Education ; ಲಿಬರಲ್ ಆರ್ಟ್ ಶಿಕ್ಷಣ:ಯಶೋಗಾಥೆಗಳು
Team Udayavani, Oct 27, 2023, 5:25 AM IST
ಸಾಮಾನ್ಯವಾಗಿ ನಾವು ಸಮಸ್ಯೆಗೆ ಹೆದರುತ್ತೇವೆ. ಹೀಗಾಗಿ ನಾವು ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚಿಂತಿಸಲು ಇಷ್ಟಪಡುವುದಿಲ್ಲ. ಯಾವುದೇ ಒಂದು ಸಮಸ್ಯೆಯ ಸ್ವಭಾವ, ವ್ಯಾಪ್ತಿ, ತೀವ್ರತೆ ಮತ್ತು ಕಾರಣಗಳನ್ನು ತಿಳಿದುಕೊಳ್ಳಲು ಸಾಕಷ್ಟು ತಾಳ್ಮೆ, ಬದ್ಧತೆ ಮತ್ತು ಕಾಲಾವಕಾಶ ಬೇಕು. ತದನಂತರ ಪರಿಹಾರ ತೀರಾ ಸರಳ. ಅದು ಸಂಶೋಧನೆಗೆ ಸಂಬಂಧಿಸಿದ ಸಮಸ್ಯೆಯಾದರೆ, ವೈಜ್ಞಾನಿಕ ಸಂಶೋಧನ ವಿಧಾನಗಳನ್ನು ಅನುಸರಿಸಿದರೆ ಆ ಸಮಸ್ಯೆಯನ್ನು ಪರಿಹಾರಗೊಳಿಸುವ ನಿಟ್ಟಿನಲ್ಲಿ ಹೊಸ ಸಿದ್ಧಾಂತ, ಸೃಜನಶೀಲ ಸೂತ್ರ, ಹೊಸ, ಹೊಸ ಆವಿಷ್ಕಾರಗಳು, ಹಾಗೆಯೇ ಹೊಸ ಜ್ಞಾನದ ಆಯಾಮ ಬೆಳಕಿಗೆ ಬರುತ್ತದೆ. ಆ ಜ್ಞಾನದ ನೂತನ ಶಾಖೆ ಬೆಳೆಯುತ್ತದೆ.
ನಾವು “ಸಮಸ್ಯೆ’ಗಳನ್ನು ನೋಡುವ ದೃಷ್ಟಿಕೋನದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕು. ತತ್ಪರಿಣಾಮವಾಗಿ ನಮ್ಮ ದೃಷ್ಟಿಕೋನ ವ್ಯಾಪಕಗೊಂಡು ಯಾವುದೇ ಪೂರ್ವಾಗ್ರಹವಿಲ್ಲದೆ ಪ್ರಾಪಂಚಿಕ ಆಗುಹೋಗುಗಳಿಗೆ ನಾವು ಮುಕ್ತವಾಗಿ ತೆರೆದುಕೊಳ್ಳುತ್ತೇವೆ. “ನಮ್ಮಂತೆ ಅವರು’ ಅನ್ನುವ ಸ್ವಾಭಾವಿಕ ಭಾವನೆ ನಮ್ಮಲ್ಲಿ ಮೂಡುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ನಾವು ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ಪ್ರೀತಿ, ವಿಶ್ವಾಸ ತನ್ನಿಂದ ತಾನಾಗಿಯೇ ಮೂಡುತ್ತದೆ. ಎಲ್ಲರೊಳಗೊಂದಾಗಲು ಪ್ರಯತ್ನಿಸುತ್ತೇವೆ. ಬಾಳ್ವೆ ಸಾಕಾರಗೊಳ್ಳುತ್ತದೆ. ಈ ಎಲ್ಲ ಪರಿವರ್ತನೆಗಳಿಗೆ ಮೂಲಭೂತ ಕಾರಣ “ಶಿಕ್ಷಣ’ ಅನ್ನುವುದನ್ನು ನಾವು ಒಪ್ಪಿಕೊಳ್ಳಬೇಕು. ಎಂತಹ ಶಿಕ್ಷಣ? ಇಲ್ಲಿ “ಸ್ಪಾಟ್‌ಲೆçಟ್’ಗೆ ಬರುವುದೇ “ಲಿಬರಲ್ ಆರ್ಟ್ ಶಿಕ್ಷಣ’.
