Kannada Rajyotsava: ನಾನಂದುಕೊಂಡ ಕನಸಿನ ಜಾಗ ಕರ್ನಾಟಕ…
Team Udayavani, Nov 1, 2023, 8:00 AM IST
ಕರ್ನಾಟಕ ಕೇಡರ್ ಸಿಕ್ಕಿದ್ದು ನನ್ನ ಸೌಭಾಗ್ಯ. ನನ್ನೊಂದಿಗೆ ಸುಮಾರು 30 ವರ್ಷಗಳ ಕಾಲ ಕೆಲಸದ ಅವಧಿಯಲ್ಲಿ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ತುಂಬ ಸಹಕಾರ ನೀಡಿದ್ದಾರೆ. ಕರ್ನಾಟಕ ಎಂದರೆ ಸುಂದರವಾದ ಜಾಗ. ಮಂಗಳೂರು, ಕಾರವಾರ, ಶಿವಮೊಗ್ಗ, ಶಿಕಾರಿಪುರ, ಮೈಸೂರು ಹಾಗೂ ಬೀದರ್ ಮತ್ತು ವಿಜಯಪುರ ಬೇರೆನೇ ಸುಂದರ ಸ್ಥಳಗಳಾಗಿವೆ. ರಾಜ್ಯದ ಜನರು ಮಾತು ಕೇಳುತ್ತಾರೆ. ಸಂವಾದ ನಡೆಸಲು ಉತ್ತಮವಾಗಿತ್ತು. ರಾಜ್ಯದ ಸಂಸ್ಕೃತಿ ವೈವಿಧ್ಯಮಯವಾಗಿದೆ. ನಾನಾ ರೀತಿಯ ಕೋಲಾಟ, ಯಕ್ಷಗಾನ, ಬಯಲಾಟ ಸೇರಿ ಹಲವು ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಪ್ರಾಕೃತಿಕ ಸೌಂದರ್ಯ ಕೂಡ ಇಲ್ಲಿ ಹೆಚ್ಚಿದೆ. ಯಾವುದೇ ತೊಂದರೆ ಇಲ್ಲದೇ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಯಾವ ರೀತಿಯ ಕೆಲಸ ಮಾಡಬೇಕೆಂದು ಎಂದುಕೊಂಡಿದ್ದೆನೋ, ಅದೇ ರೀತಿ ಮಾಡಿದ್ದೇನೆ.
ರಾಜ್ಯದ ಸಾಹಿತ್ಯಕ್ಕೂ ಉತ್ತಮ ಸಂಬಂಧವಿದೆ. ಸಾಗರದ ಕೆ.ವಿ.ಸುಬ್ಬಣ್ಣ, ಚರಕ ಪ್ರಸನ್ನ, ಅನಂತಮೂರ್ತಿ, ಗೋಪಾಲಕೃಷ್ಣ ಅಡಿಗರೊಂದಿಗೆ ಉತ್ತಮ ಸಂಬಂಧ ಇತ್ತು. ಈ ಮೂಲಕ ಸಿದ್ದಲಿಂಗಯ್ಯ, ಶಿವಪ್ರಕಾಶ್ ಮೊದಲಾದ ಸಾಹಿತಿಗಳ ಪರಿಚಯವಾಗಿತ್ತು. ಸಾಮಾನ್ಯವಾಗಿ ಮಾಧ್ಯಮದವರ ಜತೆ ತೊಂದರೆ ಇರುತ್ತದೆ. ಆದರೆ, ನನಗೆ ಮಾಧ್ಯಮದವರಿಂದ ಯಾವುದೇ ತೊಂದರೆ ಆಗಿಲ್ಲ. ಅವರ ಪ್ರೇರಣೆಯಿಂದ ಎರಡೂ¾ರು ಪುಸ್ತಕಗಳನ್ನು ಬರೆದಿದ್ದೇನೆ. ವಚನ ಸಾಹಿತ್ಯದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆದುಕೊಂಡಿದ್ದೇನೆ. ದ.ರಾ.ಬೇಂದ್ರೆ, ಶಿವಪ್ರಕಾಶ್ ಅವರ ಪುಸ್ತಕಗಳನ್ನು ಅನುವಾದ ಮಾಡಿದ್ದೇನೆ. ಪ್ರತ್ಯೇಕವಾಗಿ ಎರಡು ಪುಸ್ತಕಗಳನ್ನು ಬರೆದಿದೇªನೆ.
-ಅಜಯ್ ಕುಮಾರ್ ಸಿಂಗ್, ನಿವೃತ್ತ ಡಿಜಿ-ಐಜಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…
ರೀಲ್‌ನಿಂದ ರಿಯಲ್ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!
Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ
Explainer:ಅಮೇರಿಕವನ್ನು ಅಭಿನಂದಿಸುವ ಮೊದಲು ಭಾರತೀಯರು ಕಲಿಯಬೇಕಾದ ರಾಜಕೀಯ ಪಾಠ…
Golden Jubliee: ಕನ್ನಡಕ್ಕೆ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಬಾರದಿರಲಿ
MUST WATCH
ಹೊಸ ಸೇರ್ಪಡೆ
Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.