Farmers: ಜಿಲ್ಲೆಯಲ್ಲಿ 38 ವಾರಕ್ಕಾಗುವಷ್ಟು ಮೇವು ಲಭ್ಯ
Team Udayavani, Oct 26, 2023, 3:29 PM IST
ದೇವನಹಳ್ಳಿ: ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಾನುವಾರು ಗಳ ಮೇವಿಗೆ ಸಮಸ್ಯೆ ಉಂಟಾಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 38 ವಾರಗಳಿಗಾಗುವಷ್ಟು ಮೇವು ಲಭ್ಯ ವಿರುವುದರಿಂದ ಯಾವುದೇ ಕೊರತೆ ಇಲ್ಲ. ಮಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರಿಗೆ ರಾಗಿ ಬೆಳೆ ಪ್ರಮುಖ ಬೆಲೆಯಾಗಿದ್ದು. ರಾಗಿ ಬೆಳೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮಳೆರಾಯ ಕೈ ಕೊಟ್ಟಿರುವುದರಿಂದ ರಾಗಿ ಬೆಳೆಗೆ ಇಳುವರಿ ಕುಸಿತಗೊಳ್ಳಲಿದೆ. ರಾಗಿ ಬರೆದಿದ್ದರೂ ಸಹ ರೈತರಿಗೆ ರಾಗಿ ಹುಲ್ಲು ಲಭ್ಯವಾಗುತ್ತದೆ. ಒಂದು ವಾರಗಳ ಕಾಲ ಉತ್ತಮ ಮಳೆಯಾದರೆ ಮಾತ್ರ ರಾಗಿ ಹುಲ್ಲು ಬರಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಮುಂದಿನ ಬೇಸಿಗೆಗೆ ಮೇವಿಗೆ ಹೆಚ್ಚಿನ ಸಮಸ್ಯೆ ತೋರಿಸಬೇಕಾಗುತ್ತದೆ ಎಂದು ರೈತರು ಹೇಳುತ್ತಾರೆ.
ಪ್ರತಿ ದೇವರನ್ನು ಪೂಜಿಸುತ್ತಿದ್ದೇವೆ. ದೇವರನ್ನು ಬೇಡಿಕೊಳ್ಳುತ್ತಿದ್ದೇವೆ. ಮಳೆ ಬಾರಪ್ಪ ಬಾರಪ್ಪ ಎಂದು ಕರೆಯುತ್ತಿದ್ದರು. ಸಹ ಮಳೆ ಬರುತ್ತಿಲ್ಲ ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ ಜಾನುವಾರುಗಳಿಗೆ ಅನುಗುಣವಾಗಿ ಸರಾಸರಿ 38 ವಾರಗಳಿಗಾಗುವಷ್ಟು ಮೇವು ಲಭ್ಯವಿದೆ. ಒಳ್ಳೆ ಮಳೆಯಾಗಿ ಹಾಗೆ ಇಳುವರಿ ಬಂದರೆ ಮುಂದಿನ ಬೇಸಿಗೆಯಲ್ಲಿ ಸಮಸ್ಯೆ ಕಾಣುವುದು ತಪ್ಪುತ್ತದೆ ಎಂಬ ಲೆಕ್ಕಾಚಾರ ವಾಗಿದೆ.
ಹೈನು ಉದ್ಯಮಕ್ಕೆ ಹೆಸರುವಾಸಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೈನು ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಆಗಾಗ ಕಾಡುವ ಬರದಿಂದ ರೈತರು ಬೇವಿನ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ಈ ಬಾರಿಯೂ ಅನಾವೃಷ್ಟಿಯಿಂದ ಬೆಳೆಗಳು ನಾಶವಾಗಿವೆ. ನೀವು ಒದಗಿಸುವ ರಾಗಿ ಮುಸುಕಿನ ಜೋಳ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣವಾಗಿ ಕೈಕೊಟ್ಟಿವೆ. ಇದರಿಂದ ಮುಂಬರುವ ದಿನ ಗಳಲ್ಲಿ ಹಾಹಾಕಾರ ಉಂಟಾಗುವ ಆತಂಕ ರೈತರಲ್ಲಿದ್ದು, ಇದಕ್ಕೆ ಈಗಿನಿಂದಲೇ ಮೇವಿನ ದಾಸ್ತಾನು ಮಾಡಿಕೊಳ್ಳುವಲ್ಲಿ ರೈತ ನಿರತರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಶುಪಾಲನ ಇಲಾಖೆಯಿಂದ ಮೇವು ಉತ್ಪಾದನೆ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಿನಿ ಕಿಟ್ ತಳಿಸಿ ರೈತರಿಗೆ ನೀಡಲು ಮುಂದಾಗಿದೆ.
