ICC World Cup 2023: ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ಡೇವಿಡ್ ವಾರ್ನರ್
Team Udayavani, Oct 26, 2023, 10:56 AM IST
ಹೊಸದಿಲ್ಲಿ: ಸತತ ಶತಕ ಸಿಡಿಸಿ ಅದ್ಭುತ ಫಾರ್ಮ್ ನಲ್ಲಿರುವ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಭಾರತದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ನೆದರ್ಲ್ಯಾಂಡ್ ವಿರುದ್ಧ ಹೊಸದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ವಾರ್ನರ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.
ಇದೇ ವೇಳೆ ಏಕದಿನ ವಿಶ್ವಕಪ್ ನಲ್ಲಿ ಹೆಚ್ಚು ಶತಕ ಸಿಡಿಸಿದವರ ಸಾಲಿನಲ್ಲಿ ಡೇವಿಡ್ ವಾರ್ನರ್ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆ ಸರಿಗಟ್ಟಿದ್ದಾರೆ. ಇಬ್ಬರೂ ತಲಾ ಆರು ಶತಕಗಳನ್ನು ಬಾರಿಸಿದ್ದಾರೆ. ಏಳು ಶತಕ ಬಾರಿಸಿದ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ ಆರಂಭಕ್ಕೆ ಮುನ್ನ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ವಾರ್ನರ್ ಇದೀಗ ಅದ್ಭುತ ಆಟವಾಡುತ್ತಿದ್ದಾರೆ. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ 163 ರನ್ ಗಳಿಸಿದ್ದ ಆಸೀಸ್ ಆರಂಭಿಕ ಆಟಗಾರ, ನೆದರ್ಲ್ಯಾಂಡ್ ವಿರುದ್ಧ ಶತಕ ಗಳಿಸಿದ್ದಾರೆ.
ಇದನ್ನೂ ಓದಿ:ED Raids: ಪಂ.ಬಂಗಾಳ ಸಚಿವ ಜ್ಯೋತಿಪ್ರಿಯಾ ಮಲಿಕ್ ನಿವಾಸದ ಮೇಲೆ ಇಡಿ ದಾಳಿ
“ನನಗೆ, ಮೈದಾನಕ್ಕೆ ಹೋಗಿ ನನ್ನ ಕೈಲಾದಷ್ಟು ಕೆಲಸ ಮಾಡುವುದು ಜವಾಬ್ದಾರಿ. ನಾವು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವಕಪ್ ಗಾಗಿ ಕಾಯುತ್ತೇವೆ, ನಾವು ನಿಜವಾಗಿಯೂ ಈ ಹಂತದಲ್ಲಿ ಮಿಂಚಬೇಕು. ನಾನು ದ್ವಿಪಕ್ಷೀಯ ಸರಣಿಯಲ್ಲಿ ಏನು ಮಾಡುತ್ತೇನೆ ಎಂಬುದನ್ನು ಇಲ್ಲಿಯೂ ನಾನು ಪ್ರಯತ್ನಿಸುತ್ತೇನೆ ” ಎಂದು ಡೇವಿಡ್ ವಾರ್ನರ್ ಹೇಳಿದರು.
ಹೊಸದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಎಂಟು ವಿಕೆಟ್ ಕಳೆದುಕೊಂಡು 399 ರನ್ ಗಳಿಸಿತು. ವಾರ್ನರ್ 104 ರನ್, ಮ್ಯಾಕ್ಸವೆಲ್ 106 ರನ್, ಸ್ಟೀವ್ ಸ್ಮಿತ್ 71 ರನ್ ಮತ್ತು ಲಬುಶೇನ್ 62 ರನ್ ಗಳಿಸಿದ್ದರು.
ನೆದರ್ಲ್ಯಾಂಡ್ ತಂಡವು ಕೇವಲ 90 ರನ್ ಗಳಿಗೆ ಆಲೌಟಾಯಿತು. ಆ್ಯಡಂ ಜಂಪಾ ನಾಲ್ಕು ವಿಕೆಟ್ ಪಡೆದರು. ಆಸೀಸ್ 309 ರನ್ ಅಂತರದ ಭರ್ಜರಿ ಜಯ ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.