Egypt; ಭೀಕರ ಸರಣಿ ರಸ್ತೆ ಅವಘಡ : ಕನಿಷ್ಠ 32 ಮಂದಿ ಮೃತ್ಯು
Team Udayavani, Oct 28, 2023, 7:14 PM IST
ಕೈರೋ: ಈಜಿಪ್ಟ್‌ನ ಬೆಹೈರಾ ಗವರ್ನರೇಟ್‌ನ ಹೆದ್ದಾರಿಯೊಂದರಲ್ಲಿ ಶನಿವಾರ ನಡೆದ ಹಲವು ಕಾರುಗಳ ನಡುವೆ ಭೀಕರ ಸರಣಿ ಅವಘಡದಲ್ಲಿ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ.ರಸ್ತೆ ಅಪಘಾತದಲ್ಲಿ 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಈಜಿಪ್ಟ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೈರೋದಿಂದ ಉತ್ತರಕ್ಕೆ 160 ಕಿಮೀ ದೂರದಲ್ಲಿರುವ ವಾಡಿ ಅಲ್-ನಾಟ್ರೌನ್ ಬಳಿಯ ಕೈರೋ-ಅಲೆಕ್ಸಾಂಡ್ರಿಯಾ ಮರುಭೂಮಿ ರಸ್ತೆಯಲ್ಲಿ ಭೀಕರ ಅವಘಡ ಸಂಭವಿಸಿದೆ ಎಂದು ಸರ್ಕಾರಿ ಅಲ್-ಅಹ್ರಾಮ್ ಪತ್ರಿಕೆ ಹೇಳಿದೆ.
ಸ್ಥಳೀಯ ಮಾಧ್ಯಮಗಳು ಮತ್ತು ಅಧಿಕಾರಿಗಳ ಪ್ರಕಾರ, ಈಜಿಪ್ಟ್ ರಾಜಧಾನಿ ಕೈರೋ ಮತ್ತು ಮೆಡಿಟರೇನಿಯನ್ ನಗರ ಅಲೆಕ್ಸಾಂಡ್ರಿಯಾವನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಬೆಳಗಿನ ಮಂಜು ಕವಿದಿದ್ದ ವೇಳೆ ಕೈರೋಗೆ ತೆರಳುತ್ತಿದ್ದ ಪ್ರಯಾಣಿಕರ ಬಸ್ಸೊಂದು ನಿಂತಿದ್ದ ವಾಹನಕ್ಕೆ ಢಿಕ್ಕಿ ಹೊಡೆದಾಗ ಘರ್ಷಣೆ ನಡೆದಿದ್ದು ಈ ವೇಳೆ ಇತರ ಕಾರುಗಳು ಬಸ್‌ಗೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ ಎಂದು ತಿಳಿದು ಬಂದಿದೆ. ಒಂದು ಬಸ್ , ಮಿನಿಬಸ್ ಮತ್ತು ಹಲವು ಕಾರುಗಳು ಬೆಂಕಿಯಿಂದ ಸುಟ್ಟುಹೋಗಿವೆ ಎಂದು ಮಾಹಿತಿ ಲಭ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.