Retirement; ಡಿ ಕಾಕ್ ಮನ ಒಲಿಸುವುದು ಕಷ್ಟ: ಕ್ಲಾಸೆನ್
ಡಿ ಕಾಕ್ ಗೌರವಯುತ ಹಾಗೂ ಸ್ಮರಣೀಯ ವಿದಾಯ ಬಯಸುತ್ತಿದ್ದಾರೆ...
Team Udayavani, Oct 26, 2023, 6:30 AM IST
ಮುಂಬಯಿ: ಪ್ರಚಂಡ ಫಾರ್ಮ್ ನಲ್ಲಿರುವ ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್ ಉತ್ತುಂಗದಲ್ಲಿರುವಾಗಲೇ ನಿವೃತ್ತಿ ಆಗುವುದು ಬೇಡ, ಅವರು ಇನ್ನೂ ಸ್ವಲ್ಪ ಕಾಲ ದಕ್ಷಿಣ ಆಫ್ರಿಕಾ ತಂಡದಲ್ಲಿ ಮುಂದುವರಿಯಬೇಕು ಎಂಬುದಾಗಿ ಸಹ ಆಟಗಾರ ಹೆನ್ರಿಕ್ ಕ್ಲಾಸೆನ್ ಹೇಳಿದ್ದಾರೆ. ಆದರೆ ಈ ವಿಷಯದಲ್ಲಿ ಅವರ ಮನ ಒಲಿಸುವುದು ಬಹಳ ಕಷ್ಟ ಎಂಬುದೂ ಕ್ಲಾಸೆನ್ ಅನಿಸಿಕೆ. ಹೆನ್ರಿಕ್ ಕ್ಲಾಸೆನ್ ಕೂಡ ವಿಕೆಟ್ ಕೀಪರ್ ಆಗಿದ್ದು, ಡಿ ಕಾಕ್ ಉಪಸ್ಥಿತಿಯಲ್ಲೂ ಕೀಪಿಂಗ್ ಕಾರ್ಯ ನಿಭಾಯಿಸುತ್ತಿದ್ದಾರೆ. ಡಿ ಕಾಕ್ ಅವರಂತೆ ಅಮೋಘ ಫಾರ್ಮ್ ನಲ್ಲಿದ್ದಾರೆ.
“ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್ ಫಾರ್ಮ್ ನ ಉತ್ತುಂಗದಲ್ಲಿದ್ದಾರೆ. ಈಗಾಗಲೇ ಈ ಪಂದ್ಯಾವಳಿಯಲ್ಲಿ 3 ಶತಕ ಬಾರಿಸಿದ್ದಾರೆ. ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳುವುದಾಗಿ ಘೋಷಿಸಿದ್ದಾರೆ. ಆದರೆ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಅವರ ಮನ ಒಲಿಸುವುದು ಬಹಳ ಕಷ್ಟ. ಅವರು ಕ್ರಿಕೆಟ್‌ನಿಂದ ದೂರ ಸರಿಯುವುದು ಬೇಸರದ ಸಂಗತಿ. ಆದರೆ ಡಿ ಕಾಕ್ ಗೌರವಯುತ ಹಾಗೂ ಸ್ಮರಣೀಯ ವಿದಾಯ ಬಯಸುತ್ತಿದ್ದಾರೆ. ಬಹುಶಃ ಇದಕ್ಕೆ ವಿಶ್ವಕಪ್ ಪಂದ್ಯಾವಳಿಯೇ ಅತ್ಯಂತ ಸೂಕ್ತ ಎಂಬುದನ್ನು ಅವರು ಮೊದಲೇ ನಿರ್ಧರಿಸಿ ಆಗಿದೆ’ ಎಂಬುದಾಗಿ ಅವರೊಂದಿಗೆ ಪ್ರಚಂಡ ಜತೆಯಾಟ ನಡೆಸಿದ ಕ್ಲಾಸೆನ್ ಅಭಿಪ್ರಾಯಪಟ್ಟರು.
ಶೇನ್ ಬಾಂಡ್ ಬೇಸರ
ಡಿ ಕಾಕ್ ನಿವೃತ್ತಿ ನಿರ್ಧಾರದ ಬಗ್ಗೆ ನ್ಯೂಜಿಲ್ಯಾಂಡ್‌ನ ಮಾಜಿ ವೇಗಿ ಶೇನ್ ಬಾಂಡ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ಫಾರ್ಮ್ನಲ್ಲಿರುವಾಗಲೇ ಅವರು ಏಕದಿನದಿಂದ ದೂರ ಸರಿಯುವ ನಿರ್ಧಾರಕ್ಕೆ ಬರಬಾರದಿತ್ತು ಎಂದಿದ್ದಾರೆ.
“ಕ್ವಿಂಟನ್ ಡಿ ಕಾಕ್ ಏಕದಿನ ಕ್ರಿಕೆಟ್‌ನ ಶ್ರೇಷ್ಠ ಆಟಗಾರ. ಬಾಂಗ್ಲಾ ವಿರುದ್ಧ ಅವರು ಪರಿಪೂರ್ಣ ಪ್ರದರ್ಶನ ನೀಡಿದರು. ಬೇಸರವೆಂದರೆ ಅವರಿಗೆ 30 ವರ್ಷ ಮಾತ್ರ. ಇದಕ್ಕೂ ಮಿಗಿಲಾಗಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಇಂಥ ಹೊತ್ತಿನಲ್ಲಿ ಅವರು ಏಕದಿನಕ್ಕೆ ವಿದಾಯ ಹೇಳುತ್ತಿರುವುದು ಸರಿಯಲ್ಲ…’ ಎಂಬುದಾಗಿ ಶೇನ್ ಬಾಂಡ್ ಹೇಳಿದರು.
400 ರನ್ ಸಾಧಕ
ಕ್ವಿಂಟನ್ ಡಿಕಾಕ್ ಈ ವಿಶ್ವಕಪ್‌ನಲ್ಲಿ 400 ರನ್ ಗಡಿ ದಾಟಿದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು. ಐದೂ ಪಂದ್ಯಗಳನ್ನು ಆಡಿರುವ ಈ ಎಡಗೈ ಆಟಗಾರ 81.40ರ ಸರಾಸರಿಯಲ್ಲಿ 407 ರನ್ ಒಟ್ಟುಗೂಡಿಸಿದ್ದಾರೆ. ಸ್ಟ್ರೈಕ್‌ರೇಟ್ 114.97. ಶ್ರೀಲಂಕಾ, ಆಸ್ಟ್ರೇಲಿಯ ಮತ್ತು ಬಾಂಗ್ಲಾದೇಶ ವಿರುದ್ಧ ಶತಕ ಬಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್
World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು
ICC ವಿಶ್ವಕಪ್ ಸಾಧಕರ ತಂಡಕ್ಕೆ ರೋಹಿತ್ ನಾಯಕ; ತಂಡ ಹೀಗಿದೆ
World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಫುಲ್ ಖುಷ್
Head line ನಲ್ಲಿ ಮಿಂಚಿದ ಟ್ರ್ಯಾವಿಸ್ ಹೆಡ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.