ಈ ಬಾರಿ ಬರಗಾಲ ಇರುವುದರಿಂದ ನೀರಿನ ಸೌಲಭ್ಯ ಹೊಂದಿರುವ ರೈತರಿಗೆ 40,000 ಮಿನಿ ಕಿಟ್ ವಿತರಿಸಲು ಸರ್ಕಾರಕ್ಕೆ ಪಶುಪಾಲನ ಇಲಾಖೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಕಳೆದ ಬಾರಿ 4493 ಮಿನಿ ಕಿಟ್‌ಗಳನ್ನು ನಾಲ್ಕು ತಾಲೂಕುಗಳಿಗೆ ವಿತರಿಸಲಾಗಿತ್ತು. ಜೋಳದ ಬೀಜಗಳನ್ನು ನೀಡಲಾಗುತ್ತಿದೆ.
ಹೈನುಗಾರಿಕೆ, ರೇಷ್ಮೆ ಎರಡು ಕಣ್ಣುಗಳಿದ್ದಂತೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಜಿಲ್ಲಾ ಕೇಂದ್ರ ಕಚೇರಿಗಳು ತಾಲೂಕಿಗೆ ಬಂದಿರುವುದು. ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಡಿಬಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಜಿಲ್ಲೆಯಲ್ಲಿ ಸಾಕಷ್ಟು ಭೂಮಿಗಳು ಭೂಸ್ವಾಧೀನವಾಗಿದ್ದರೂ ಸಹ ಜಿಲ್ಲೆಯ ರೈತರು ಇರುವ ಅಲ್ಪಸ್ವಲ್ಪದ ನೀರಿನಲ್ಲಿಯೇ ಹಸಿರು ಮೇವನ್ನು ಬೆಳೆಯುತ್ತಾರೆ. ತಾಲೂಕಿನಲ್ಲಿ ಇಂದಿಗೂ ಹೈನುಗಾರಿಕೆ ಮತ್ತು ರೇಷ್ಮೆ ರೈತರ ಪಾಲಿಗೆ ಎರಡು ಕಣ್ಣುಗಳಿದ್ದಂತೆ. ಬೋರ್ ವೆಲ್ ಗಳನ್ನು ಕೊರೆಸಿದರೆ 1200 ರಿಂದ 1500ಅಡಿಗೆ ಕೊರೆಸಿದರೂ ಸಹ ನೀರು ಸಿಗುವುದಿಲ್ಲ. ಕಳೆದ ವರ್ಷ ಉತ್ತಮ ಮಳೆಯಾಗಿರುವುದರಿಂದ ಮೇವಿನ ಸಮಸ್ಯೆ ಮತ್ತು ಕೆರೆಗಳಲ್ಲಿ ನೀರು ಇರುವುದರಿಂದ ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ನೀರಿನ ಸಮಸ್ಯೆ ಹಾಗೂ ಮೇವಿನ ಸಮಸ್ಯೆ ಇಲ್ಲದಂತಾಗಿದೆ.
ಮಳೆ ಇಲ್ಲದೇ ಇರುವುದರಿಂದ ಮೇವಿಗೆ ಯಾವುದೇ ಸಮಸ್ಯೆ ಜಿಲ್ಲೆಯಲ್ಲಿ ಬಂದಿಲ್ಲ. 38 ವಾರಕ್ಕೆ ಆಗುವಷ್ಟು ಮೇವು ಸಂಗ್ರಹಿಸಲಾಗಿದೆ. ಮಳೆ ಬರದೇ ಇದ್ದರೆ ಮುಂದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. 40,000 ಮೇವಿನ ಮಿನಿ ಕಿಟ್ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. – ಡಾ.ಜಗದೀಶ್, ಉಪನಿರ್ದೇಶಕರು ಪಶುಪಾಲನ ಇಲಾಖೆ
ಮಳೆ ಇಲ್ಲದೆ ಬರಗಾಲವನ್ನು ಎದುರಿಸು ತ್ತಿದ್ದೇವೆ. ಮಳೆ ನಾಲ್ಕೈದು ದಿನದಲ್ಲಿ ಬರೆದಿದ್ದರೆ ಮೇವಿಗೆ ಸಮಸ್ಯೆ ಎದುರಿಸ ಬೇಕಾಗುತ್ತದೆ. ಅಂತರ್ಜಲ ಮಟ್ಟ ಕುಸಿಯ ತೊಡಗಿದೆ. ಮೇವಿನ ಸಮಸ್ಯೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಇದರಿಂದ ಮೇವಿಗೆ ಈಗ ಹೆಚ್ಚಿನ ಬೇಡಿಕೆ ಶುರುವಾಗಿದೆ. ● ರಾಜಣ್ಣ, ರೈತ
– ಎಸ್.ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.