BJP ಮಧ್ಯಪ್ರದೇಶದಲ್ಲಿ 7 ಸಂಸದರಿಗೆ ಟಿಕೆಟ್, ಲಾಭವೇನು?
Team Udayavani, Oct 27, 2023, 6:35 AM IST
ಪ್ರತೀ ಬಾರಿ ವಿಧಾನಸಭೆ, ಲೋಕಸಭಾ ಚುನಾವಣೆಗಳು ಬಂದಾಗಲೂ ಬಿಜೆಪಿ ಏನಾದರೂ ಒಂದು ಪ್ರಯೋಗ ಮಾಡುತ್ತಲೇ ಇರುತ್ತದೆ. ಯಶಸ್ವಿಯಾಗಲಿ, ಬಿಡಲಿ ಪ್ರಯೋಗಗಳಂತೂ ನಿರಂತರವಾಗಿ ನಡೆಯುತ್ತವೆ. ಕರ್ನಾಟಕದಲ್ಲಿ ಹೊಸಬರಿಗೆ ಟಿಕೆಟ್ ಕೊಟ್ಟು, ನಾಯಕತ್ವ ಬದಲಿಸಿ ಭಾರೀ ಬೆಲೆ ತೆತ್ತಿದೆ. ಪ್ರಸ್ತುತ ಮಧ್ಯಪ್ರದೇಶದಲ್ಲಿ 7 ಜನ ಲೋಕಸಭಾ ಸದಸ್ಯರಿಗೆ ಟಿಕೆಟ್ ನೀಡಿದೆ! ಇದರಲ್ಲಿ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್, ಫಗ್ಗಾನ್ ಸಿಂಗ್ ಕುಲಸ್ತೆ ಕೇಂದ್ರ ಸಚಿವರು. ಇವರೆಲ್ಲ ಸಿಎಂ ಸ್ಥಾನಕ್ಕೆ ಪೈಪೋಟಿ ಒಡ್ಡಬಲ್ಲವರೂ ಹೌದು.
ಇವರನ್ನೆಲ್ಲ ಬಿಜೆಪಿ ಜಿಲ್ಲಾ ಘಟಕಗಳು ಶಿಫಾರಸು ಮಾಡಿಲ್ಲ, ಆದರೆ ಕೇಂದ್ರ ಸಂಸದೀಯ ಸಮಿತಿಯೇ ಕಣಕ್ಕಿಳಿಸಿದೆ. ಯಾವ ಆಧಾರದಲ್ಲಿ ಹೀಗೆ ಮಾಡಲಾಗಿದೆ? ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವಾಗ ಇವರನ್ನು ವಿಧಾನಸಭೆಯಲ್ಲಿ ಸ್ಪರ್ಧಿಸಲು ಕಳುಹಿಸಿರುವುದೇಕೆ ಎಂಬುದೆಲ್ಲ ದೊಡ್ಡ ಪ್ರಶ್ನೆಗಳು. ರಾಜಕೀಯ ವಿಶ್ಲೇಷಕರ ಪ್ರಕಾರ, ಇದರ ಹಿಂದೆ ಬಿಜೆಪಿಯ ಯಾವುದೇ ತಂತ್ರಗಳಿದ್ದರೂ, ವಿಶೇಷ ಪರಿಣಾಮ ಬೀರುವು ದಿಲ್ಲ. ಕೇವಲ ಅಭ್ಯರ್ಥಿಗಳನ್ನು ಬದಲಿಸಿದ ಮಾತ್ರಕ್ಕೆ, ಮತದಾರರ ಅಭಿಪ್ರಾಯ ಬದಲಾ ಗಲು ಸಾಧ್ಯವೇ? ಇದು ಬಿಜೆಪಿಯೊಳಗೆ ಒಳ ಜಗಳ ತಂದಿಡುತ್ತದೆ. ಎಲ್ಲಕ್ಕಿಂತ ಮುಖ್ಯಮಂತ್ರಿ ಸ್ಥಾನದಲ್ಲಿ ಭದ್ರ ವಾಗಿ ಕುಳಿತಿರುವ ಶಿವರಾಜ್ ಸಿಂಗ್ ಚೌಹಾಣ್‌ಗೆ ಹೊಸಬರು ಸವಾಲು ಹಾಕಿದರೆ, ಎಲ್ಲವೂ ಸುಗಮವಾಗಿ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ.
ಇಂದೋರ್-1ನಿಂದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ರಿಗೆ ಅವಕಾಶ ನೀಡಲಾಗಿದೆ. ಇವರೂ ಮುಖ್ಯಮಂತ್ರಿ ಸ್ಥಾನಕ್ಕೇರುವ ಸಂಭಾವ್ಯ ವ್ಯಕ್ತಿ. ಮೊರೆನಾ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ತೋಮರ್‌ಗೆ ದಿಮಾನಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಸತತ 3 ಬಾರಿ ಬಿಜೆಪಿ ಸೋತಿದೆ. ಇನ್ನು ಮೊರೆನಾ ವ್ಯಾಪ್ತಿಯಲ್ಲಿ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ, ಕಳೆದ ಚುನಾವಣೆ ಯಲ್ಲಿ ಬಿಜೆಪಿ 7ರಲ್ಲಿ ಸೋತಿತ್ತು! ಹೀಗಿರುವಾಗ ಮುಖಗಳು ಬದಲಾದಾಗ ಪರಿಸ್ಥಿತಿ ಬದಲಾಗುತ್ತಾ ಎನ್ನುವುದು ಸಹಜ ಪ್ರಶ್ನೆ.
347 ಕೋಟಿ ರೂ. ಮೌಲ್ಯದ ವಸ್ತುಗಳ ಜಪ್ತಿ
ಚುನಾವಣೆಯ ಹೊಸ್ತಿಲಲ್ಲಿರುವ ತೆಲಂಗಾಣದಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಅಂದರೆ ಅ.9ರಿಂದ ಈವರೆಗೆ ಚುನಾವಣ ಅಕ್ರಮಕ್ಕೆ ಸಂಬಂಧಿಸಿ ಒಟ್ಟು 347 ಕೋಟಿ ರೂ.ಗಳ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 122.6 ಕೋಟಿ ರೂ. ನಗದು, 230.9 ಕೆ.ಜಿ. ಚಿನ್ನ, 1038.9 ಕೆ.ಜಿ. ಬೆಳ್ಳಿ ಹಾಗೂ 156.2 ಕೋಟಿ ರೂ. ಮೌಲ್ಯದ ಇತರ ಅಮೂಲ್ಯ ವಸ್ತುಗಳು, 20.7 ಕೋಟಿ ರೂ. ಮೌಲ್ಯದ ಮದ್ಯ, 17.18 ಕೋಟಿ ರೂ. ಮೌಲ್ಯದ ಗಾಂಜಾ ಮತ್ತು 30.4 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಚುನಾವಣ ಆಯೋಗ ತಿಳಿಸಿದೆ. ನ.30ರಂದು ರಾಜ್ಯ ವಿಧಾನಸಭೆಗೆ ಮತದಾನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.