Tiger claws: ನಟ ಜಗ್ಗೇಶ್‌, ದರ್ಶನ್‌, ರಾಕ್‌ಲೈನ್‌, ನಿಖಿಲ್ ಗೆ ನೋಟಿಸ್‌

ಹುಲಿ ಉಗುರಿನಂಥ ವಸ್ತುಗಳು ಅಧಿಕಾರಿಗಳ ವಶದಲ್ಲಿ

Team Udayavani, Oct 26, 2023, 1:28 AM IST

Tiger claws: ನಟ ಜಗ್ಗೇಶ್‌, ದರ್ಶನ್‌, ರಾಕ್‌ಲೈನ್‌, ನಿಖಿಲ್ ಗೆ ನೋಟಿಸ್‌

ಬೆಂಗಳೂರು: ಹುಲಿ ಉಗುರು ಧರಿಸಿರುವ ಆರೋಪದಡಿ ಬಿಗ್‌ಬಾಸ್‌ ಸ್ಫರ್ಧಿ ವರ್ತೂರು ಸಂತೋಷ್‌ ಬಂಧನವಾದ ಬೆನ್ನಲ್ಲೇ ಹುಲಿ ಉಗುರು ಧರಿಸಿದ್ದ ಕನ್ನಡದ ಸ್ಟಾರ್‌ ಸೆಲೆಬ್ರೆಟಿಗಳ ಫೋಟೋಗಳು ಎಲ್ಲೆಡೆ ವೈರಲ್‌ ಆಗಿದ್ದು, ಅವರೆಲ್ಲರಿಗೂ ಸಂಕಷ್ಟ ಎದುರಾಗಿದೆ.

ಸ್ಯಾಂಡಲ್‌ವುಡ್‌ ನಟರಾದ ದರ್ಶನ್‌, ಜಗ್ಗೇಶ್‌, ನಿಖಿಲ್ ಕುಮಾರಸ್ವಾಮಿ, ರಾಕ್‌ಲೈನ್‌ ವೆಂಕಟೇಶ್‌ಗೆ ನೋಟಿಸ್‌ ಕೊಟ್ಟಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಅರಣ್ಯ ಇಲಾಖೆಯ ಪ್ರತ್ಯೇಕ ನಾಲ್ಕು ತಂಡಗಳು ಬುಧವಾರ ಈ ನಾಲ್ವರ ಮನೆಗೆ ಭೇಟಿ ಕೊಟ್ಟಿದ್ದು, ಕೆಲವರ ಮನೆಗಳಲ್ಲಿ ಪರಿಶೀಲನೆ ನಡೆಸಿವೆ. ಈ ವೇಳೆ ರಾಕ್‌ಲೈನ್‌ ವೆಂಕಟೇಶ್‌ ಹೊರತುಪಡಿಸಿ ದರ್ಶನ್‌, ಜಗ್ಗೇಶ್‌, ನಿಖಿಲ್ ಕುಮಾರಸ್ವಾಮಿ ಫೋಟೋದಲ್ಲಿ ಧರಿಸಿರುವ ಹುಲಿ ಉಗುರಿನಂತಿರುವ ವಸ್ತುವನ್ನು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಹೆಚ್ಚಿನವು ಮೇಲ್ನೋಟಕ್ಕೆ ಕೃತಕ ಹುಲಿ ಉಗುರಿನಂತಿವೆ ಎನ್ನಲಾಗಿದೆ.

ಇವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌)ಕ್ಕೆ ಕಳುಹಿಸಲಾಗುವುದು. ಎಫ್ಎಸ್‌ಎಲ್‌ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಾಕ್‌ಲೈನ್‌ ವೆಂಕಟೇಶ್‌ ಊರಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಅವರು ವಾಪಾಸಾದ ಬಳಿಕ ಫೋಟೋದಲ್ಲಿದ್ದ ಹುಲಿ ಉಗುರಿನಂತಿರುವ ವಸ್ತುಗಳನ್ನು ಇಲಾಖೆ ಸುಪರ್ದಿಗೆ ನೀಡಲು ಸೂಚಿಸಲಾಗಿದೆ. ಇವು ಗಳನ್ನು ಹಾಜರುಪಡಿಸುವಂತೆ ನಾಲ್ವರಿಗೂ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ತನಿ ಖಾಧಿಕಾರಿ ರವೀಂದ್ರ “ಉದಯವಾಣಿ’ಗೆ ತಿಳಿಸಿದ್ದಾರೆ.