ಲಿಬರಲ್ ಆರ್ಟ್ ಶಿಕ್ಷಣದ
ಸ್ವರೂಪ ಮತ್ತು ಮಹತ್ವ
ಲಿಬರಲ್ ಆರ್ಟ್ ಶಿಕ್ಷಣ ವಿದ್ಯಾರ್ಥಿಗಳಲ್ಲಿ ವಿಮಶಾìತ್ಮಕ ಚಿಂತನೆಯನ್ನು ಬೆಳೆಸುವುದರ ಜತೆ ಅವರ ಸಂವಹನ ಕೌಶಲವನ್ನು ವೃದ್ಧಿಗೊಳಿಸಲು ಸಹಕಾರ ನೀಡುತ್ತದೆ. ಹಾಗೆಯೇ ಲಿಬರಲ್ ಆರ್ಟ್ ಶಿಕ್ಷಣ ಮಾನವ ಇತಿಹಾಸ, ಕಲೆ, ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಅದರಿಂದ ಅವರ ಜೀವನವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಲು ನೆರವಾಗುತ್ತದೆ. ಬಹಳ ಮುಖ್ಯವಾಗಿ, ಲಿಬರಲ್ ಆರ್ಟ್ ಶಿಕ್ಷಣ ತ್ವರಿತವಾಗಿ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಗೆ ಸೂಕ್ತವಾಗಿ ಹೊಂದಾಣಿಕೆ ಮಾಡಿಕೊಳ್ಳಲು ಯುವ ಪೀಳಿಗೆಯನ್ನು ಸಜ್ಜುಗೊಳಿಸುತ್ತದೆ.
ಪ್ರಸ್ತುತ ಲಿಬರಲ್ ಆರ್ಟ್ ಶಿಕ್ಷಣದ ಮಹತ್ವವನ್ನು ಜಗತ್ತಿನಾದ್ಯಂತದ ಹೆಚ್ಚಿನ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳು ಮನಗಂಡಿವೆ. ಆ ಸಂಸ್ಥೆಗಳು ತಮ್ಮ ಪಠ್ಯಗಳಲ್ಲಿ ಲಿಬರಲ್ ಆರ್ಟ್ ಶಿಕ್ಷಣಕ್ಕೆ ಸಂಬಂಧಿಸಿ “ಕಂಟೆಂಟ್’ಗಳನ್ನು ಸೇರ್ಪಡೆಗೊಳಿಸಿ ತಮ್ಮ ವಿದ್ಯಾರ್ಥಿಗಳಿಗೆ ತಜ್ಞರಿಂದ ಬೋಧಿಸುವ/ ತರಬೇತಿ ನೀಡುವ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ. ಇದೊಂದು ಉತ್ತಮ ಬೆಳವಣಿಗೆ. ತ್ವರಿತಗತಿಯ ಜಾಗತೀಕರಣದಿಂದ ಉದ್ಯೋಗಗಳು ವರ್ಗಾವಣೆಗೊಂಡು ಕಾರ್ಮಿಕರಿದ್ದಲ್ಲಿಗೆ ಬರುವ ಈಗಿನ ಪರಿಸ್ಥಿತಿಯಲ್ಲಿ ಲಿಬರಲ್ ಆರ್ಟ್ ಶಿಕ್ಷಣ ಇನ್ನೂ ಹೆಚ್ಚಿನ ಮಹತ್ವ ಪಡೆಯಲು ಸಾಧ್ಯವಿದೆ.
