ಹಿಂದಿಯ ʼ12th Failʼ ಸಿನಿಮಾ ನೋಡಿ “ಸ್ಪೂರ್ತಿ ಪಡೆದಿದ್ದೇನೆ” ಎಂದ ರಿಷಬ್ ಶೆಟ್ಟಿ
Team Udayavani, Oct 30, 2023, 5:15 PM IST
ಬೆಂಗಳೂರು: ನಟ- ನಿರ್ದೇಶಕ ರಿಷಬ್ ಶೆಟ್ಟಿ ಅವರು ಇತ್ತೀಚೆಗೆ ತೆರೆಕಂಡ ಹಿಂದಿ ಸಿನಿಮಾವೊಂದು ಸ್ಪೂರ್ತಿ ನೀಡಿದೆ ಎಂದು ಟ್ವೀಟ್ ಮಾಡಿದಿದ್ದಾರೆ.
ವಿಧು ವಿನೋದ್ ಚೋಪ್ರಾ ನಿರ್ದೇಶನದ ʼ 12th Failʼ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದೆ. ಸ್ಪೂರ್ತಿದಾಯಕ ಕಥಾಹಂದರವುಳ್ಳ ಈ ಸಿನಿಮಾಕ್ಕೆ ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಮತ್ತು ಐಆರ್‌ಎಸ್ ಅಧಿಕಾರಿ ಶ್ರದ್ಧಾ ಜೋಶಿ ಅವರ ನಿಜ ಜೀವನದ ಕಥೆಯಿಂದ ಪ್ರೇರಿತವಾದ ಈ ಸಿನಿಮಾದಲ್ಲಿ ವಿಕ್ರಾಂತ್ ಮಾಸ್ಸೆ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕೆರಿಯರ್ ನಲ್ಲಿ ಗುರಿ ಸಾಧಿಸುವಾಗ ಸೋಲು ಎದುರಾದರೆ ಮರಳಿ ಪ್ರಯತ್ನ ಮಾಡು ಎನ್ನುವ ನೀತಿಯನ್ನು ಸಿನಿಮಾ ಸ್ಪೂರ್ತಿದಾಯಕವಾಗಿ ಹೇಳುತ್ತದೆ. ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಸಿನಿಮಾ ಹಿಂದೆ ಬೀಳಿಲ್ಲ. ವಾರಾಂತ್ಯದಲ್ಲಿ 6-7 ಕೋಟಿ ರೂ.ಗಳಿಸುವ ಸಾಧ್ಯತೆಯಿದೆ.
ಪ್ರೇಕ್ಷಕರಿಂದ ಹಾಗೂ ಸೆಲೆಬ್ರಿಟಿಗಳಿಂದ ʼ12th Failʼ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ʼಕಾಂತಾರʼ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಕೂಡ ವಿಧು ವಿನೋದ್ ಅವರ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
“ಈ ಚಿತ್ರವು ಒಂದು ಪ್ರಮುಖ ಪಾಠವನ್ನು ಎತ್ತಿ ಹಿಡಿಯುತ್ತದೆ. ನಾವು ಎಷ್ಟೇ ಆಳಕ್ಕೆ ಬಿದ್ದರೂ, ಜೀವನವನ್ನು ಪುನರಾರಂಭಿಸುವಾಗ ನಮಗೆ ವಿಭಿನ್ನ ಆಯಾಮವನ್ನು ನೀಡುತ್ತದೆ. ಸಿನಿಮಾದ ಕಥೆ ಹೇಳಿಕೆಯಿಂದ ನಾನು ನಿಜವಾಗಿಯೂ ಸ್ಫೂರ್ತಿ ಪಡೆದಿದ್ದೇನೆ” ಎಂದು ರಿಷಬ್ ಟ್ವೀಟ್ ಮಾಡಿದ್ದಾರೆ.
ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಸಿನಿಮಾ ತೆರೆಕಂಡಿದೆ. ವಿಕ್ರಾಂತ್ ಮಾಸ್ಸೆ, ಪಾಲಕ್ ಲಾಲ್ವಾನಿ, ಮೇಧಾ ಶಂಕರ್, ಸಂಜಯ್ ಬಿಷ್ಣೋಯ್, ಸುಕುಮಾರ್ ತುಡು ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
This film upholds an important lesson. No matter how deep we fall , restarting life gives us a different dimension. @VVCFilms I am truly inspired by this storytelling #12fail #restart #VikrantMassey @VikrantMassey @KRG_Studios @ZeeStudios_ pic.twitter.com/9PEtwPsSuO
— Rishab Shetty (@shetty_rishab) October 30, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.