Private scene: ಇನ್ಸ್ಪೆಕ್ಟರ್ನಿಂದ ಪತ್ನಿಯ ಖಾಸಗಿ ದೃಶ್ಯ ಅಪ್ಲೋಡ್
Team Udayavani, Oct 28, 2023, 11:22 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಚ್ಛೇದನಕ್ಕೆ ಒತ್ತಾಯಿಸಿ ದೆಹಲಿ ಇಂಟಲಿಜೆನ್ಸ್ ಬ್ಯೂರೊದ ಇನ್ಸ್ಪೆಕ್ಟರ್ವೊಬ್ಬರು ಪತ್ನಿಯ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಆಕೆಯ ಖಾಸಗಿ ಫೋಟೋ ಅಪ್ಲೋಡ್ ಮಾಡಿರುವ ಆರೋಪ ಕೇಳಿ ಬಂದಿದ್ದು, ನ್ಯಾಯಕ್ಕಾಗಿ ಸಂತ್ರಸ್ತೆ ಠಾಣೆ ಮೆಟ್ಟಿಲೇರಿದ್ದಾಳೆ.
ಗರೀಮಾ ಕುಮಾರಿ ನೀಡಿರುವ ದೂರಿನನ್ವಯ ಇನ್ಸ್ಪೆಕ್ಟರ್ ಶ್ರವಣ್ ಕುಮಾರ್ ವಿರುದ್ಧ ಯಲಹಂಕ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಶ್ರವಣ್ ಕುಮಾರ್ ಹಾಗೂ ಗರೀಮಾ ಕುಮಾರಿ 2006ರಲ್ಲಿ ಮದುವೆಯಾಗಿದ್ದು, 13 ವರ್ಷದ ಮಗಳಿದ್ದಾಳೆ. ವಿಚ್ಛೇದನ ಕೋರಿ ಶ್ರವಣ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಪತ್ನಿಯ ಮೇಲೆ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ.
ಈ ನಡುವೆ ಪತ್ನಿಯ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಖಾಸಗಿ ಫೋಟೋ, ವೀಡಿಯೋ ಅಪ್ಲೋಡ್ ಮಾಡಿದ್ದಾರೆ. ಪಾನೀಯದಲ್ಲಿ ಪತಿ ಮದ್ಯಪಾನ ಬೆರೆಸಿಕೊಟ್ಟು, ಕುಡಿಯುವಾಗ ತಮಗೆ ಗೊತ್ತಿಲ್ಲದಂತೆ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಬಳಿಕ ನಕಲಿ ಇನ್ಸ್ಟಾಗ್ರಾಂನಲ್ಲಿ ಇದನ್ನು ಅಪ್ಲೋಡ್ ಮಾಡಿದ್ದಾರೆ.
ವಿಚ್ಛೇದನ ನೀಡದಿದ್ದರೆ ಪತ್ನಿ ಮತ್ತು ಮಗಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಗರೀಮಾ ಕುಮಾರಿ ದೂರಿನಲ್ಲಿ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.