Davanagere; ಲಂಚ ಸ್ವೀಕರಿಸುತ್ತಿದ್ದ ಪಿಡಿಒ – ಡಾಟಾ ಎಂಟ್ರಿ ಅಧಿಕಾರಿ ಲೋಕಾಯುಕ್ತ ಬಲೆಗೆ
Team Udayavani, Oct 27, 2023, 6:42 PM IST
ದಾವಣಗೆರೆ: ಮನೆಯ ಖಾತೆ ಇ-ಸ್ವತ್ತು ಮಾಡಿಕೊಡಲು 10 ಸಾವಿರ ರೂಪಾಯಿ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಡಾಟಾ ಎಂಟ್ರಿ ಆಪರೇಟರ್ ಇಬ್ಬರನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಸ್.ಎಂ. ನಂದಿಲಿಂಗೇಶ ಸಾರಂಗ ಮಠ (35) ಮತ್ತು ಡಾಟಾಎಂಟ್ರಿ ಆಪರೇಟರ್ ಅಜ್ಜಯ್ಯ (32) ಲೋಕಾಯುಕ್ತರ ಬಲೆಗೆ ಬಿದ್ದವರು.
ದಾವಣಗೆರೆ ನಿಟುವಳ್ಳಿಯಲ್ಲಿ ವಾಸವಿರುವ ಮೂಲತಃ ಜಗಳೂರು ತಾಲೂಕು ಕೆಳಗೋಟೆ ಗ್ರಾಮದ ಬಸವನಗೌಡ ಎಂಬುವರು ಕೆಳಗೋಟೆ ಗ್ರಾಮದಲ್ಲಿನ ತಮ್ಮ ಮನೆಯ ಖಾತೆಗೆ ಇ-ಸ್ವತ್ತು ಮಾಡಿಸಲು ಕೆಚ್ಚೇನಹಳ್ಳಿ ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ್ದರು. ಇ-ಖಾತೆ ಮಾಡಿಕೊಡಲು ಪಿಡಿಒ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇರಿಸಿದ್ದರು. ಅ.27ರಂದು ಹಣ ನೀಡುವುದಾಗಿ ಹೇಳಿದ್ದ ಬಸವನಗೌಡ ಹೇಳಿದ್ದರು.
ಈತನ್ಮಧ್ಯೆ ಅ.21ರಂದು ಬಸವನ ಗೌಡ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನನ್ವಯ ಯೋಜನೆ ರೂಪಿಸಿದ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ನೇತೃತ್ವದ ಅಧಿಕಾರಿಗಳ ಶುಕ್ರವಾರ ಗ್ರಾಮ ಪಂಚಾಯತ್ ಕಚೇರಿಯಲ್ಲೇ ಬಸವನಗೌಡ ಅವರಿಂದ 10 ಸಾವಿರ ರೂಪಾಯಿ ಪಡೆಯುತ್ತಿದ್ದ ಎಸ್.ಎಂ. ನಂದಿಲಿಂಗೇಶ ಸಾರಂಗಮಠ ಮತ್ತು ಅಜ್ಜಯ್ಯನನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.