Agri: ಹಿಂಗಾರು ಬೆಳೆಗಾಗಿ ರಸಗೊಬ್ಬರಕ್ಕೆ 22,303 ಕೋಟಿ ಸಬ್ಸಿಡಿಗೆ ಒಪ್ಪಿಗೆ: ಅನುರಾಗ್
Team Udayavani, Oct 25, 2023, 11:35 PM IST
ಹೊಸದಿಲ್ಲಿ: ದೇಶದಲ್ಲಿ ಹಿಂಗಾರು ಬೆಳೆಗಳ ಅವಧಿಗೆ ಅನುಕೂಲ ವಾಗುವಂತೆ ಕೇಂದ್ರ ಸರಕಾರ 22,303 ಕೋಟಿ ರೂ. ಮೊತ್ತವನ್ನು ರಸಗೊಬ್ಬರಕ್ಕೆ ಸಹಾಯ ಧನವಾಗಿ ನೀಡಲು ತೀರ್ಮಾನಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ರಸಗೊಬ್ಬರಗಳ ಬೆಲೆ ಹೆಚ್ಚಾಗಿಯೇ ಇದೆ ಎಂದು ಹೇಳಿದ ಠಾಕೂರ್, ದೇಶದ ರೈತರ ಹಿತದೃಷ್ಟಿಯನ್ನು ಮೋದಿ ಸರಕಾರ ಗಮನದಲ್ಲಿ ಇರಿಸಿದೆ ಎಂದರು. ಇದಲ್ಲದೆ 50 ಕೆ.ಜಿ.ಯ ಡಿಎಪಿ ರಸಗೊಬ್ಬರ ಪ್ರತೀ ಬ್ಯಾಗ್‌ಗೆ 1,350 ರೂ.ಗಳಂತೆಯೇ ಸಿಗಲಿದೆ ಎಂದು ಠಾಕೂರ್ ಹೇಳಿದ್ದಾರೆ. ಪಾಸ್ಪೇಟ್ ರಸಗೊ ಬ್ಬರಗಳಿಗೆ ಅ.1ರಿಂದ ಮಾ.31ರ ವರೆಗೆ ಇರುವ ಹಿಂಗಾರು ಬೆಳೆ ಅವಧಿ (ರಬಿ)ಗಾಗಿ 22,303 ಕೋಟಿ ರೂ. ಸಹಯಾಧನ ನೀಡಲು ತೀರ್ಮಾನಿಸಿದೆ. ಇದಲ್ಲದೆ ಎನ್‌ಪಿಕೆಗೆ ಹಳೆಯ ದರ 1,470 ರೂ., ಸಿಂಗಲ್ ಸೂಪರ್ ಪಾಸೆ#àಟ್ ರಸಗೊಬ್ಬರ ಚೀಲಕ್ಕೆ 500 ರೂ., ಪೊಟ್ಯಾಷ್ ರಸಗೊಬ್ಬರ ಚೀಲಕ್ಕೆ 1,700 ರೂ.ಗಳ ಬದಲು 1,655 ರೂ.ಗಳಿಗೆ ಸಿಗಲಿದೆ ಎಂದು ಕೇಂದ್ರ ಸಚಿವ ಠಾಕೂರ್ ಹೇಳಿದ್ದಾರೆ. ಮೇಯಲ್ಲಿ ನಡೆದಿದ್ದ ಮುಂಗಾರು ಅವಧಿಯ ಬೆಳೆಗಳಿಗಾಗಿ 38 ಸಾವಿರ ಕೋಟಿ ರೂ. ಮೌಲ್ಯದ ರಸಗೊಬ್ಬರ ಸಹಾಯಧನ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.