ವರ್ತೂರು ಸಂತೋಷ್‌ ಅವರಿಂದ ಜಪ್ತಿ ಮಾಡಿರುವ ಹುಲಿ ಉಗುರಿನ ಕುರಿತ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌) ವರದಿ ಇನ್ನಷ್ಟೇ ಬರಬೇಕಿದೆ. ಸಂತೋಷ್‌ ಜಾಮೀನು ಅರ್ಜಿ ನ್ಯಾಯಾಲಯವು ಮುಂದೂಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕುಣಿಗಲ್‌ನ ಧನಂಜಯ ಗುರೂಜಿ, ಗೌರಿ ಗದ್ದೆಯ ವಿನಯ ಗುರೂಜಿ ಮಠಕ್ಕೂ ಭೇಟಿ ನೀಡಿ ಪರಿಶೀಲಿಸಲಾಗಿದೆ.

ವೈರಲ್‌ ಆಗಿರುವ ಫೋಟೋಗಳಲ್ಲಿರುವ ವನ್ಯಜೀವಿ ವಸ್ತುಗಳ ಬಗ್ಗೆ ಮಾಹಿತಿ ನೀಡಿ, ತಮ್ಮಲ್ಲಿರುವ ಪೆಂಡೆಂಟ್‌ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಕೇಳಿದ್ದಾರೆ.ಆರ್‌.ಆರ್‌.ನಗರದಲ್ಲಿರುವ ದರ್ಶನ್‌ ನಿವಾಸದಲ್ಲೂ ಪರಿಶೀಲಿಸಿದ ಅಧಿಕಾರಿಗಳು, ಫೋಟೋದಲ್ಲಿ ಕಂಡುಬಂದ ಹುಲಿ ಉಗುರಿನ ಬಗ್ಗೆ ಸ್ಪಷ್ಟನೆ ನೀಡಲು ಸೂಚಿಸಿದ್ದಾರೆ.

ಮತ್ತೊಂದು ತಂಡ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ರಾಕ್‌ಲೈನ್‌ ವೆಂಕಟೇಶ್‌ ಮನೆಯಲ್ಲಿ ಹುಡುಕಾಡಿದೆ. ಆ ವೇಳೆ ವೆಂಕಟೇಶ್‌ ಇರದಿದ್ದ ಕಾರಣ ಅವರ ಪುತ್ರನಿಂದ ಸಹಿ ಪಡೆದು ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮಲ್ಲೇಶ್ವರದಲ್ಲಿರುವ ಜಗ್ಗೇಶ್‌ ಮನೆಗೆ ತೆರಳಿದ ಕೂಡಲೇ ಅವರ ಪತ್ನಿ ಪರಿಮಳಾ ಜಗ್ಗೇಶ್‌ ಹುಲಿ ಉಗುರು ಹೋಲುವ ಲಾಕೆಟ್‌ ಅನ್ನು ಕೊಟ್ಟಿದ್ದಾರೆ. ಹೀಗಾಗಿ ತಪಾಸಣೆ ನಡೆಸುವ ಅಗತ್ಯ ಬರಲಿಲ್ಲ. ಜೆ.ಪಿ.ನಗರದಲ್ಲಿರುವ ನಿಖಿಲ್ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ಕೊಟ್ಟಾಗ ಅವರ ತಂದೆ ಎಚ್‌.ಡಿ.ಕುಮಾರಸ್ವಾಮಿ ಅವರು ಲಾಕೆಟ್‌ ಅನ್ನು ಅರಣ್ಯ ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ಮುಂದಿನ ನಡೆ ಏನು ?
ನೋಟಿಸ್‌ ಪಡೆದವರು ತಮ್ಮಲ್ಲಿ ರುವ ಹುಲಿ ಉಗುರು ನೈಜವಲ್ಲ ಎಂಬುದಕ್ಕೆ ಪೂರಕ ದಾಖಲೆ ನೀಡಿದರೆ ಪ್ರಕರಣದಿಂದ ಪಾರಾಗಬಹುದು. ನೈಜ ಹುಲಿ ಉಗುರು ಎಂಬುದು ಸಾಬೀತಾದರೆ ಕಾನೂನು ಕುಣಿಕೆ ಖಚಿತ.

