಯ ಹಿಂದುತ್ವ ಭಾವನೆಯನ್ನು ಕೆರಳಿಸಿ ಮತ ಕೇಳುವ ಜಾಯಮಾನವನ್ನು ಈ ಬಾರಿ ಮತದಾರರು ತಿರಸ್ಕರಿಸಲಿದ್ದಾರೆ. ಹಿಂದೂ ಸಮುದಾಯದವರನ್ನೂ ಸೇರಿಸಿಕೊಂಡು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಮ್ಮ ಸರಕಾರ ಜಾರಿ ಮಾಡಿದೆ. ಅದನ್ನು ಗೌರವಿಸಿ ಮತದಾರರು ಮತ್ತೂಮ್ಮೆ ಕಾಂಗ್ರೆಸ್ ನೇತೃತ್ವದ ಸರಕಾರಕ್ಕೆ ಅಧಿಕಾರ ನೀಡಿದರೆ, ಸಿಎಂ ಹುದ್ದೆಯಲ್ಲಿ ನಾನೇ ಮುಂದುವರಿಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.