![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Oct 26, 2023, 3:11 PM IST
ಭೋಪಾಲ್: ಪ್ರಜ್ಞೆತಪ್ಪಿದ ಹಾವಿಗೆ ಸಿಪಿಆರ್ ಕೊಟ್ಟು ಪ್ರಾಣ ಉಳಿಸಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ಈ ಘಟನೆ ನಡೆದಿದೆ. ವಿಷಕಾರಿಯಲ್ಲದ ಹಾವೊಂದು ವಸತಿ ಪ್ರದೇಶದ ಪೈಪ್‌ಲೈನ್ ಒಳಗೆ ನುಗ್ಗಿತ್ತು. ಇದನ್ನು ಹೊರ ತೆಗೆಯುವ ಭರದಲ್ಲಿ ಅಲ್ಲಿನ ಜನರು ಪೈಪ್ ನೊಳಗೆ ಕ್ರಿಮಿನಾಶಕವನ್ನು ಸುರಿದಿದ್ದಾರೆ. ಇದರ ಪರಿಣಾಮ ಹಾವು ಪ್ರಜ್ಞೆತಪ್ಪಿದೆ. ಆಗ ಪೈಪ್ ನೊಳಗೆ ನೀರು ಹಾಕಿದಾಗ ಹಾವು ಹೊರಗೆ ಬಂದಿದೆ.
ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾನ್ಸ್ ಟೇಬಲ್ ಅತುಲ್ ಶರ್ಮಾ ಅವರು ಮೊದಲು ಹಾವು ಬದುಕಿರುವ ಬಗ್ಗೆ ಪರಿಶೀಲಿಸಿದ್ದಾರೆ. ಹಾವು ಬದುಕಿರುವುದು ದೃಢವಾದ ಹಿನ್ನೆಲೆಯಲ್ಲಿ ಅತುಲ್ ಅವರು ಹಾವಿನ ಬಾಯಿಗೆ ತನ್ನ ಬಾಯಿಯಿಟ್ಟು ಸಿಪಿಆರ್ ನೀಡಿ ಉಸಿರು ನೀಡಿದ್ದಾರೆ. ನಿಧಾನವಾಗಿ ಹಾವು ಚಲಿಸಲು ಆರಂಭಿಸಿದೆ. ಈ ಕಾರಣದಿಂದ ಹಾವಿನ ಮೇಲೆ ನೀರು ಸಿಂಪಡಿಸಿದ್ದಾರೆ. ಆ ಬಳಿಕ ಹಾವನ್ನು ಕಾಡಿಗೆ ಬಿಟ್ಟು ಬರಲಾಗಿದೆ ಎಂದು ವರದಿ ತಿಳಿಸಿದೆ.
ಸಾಮಾನ್ಯವಾಗಿ ಹಾವಿಗೆ ಸಿಪಿಆರ್ ನೀಡುವುದು ಸಾಧ್ಯವಿಲ್ಲ. ಪ್ರಜ್ಞೆತಪ್ಪಿದ ಹಾವು ಕೆಲ ಸಮಯದ ಬಳಿಕ ತಾನಾಗಿಯೇ ಚೇತರಿಸಿಕೊಳ್ಳುತ್ತದೆ ಎಂದು ಪಶುವೈದ್ಯರು ಹೇಳುತ್ತಾರೆ.
ಇಡೀ ಘಟನೆಯ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅತುಲ್ ಅವರು ಹಾವಿನ ಪ್ರಾಣ ಉಳಿಸಲು ಮಾಡಿದ ಪ್ರಯತ್ನಕ್ಕೆ ನೆಟ್ಟಿಗರು ಶ್ಲಾಘಿಸಿದ್ದಾರೆ.
A video from Narmadapuram has gone viral where a police constable is giving CPR to a snake that had fallen unconscious after being drenched in pesticide laced toxic water. pic.twitter.com/tblKDG06X6
— Anurag Dwary (@Anurag_Dwary) October 26, 2023
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Video: ಹೇಳಿಕೆ ಇಲ್ಲದಿದ್ದರೂ ಮದುವೆ ಹಾಲ್ ಗೆ ಬಂದು ಸರ್ಪ್ರೈಸ್ ನೀಡಿದ ಚಿರತೆ…
Jamui: ಸಾಲ ರಿಕವರಿಗೆ ಬಂದ ಏಜೆಂಟ್ ನನ್ನೇ ಮದುವೆಯಾದ ವಿವಾಹಿತ ಮಹಿಳೆ!
Video: ಕಾರು ಚಲಾಯಿಸುತ್ತಾ ಲ್ಯಾಪ್ ಟಾಪ್ ನಲ್ಲಿ ಕೆಲಸ… ಮಹಿಳೆಗೆ ಬಿತ್ತು ದಂಡ
Malaysia; ಭಾರತ ಮೂಲದ ಮಹಿಳೆಯಿಂದ ಕೆಲಸಕ್ಕಾಗಿ ಪ್ರತಿದಿನ 700 ಕಿ.ಮೀ. ವಿಮಾನ ಯಾನ!
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.