UV Fusion: ಬದುಕಿನ ಹಾದಿಯಲಿ


Team Udayavani, Oct 30, 2023, 7:10 AM IST

11-uv-fusion

ಜೀವನದಲ್ಲಿ ಪ್ರತಿ ಬಾರಿಯೂ ಸೋಲುವ ವ್ಯಕ್ತಿ ಗೆಲ್ಲುವ ನಿರೀಕ್ಷೆಯನ್ನು ಬಿಟ್ಟುಬಿಡುತ್ತಾನೆ. ಆದರೆ ಸೋಲು ಗೆಲುವು ಎರಡು ಸಮಾನ, ಎರಡನ್ನು ಸ್ವೀಕರಿಸಿ ಜೀವನ ನಡೆಸುವುದು ಬಹುಮುಖ್ಯ. ಸೋಲು ಶಾಶ್ವತವಲ್ಲ ಗೆಲುವು ಅಂತಿಮವು ಅಲ್ಲ. ಮೊದಲು ನಮಗೆ ನಮ್ಮ ಮೇಲೆ ನಂಬಿಕೆ ಇರಬೇಕು. ನಂಬಿಕೆ ಎನ್ನುವುದು ಜಯದ ಮೊದಲ ಮೆಟ್ಟಿಲು ಮುಂದೊಂದು ದಿನ ನನ್ನ ದಿನವೂ ಬಂದೇ ಬರುತ್ತದೆ ಎಂದು ಬಲವಾದ ನಂಬಿಕೆ ಇಟ್ಟು ಜೀವನ ನಡೆಸಬೇಕು.

ನಮಗೆಲ್ಲ ತಿಳಿದ ಹಾಗೆ ದ್ರೋಣಚಾರ್ಯರು ಹಕ್ಕಿಯ ಕಣ್ಣಿಗೆ ಬಾಣ ಹೊಡೆಯಲು ಹೇಳಿದಾಗ ಅಲ್ಲಿ ಅನೇಕ ವೀರಾನುಪುರುಷರು ಇದ್ದರು ಹಾಗೆ ಅರ್ಜುನನು ಇದ್ದ, ಆದರೆ ಅಲ್ಲಿ ಹಕ್ಕಿಯ ಕಣ್ಣನ್ನು ಭೇದಿಸಿದ್ದು ಮಾತ್ರ ಅರ್ಜುನ ಯಾಕೆಂದರೆ ಆ ಗುರಿಯ ಸ್ಪಷ್ಟತೆ ಅವನಲ್ಲಿತ್ತು. ಜೀವನದಲ್ಲಿ ಗುರಿ, ಗುರು ಎಲ್ಲವೂ ಅಗತ್ಯ ಗುರುವಿನ ಮಾರ್ಗದರ್ಶನ ಅತ್ಯಂತ ಅಗತ್ಯ.

ದೇವನೂರು ಮಹದೇವರು ಹೇಳಿದಂತೆ ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ನಾಳೆ ಫ‌ಲ ಕೊಟ್ಟೆ ಕೊಡುತ್ತದೆ. ಭೂಮಿಗೆ ಬಿದ್ದ ಬೀಜ ತತ್‌ಕ್ಷಣಕ್ಕೆ ಫ‌ಲ ಕೊಡುವುದು ಅಸಾಧ್ಯ, ವಾರ, ತಿಂಗಳುಗಳೇ ಬೇಕು ಸರಿಯಾದ ಸಮಯದೊಂದಿಗೆ ಫ‌ಲ ಸಿಗುವುದು, ಹಾಗೆ ಕಷ್ಟಪಟ್ಟು ಕಲಿತ ಅಕ್ಷರ ಕೂಡ ಮುಂದೊಂದು ದಿನ ನಮ್ಮ ಜೀವನವನ್ನೇ ಬೆಳಕಾಗಿಸಬಹುದು ಯಾವತ್ತೂ ನಾವು ಹೊಸ ವಿಚಾರಗಳನ್ನು ಕಲಿಯುತ್ತಾ ಇರಬೇಕು. ಅಂತಿಮ ಎನ್ನುವುದು ಯಾವ ವಿದ್ಯೆಗೂ ಇಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿಯು ಹೊಸತನ ಇದ್ದೇ ಇರುತ್ತದೆ.