ಲಿಬರಲ್ ಆರ್ಟ್ ಶಿಕ್ಷಣದ ಮಹತ್ವವನ್ನು ಬಹಳ ಸುಂದರವಾಗಿ ಸಾರುವ ಎರಡು ಪ್ರಮುಖ “ಕೇಸ್ ಸ್ಟಡಿ’ಗಳಿಗೆ ಪ್ರಸ್ತುತಃ ನಮ್ಮ ದೇಶ ಸಾಕ್ಷಿಯಾಗಿರುವುದು ಬಹಳ ಹೆಮ್ಮೆಯ ವಿಷಯ! ಮೊದಲನೆಯದಾಗಿ, ಈಗಿನ ಆರ್.ಬಿ.ಐ. ಗವರ್ನರ್ ಆದ ಶಕ್ತಿಕಾಂತ ದಾಸ್ ಅವರ ವಿನೂತನ ಕಾರ್ಯಶೈಲಿ, ಅವರು ಪಡೆದ ಲಿಬರಲ್ ಆರ್ಟ್ ಶಿಕ್ಷಣದ ಪ್ರತೀಕವಾಗಿ ಗೋಚರಿಸುತ್ತಿದೆ. ಎರಡನೆಯದಾಗಿ, ನಮ್ಮ ದೇಶದ ಪ್ರತಿಷ್ಠಿತ ಇಸ್ರೋ ಸಂಸ್ಥೆಯ “ಚಂದ್ರಯಾನ-3’ರ ಅಭೂತಪೂರ್ವ ಯಶಸ್ಸು ಲಿಬರಲ್ ಆರ್ಟ್ ಶಿಕ್ಷಣದ ಮಹತ್ವವನ್ನು ತಾಂತ್ರಿಕ ಯಶಸ್ಸಿನೊಂದಿಗೆ ಸಮೀಕರಿಸುವಲ್ಲಿ ಉತ್ತಮ ನಿದರ್ಶನವಾಗಿದೆ.
ಶಕ್ತಿಕಾಂತ ದಾಸ್: ಯಶಸ್ಸಿನ ರಹಸ್ಯ
ಇತ್ತೀಚಿನ “ಗ್ಲೋಬಲ್ ಫೈನಾನ್ಸ್ ಸೆಂಟ್ರಲ್ ಬ್ಯಾಂಕರ್ ರಿಪೋರ್ಟ್ ಕಾರ್ಡ್ಸ್’ನ 2023ರ ವರದಿಯಲ್ಲಿ ನಮ್ಮ ದೇಶದ ಆರ್.ಬಿ.ಐ. ಗವರ್ನರ್ ಆದ ಶಕ್ತಿಕಾಂತ ದಾಸ್ ಅವರು “ಎ+’ ರೇಟಿಂಗ್ ಅನ್ನು ತನ್ನ ವಿಶಿಷ್ಟ ಕಾರ್ಯಶೈಲಿಗೆ ಪಡೆದುಕೊಂಡಿರುವುದು ನಾವೆಲ್ಲರೂ ಸಂತಸ ಪಡಬೇಕಾದ ವಿಚಾರ. ಶಕ್ತಿಕಾಂತ ದಾಸ್ ಅವರು ಕೋವಿಡ್-19 ಮತ್ತು ರಷ್ಯಾ-ಉಕ್ರೇನ್ ನಿಂದ ಸಂಭವಿಸಿದ ಹಣಕಾಸು ಬಿಕ್ಕಟ್ಟನ್ನು ನಿಭಾಯಿಸಿದ ರೀತಿ ಶ್ಲಾಘನೀಯ. ಸ್ನಾತಕೋತ್ತರ ಶಿಕ್ಷಣವನ್ನು ಇತಿಹಾಸದಲ್ಲಿ ಪಡೆದ ಶಕ್ತಿಕಾಂತ ದಾಸ್, ತಜ್ಞ ಅರ್ಥಶಾಸ್ತ್ರಜ್ಞರನ್ನು ನಿಬ್ಬೆರಗಾಗಿಸುವಂತೆ ತನ್ನ ಕಾರ್ಯಶೈಲಿಯನ್ನು