Mudalagi: ತಹಶೀಲ್ದಾರ್ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ
Team Udayavani, Oct 28, 2023, 3:50 PM IST
ಮೂಡಲಗಿ: ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಕಾರ್ಯಾಲಯ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಗೋಕಾಕ ಹಾಗೂ ವಾಲ್ಮೀಕಿ ಸಮುದಾಯ ಆಶ್ರಯದಲ್ಲಿ ಆ.28ರ ಶನಿವಾರ ಮೂಡಲಗಿ ತಹಶೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಉತ್ಸವ ಸಮಾರಂಭ ಜರಗಿತು.
ಸಮಾರಂಭದಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಸಂಗಮೇಶ ಗುಜುಗೊಂಡ ಮಾತನಾಡಿ, ಜಾಗತಿಕ ಮಹಾಕಾವ್ಯ ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ ಪ್ರತಿಪಾದಿಸಿದ ಮೌಲ್ಯಗಳು ಎಂದಿಗೂ ಪ್ರಸ್ತುತ. ಅವು ಆದರ್ಶ ಸಮಾಜದ ಅನುಶಾಸನಗಳಾಗಿವೆ ಎಂದರು.
ರಾಮಾಯಣದ ಮೂಲಕ ವಾಲ್ಮೀಕಿ ಬಹುಶ್ರುತ ವ್ಯಕ್ತಿತ್ವ ಪರಿಚಯವಾಗುತ್ತಿದ್ದು, ಮಹಾಕವಿ, ಚಿಂತಕ, ಧಾರ್ಮಿಕ, ಶಿಕ್ಷಣ ತಜ್ಞ, ತತ್ವಜ್ಞಾನಿ, ರಾಜನೀತಿ ರೂಪಕ ಇತಿಹಾಸಕಾರರಾಗಿ ನೀಡಿದ ಕೊಡುಗೆಗಳು ಅನನ್ಯವಾದವು. ರಾಮಾಯಣದ ವಿಸ್ತೃತ ಅಧ್ಯಯನದ ಮೂಲಕ ಈ ಕವಿಯ ಸಮಗ್ರ ವ್ಯಕ್ತಿತ್ವ ದರ್ಶನ ಸಾಧ್ಯವಾಗುತ್ತದೆ. ಸಂಸ್ಕೃತಿ ಕಥನವಾಗಿರುವ ರಾಮಾಯಣದ ಓದು ಚಿಂತನೆ ಸರ್ವಕಾಲಿನ ಸಂಗತಿಗಳಾಗಿವೆ ಎಂದರು.
ಮೂಡಲಗಿ ತಹಶIಲ್ದಾರ್ ಶಿವಾನಂದ ಬಬಲಿ ಮತ್ತು ಬಿಇಒ ಅಜೀತ್ ಮನ್ನಿಕೇರಿ ಮಾನಾಡಿದರು.
ಸಮಾರಂಭದಲ್ಲಿ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನನವರ, ಸಿಡಿಪಿಓ ಯಲ್ಲಪ್ಪ ಗದಾಡಿ, ಸಿಪಿಐ ಶ್ರೀಶೈಲ ಬ್ಯಾಕೂಡ, ಹೆಸ್ಕಾಂ ಅಧಿಕಾರಿ ಎಂ ಎಸ್ ನಾಗಣ್ಣವರ, ಪಿಎಸ್ಐ ಎಚ್ ವೈ ಬಾಲದಂಡಿ, ಮೂಡಲಗಿ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ ಬಿ ಪಾಟೀಲ್, ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಹನುಮಂತ ಗುಡ್ಲಮನಿ, ಶಿವಾನಂದ ಚಂಡಕಿ, ಅಬ್ದುಲಗಪಾರ ಡಾಂಗೆ, ಶಿವು ಸಣ್ಣಕ್ಕಿ, ಆನಂದ ಟಪಾಲದಾರ ಗಣ್ಯರಾದ ಆರ್.ಪಿ.ಸೋನವಾಲಕ, ಈರಪ್ಪ ಬನ್ನೂರು, ಸಿದ್ದು ಗಡ್ಡೆಕರ, ರಮೇಶ ಸಣ್ಣಕ್ಕಿ ಶಾಬಪ್ಪ ಸಣ್ಣಕ್ಕಿ, ವಾಲ್ಮೀಕಿ ಸಮಾಜ ಮುಖಂಡರಾದ ಆನಂದ ಟಪಾಲ್ದಾರ್ ಯಲ್ಲಾಲಿಂಗ ವಾಳದ, ಸಿ.ಬಿ ಪೂಜಾರಿ, ಮಲ್ಲಪ್ಪ ದಳವಾಯಿ, ಮಹಾಂತೇಶ ಭೈರನಟ್ಟಿ ಮತ್ತಿತರರು ಇದ್ದರು.
ಗೋಕಾಕ್ ಎನ್. ಎಸ್. ಎಫ್ ಶಾಲೆಯ ಮುಖ್ಯೋಪಾಧ್ಯಾಯ ಎಜಿ ಕೋಳಿ ನಿರೂಪಿಸಿದರು. ವಸತಿ ನಿಲಯದ ನಿಲಯ ಮೇಲ್ವಿಚಾರಕ ಭರತೇಶ್ ಬೋಳಿ ಸ್ವಾಗತಿಸಿದರು. ಗೋಕಾಕ್ ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್ ಕೆ.ಆಸಂಗಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು, ಅಧಿಕಾರಿಗಳನ್ನು ಚುನಾಯಿತ ಪ್ರತಿನಿಧಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.