ಆ ಹೊಸತನವನ್ನು ಮೈಯೆÇÉಾ ಕಣ್ಣಾಗಿ ಕಂಡುಹಿಡಿಯಬೇಕು ಮತ್ತು ಅದನ್ನು ಜೀವನದಲ್ಲಿ ಅಳವಡಿಸುವುದು ನಮ್ಮ ಜವಾಬ್ದಾರಿ ಹಾಗಿದ್ದರೆ ಮಾತ್ರ ಬದುಕಿಗೆ ಪ್ರತಿಫ‌ಲದ ನೈಜ ಬೆಲೆ ಸಿಗುವುದು.

ಜೀವನದ ಹಾದಿಯಲಿ ಕಷ್ಟಗಳು ಎಷ್ಟೇ ಇರಬಹುದು. ಆದರೆ ಅದನ್ನು ಹರಿಯುವ ನೀರಿನಂತೆ ಬಗೆಹರಿಸಬೇಕು ಬದುಕಿನಲ್ಲಿ ಬಡವನಾಗಿದ್ದರು ಕಲಿಕೆಯಲ್ಲಿ, ಪ್ರತಿಭೆಯಲ್ಲಿ ಎಂದಿಗೂ ಶ್ರೀಮಂತನಾಗಿರಬೇಕು.

ಬಡತನದಲ್ಲಿ ಸಾಧಿಸುವ ಧೈರ್ಯ ಆತ್ಮವಿಶ್ವಾಸ ನಮ್ಮಲ್ಲಿದ್ದರೆ ಜಯ ಎಂದಿಗೂ ಶಾಶ್ವತ. ಹಾಗೆ ಸೂಕ್ತ ಸಮಯಬೇಕು ಎಂದು ಕಾಯುವುದಕ್ಕಿಂತ ನಾವೇ ಆ ಸಮಯವನ್ನು ಸೃಷ್ಟಿಸಿಕೊಳ್ಳಬೇಕು. ನಾಳೆ ಮಾಡುವೆ ಎನ್ನುವುದನ್ನು ಬಿಟ್ಟು ಇವತ್ತೇ ಮಾಡುವೆ ಎಂದು ಸಕಲ ನಿರ್ಧಾರ ನಮ್ಮದಾಗಬೇಕು.

ಬದುಕಿನಲ್ಲಿ ಸಾಧ್ಯ, ಅಸಾಧ್ಯ ಎನ್ನುವುದು ಗೆಲುವಿನ ಭಾಗ ಆದರೆ ಅಸಾಧ್ಯ ಅನ್ನೋದು ಯಾವುದು ಇಲ್ಲ. ಕಠಿನ ನಿರ್ಧಾರಗಳನ್ನು ಸುಲಭದಲ್ಲಿ ಯೋಚಿಸಿ ಎಲ್ಲವೂ ಸಾಧ್ಯ ಎಂದು ಗಟ್ಟಿ ಮನಸ್ಸಿನೊಂದಿಗೆ ಇರಬೇಕು. ಮೊದಲು ನಮ್ಮನ್ನು ನಾವು ಹುರಿದುಂಬಿಸಬೇಕು ಮತ್ತು ಅಗೇ ಆಗುತ್ತದೆ, ಮಾಡೇ ಮಾಡುತ್ತೇನೆ ಎಂಬ ಛಲದೊಂದಿಗಿರಬೇಕು.

ಕಳೆದು ಹೋದ ಕ್ಷಣಗಳನ್ನು ಮರೆತು ಮುಂದಿನ ದಿನಗಳನ್ನು ಯೋಚಿಸುವುದು ಬಿಟ್ಟು ಈ ದಿನ ನಾನು ಏನು ಮಾಡಬೇಕು ಎಂದು ಯೋಚಿಸುವುದು ಮುಖ್ಯ. ಪ್ರತಿಕ್ಷಣವು ಹೊಸತನವನ್ನು ಯೋಚಿಸುತ್ತಾ ಹೊಸ ಭರವಸೆಯೊಂದಿಗೆ ಗೆಲುವಿನ ಹಾದಿ ಹಿಡಿಯುವ. ನಮ್ಮ ಜೀವನ ನಮ್ಮ ಕೈಯಲ್ಲಿದೆ, ನಾವೇ ನಮ್ಮ ಜೀವನದ ಶಿಲ್ಪಿ, ಮಾಲಕರು ಕೂಡ.

ಅನಿತಾ ಉಜಿರೆ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

16

Uv Fusion: ಪೆನ್ನಿಗೊಂದು ಕಥೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.