ರೂಪಿಸಿರುವುದು ನಿಜಕ್ಕೂ ಅನುಸರಣೀಯ! ಶಕ್ತಿಕಾಂತ ದಾಸ್ ಅವರದ್ದು ಸರಳ, ಸಜ್ಜನಿಕೆಯ ವ್ಯಕ್ತಿತ್ವ. ತಾನು ಪಡೆದ ಲಿಬರಲ್ ಆರ್ಟ್ ಇತಿಹಾಸ ಶಿಕ್ಷಣ ಅವರನ್ನು ತನ್ನ ಪ್ರತೀ ಉದ್ಯೋಗಿಯಿಂದ ಯಾವುದೇ ಅಹಂ, ಬಿಗುಮಾನವಿಲ್ಲದೆ ಹಣಕಾಸಿನ ಪ್ರತೀ ಸೂಕ್ಷ್ಮ ವಿಷಯಗಳನ್ನು ನಿರಂತರವಾಗಿ ಕಲಿಯಲು ಪ್ರೇರೇಪಿಸಿತು. ತನ್ನ ಸಹೋದ್ಯೋಗಿಗಳನ್ನು ತನ್ನ ಮನೆಯ ಸದಸ್ಯರ ಹಾಗೆ ಅತ್ಯಂತ ಪ್ರೀತಿ, ವಿಶ್ವಾಸಗಳಿಂದ ಮುನ್ನಡೆಸುವ ಚಾಕಚಕ್ಯವನ್ನು ಶಕ್ತಿಕಾಂತ ದಾಸ್ ಹೊಂದಿದ್ದರು. ಹಾಗೆಯೇ ದಾಸ್ ಅವರ ಸಹೋದ್ಯೋಗಿಗಳಿಗೆ ಅವರ ಮೇಲೆ ಅಪಾರ ಗೌರವ ಮತ್ತು ನಿಷ್ಠೆ. ದಾಸ್ ಅವರು ಅತ್ಯುತ್ತಮ “ಟೀಮ್ ಪ್ಲೇಯರ್’. ಆರ್.ಬಿ.ಐ. ಯಲ್ಲಿ ಸರಿಸುಮಾರು 15,000 ಮಂದಿ ಅಹರ್ನಿಶಿ ಸೇವೆಗೈಯುತ್ತಿದ್ದಾರೆ. ಇದರಲ್ಲಿ 6,000 ಮಂದಿ ವೃತ್ತಿಪರರು. ಶಕ್ತಿಕಾಂತ ದಾಸ್ ತೆಗೆದುಕೊಳ್ಳುವ ಪ್ರತೀ ನಿರ್ಣಯವು ಈ ವೃತ್ತಿಪರರು ಅವರಿಗೆ ನೀಡುವ ಸಮಯೋಚಿತ ಮಾರ್ಗದರ್ಶನದ ಫಲಶ್ರುತಿ. ತಾನು “ಇತಿಹಾಸ’ ವಿದ್ಯಾರ್ಥಿಯಾದರೂ ಅರ್ಥಶಾಸ್ತ್ರ ಮತ್ತು ಹಣಕಾಸಿಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ತನ್ನ ಸಹೋದ್ಯೋಗಿಗಳಿಂದ ತಿಳಿದು ಬೃಹತ್ ಸಂಸ್ಥೆಯನ್ನು ವಿಶ್ವಮಟ್ಟದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ನಿರೂಪಿಸಿದ ಕೀರ್ತಿ ಶಕ್ತಿಕಾಂತ ದಾಸ್ ಅವರಿಗೆ ಸಲ್ಲಬೇಕು. ವೈಜ್ಞಾನಿಕ ಸಾಮಾನ್ಯ ಜ್ಞಾನ, ಕಲಿಯಬೇಕೆಂಬ ಜ್ಞಾನದಾಹ, ತಾಳ್ಮೆ, ತದೇಕಚಿತ್ತದಿಂದ ಇತಿಹಾಸ ವಿದ್ಯಾರ್ಥಿಯೂ ಅರ್ಥಶಾಸ್ತ್ರದಲ್ಲಿ ನೈಪುಣ್ಯ ಸಾಧಿಸಲು ಸಾಧ್ಯ ಅನ್ನುವುದನ್ನು ಜಗತ್ತಿಗೆ ಸಾರಿದರು. ತನ್ನ ಕಾರ್ಯವೈಖರಿಯೇ ಸಮಸ್ಯೆಗಳಿಗೆ ಪರಿಹಾರ ಎಂದು ನಂಬಿದವರು. ಕೇಂದ್ರ ಸರಕಾರದ ಜತೆ “ವೃತ್ತಿಪರ ಮಿತೃತ್ವ’ವನ್ನು ಬೆಳೆಸಿಕೊಂಡು ಎಂದೂ ಅತಿರೇಕಕ್ಕೆ ಎಡೆಮಾಡಿಕೊಡದೆ ಸಮಯೋಚಿತ ಸೂಕ್ತ ನಿರ್ಣಯಗಳನ್ನು ಕೈಗೊಂಡು ನಮ್ಮೀ ಬೃಹತ್ ಆರ್ಥಿಕತೆಯನ್ನು ಸಮರ್ಥವಾಗಿ ಮುನ್ನಡೆಸುವ ಶಕ್ತಿಕಾಂತ ದಾಸ್ ಅವರಿಂದ ನಾವೂ ಕಲಿಯುವುದು ಸಾಕಷ್ಟಿದೆ.
ಪ್ರತೀ ಸಮಸ್ಯೆಯನ್ನು ಮಾನವ ಸಂಬಂಧಗಳಿಂದ, ಸರ್ವಸಾಮಾನ್ಯನಲ್ಲಿ ಸಾಮಾನ್ಯನಾಗಿ ಪರಿಶೀಲಿಸಿ “ಲಿಬರಲ್ ಚಿಂತನಾ ಕ್ರಮ’ದಿಂದ ಪರಿಹಾರಗೊಳಿಸಲು ಖಂಡಿತಾ ಸಾಧ್ಯವಿದೆ. ಲಿಬರಲ್ ಆರ್ಟ್ ಶಿಕ್ಷಣ, ಈ ನಿಟ್ಟಿನಲ್ಲಿ ಸಾಕಷ್ಟು ಪ್ರಭಾವ ಬೀರಲಿದೆ. ನಂಬಿಕೆ, ಪ್ರೀತಿ, ಬದ್ಧತೆ, ಪ್ರಾಮಾಣಿಕತೆ, ಸಮಾನತೆ, ಸ್ವಾತಂತ್ರ್ಯ , ನಿಷ್ಠೆ ಇತ್ಯಾದಿ ಅಂಶಗಳು “ಲಿಬರಲ್ ಆರ್ಟ್ ಶಿಕ್ಷಣ’ದಲ್ಲಿ ಹಾಸುಹೊಕ್ಕಾದ ನವಿರಾದ ಮಾನವೀಯ ಶಾಶ್ವತ ಮೌಲ್ಯಗಳು. ಈ ಮೌಲ್ಯಗಳ ಸಹಾಯದಿಂದ ಯಾವುದೇ ಸಮಸ್ಯೆಯನ್ನು ಹೆಚ್ಚು ವ್ಯಾಪಕವಾಗಿ ಮತ್ತು ಅದರ ಪರಿಣಾಮಗಳನ್ನು ನೈತಿಕ ದೃಷ್ಟಿಕೋನದಿಂದ ನೋಡಲು ಸಾಧ್ಯವಿದೆ.
ಇಸ್ರೋ ಯಶೋಗಾಥೆ!