3ರಿಂದ 7 ವರ್ಷ ಜೈಲು
ವನ್ಯ ಜೀವಿಗಳ ಉಗುರು, ಕೊಂಬು, ಚರ್ಮ, ಕೋಡು, ತುಪ್ಪಳ, ಮೂಳೆ ಇತ್ಯಾದಿ ವಸ್ತುಗಳನ್ನು ಸಂಗ್ರಹಿಸುವುದು ಕಾನೂನು ಬಾಹಿರವಾಗಿದೆ. ನಿಯಮ ಉಲ್ಲಂ ಸಿ ಇಂತಹ ವಸ್ತು ಸಂಗ್ರಹಿಸಿ ದರೆ ತತ್‌ಕ್ಷಣ ಅರಣ್ಯ ಇಲಾಖೆಗೆ ಒಪ್ಪಿಸಬೇಕು. ಕೆಲವು ಸಂದರ್ಭ ಗಳಲ್ಲಿ ಇಲಾಖೆಯಿಂದ ಇದಕ್ಕೆ ಪ್ರಮಾಣ ಪತ್ರ ಪಡೆದಿರ ಬೇಕಾಗುತ್ತದೆ. ಅಕ್ರಮ ವಾಗಿ ವನ್ಯಜೀವಿ ಆವಯವ ಸಂಗ್ರಹಿಸಿಟ್ಟಿರು ವುದು ಸಾಬೀ ತಾದರೆ ಅಂತಹ ವ್ಯಕ್ತಿಗಳಿಗೆ ವನ್ಯಜೀವಿ ಸಂರಕ್ಷಣೆ ಕಾಯ್ದೆ 1972ರ ಅಡಿಯಲ್ಲಿ 3ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಕನಿಷ್ಠ 10 ಸಾವಿರ ರೂ.ನಿಂದ 25 ಸಾವಿರ ರೂ. ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ಸುಲಭವಾಗಿ ಜಾಮೀನು ಸಿಗುವುದಿಲ್ಲ. ಈಗ ಆರೋಪ ಎದುರಿಸುತ್ತಿರುವ ಸೆಲೆಬ್ರೆಟಿಗಳು ನಿಯಮ ಉಲ್ಲಂಘಿಸಿರುವುದು ನ್ಯಾಯಾ ಲಯದಲ್ಲಿ ದೃಢಪಟ್ಟರೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳಿವೆ.

ಈ ನೆಲದ ಕಾನೂನಿನ ಮುಂದೆ ಎಲ್ಲರೂ ಸಮಾನರು. ವನ್ಯ ಜೀವಿಯ ಯಾವುದೇ ಅಂಗಾಂಗದ ಉತ್ಪನ್ನ ಗಳನ್ನು ಅಕ್ರಮವಾಗಿ ಹೊಂದುವುದು ಅಪರಾಧವಾಗುತ್ತದೆ. ಈ ಬಗ್ಗೆ ದೂರು ಬಂದರೆ ಇಲಾಖೆ ಪರಿಶೀಲಿಸಿ ಕ್ರಮ ಜರಗಿಸುತ್ತದೆ.
– ಈಶ್ವರ ಖಂಡ್ರೆ,
ಸಚಿವ, ಅರಣ್ಯ, ವನ್ಯಜೀವಿ ಮತ್ತು ಪರಿಸರ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.