ನಮ್ಮ ದೇಶದ ಪ್ರಸಿದ್ದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಇತೀಚೆಗಿನ “ಚಂದ್ರಯಾನ-3’ರ ಅಭೂತಪೂರ್ವ ಯಶಸ್ಸು ನಿಜಕ್ಕೂ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಯಶೋಗಾಥೆ! ಹೌದು, “ಚಂದ್ರಯಾನ-3’ರ ಯಶಸ್ಸು ಮೂಲಭೂತವಾಗಿ ಎಂಜಿನಿಯರಿಂಗ್, ವಿಜ್ಞಾನ ಮತ್ತು ಆವಿಷ್ಕಾರಗಳ ನವಿರಾದ ಮೇಳೈಸುವಿಕೆ ಅನ್ನುವುದು ಅಕ್ಷರಶಃ ನಿಜ! ಇನ್ನೂ ಸ್ವಲ್ಪ ಮುಂದುವರಿದು ಕೂಲಂಕಷವಾಗಿ ನೋಡುವುದಾದರೆ, ಇಸ್ರೋದ ಯಶಸ್ಸಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ “ಲಿಬರಲ್ ಆರ್ಟ್’ ಅಂಶಗಳು ಕೈಜೋಡಿಸಿವೆ. ಮಾನವ ಸಹಜ ಕುತೂಹಲ, ಕಲ್ಪನೆ, ದೇಶಪ್ರೇಮ, ಬದ್ಧತೆ, ಆಶಾದಾಯಿತ್ವ, ಅಧ್ಯಯನಶೀಲತೆ, ಟೀಮ್ ಸ್ಪಿರಿಟ…, ಪ್ರಾಮಾಣಿಕತೆ, ಸರಳತೆ, ದೈವೀ ಅಂಶ, ಇತ್ಯಾದಿ ಮಾನವ ಸಹಜ “ಲಿಬರಲ್ ಆರ್ಟ್’ ತಣ್ತೀ ಗಳು ಎಂಜಿನಿಯರಿಂಗ್, ವಿಜ್ಞಾನ ಮತ್ತು ಆವಿಷ್ಕಾರಗಳ ಜತೆ ರಸಪಾಕದ ರೀತಿಯಲ್ಲಿ ಬೆರೆತು ನಮ್ಮ ದೇಶದ ಹಿರಿಮೆ, ಗರಿಮೆಗಳನ್ನು ವಿಶ್ವದಾದ್ಯಂತ ಪಸರಿಸಿರುವುದು ಇಲ್ಲಿ ಉಲ್ಲೇಖಾರ್ಹ.
ಒಂದಂತೂ ನಿಜ. ನಮ್ಮ ಮುಂದಿನ ಪೀಳಿಗೆಯನ್ನು ಸಂಕೀರ್ಣ, ಅನಿಶ್ಚಿತ ಜಗತ್ತಿಗೆ ಸಿದ್ಧಪಡಿಸುವ ನಿಟ್ಟಿನಲ್ಲಿ ಎಂಜಿನಿಯರಿಂಗ್, ವೈದ್ಯಕೀಯ, ತಾಂತ್ರಿಕ ಶಿಕ್ಷಣದ ಕಲಿಕಾ ವಿಷಯಗಳ ಜತೆ ಬದುಕನ್ನು ಶ್ರೀಮಂತಗೊಳಿಸಬಲ್ಲ “ಲಿಬರಲ್ ಆರ್ಟ್ ಶಿಕ್ಷಣ’ವನ್ನು ಅಷ್ಟೇ ನಿಷ್ಠೆಯಿಂದ ಒದಗಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ¨ªಾಗಬೇಕು. “ಹೊಸ ಶಿಕ್ಷಣ ನೀತಿ’ ಈ ದಿಸೆಯಲ್ಲಿ ಸಾಧಿಸುವುದು ತುಂಬಾ ಇದೆ.
ಡಾ| ಸುಧೀರ್ ರಾಜ್ ಕೆ.,ನಿಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!
Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ
“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ
Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ
Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!
MUST WATCH
ಹೊಸ ಸೇರ್ಪಡೆ
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.