Rain ಕರಾವಳಿಯ ವಿವಿಧೆಡೆ ಗುಡುಗು ಸಹಿತ ಮಳೆ

Team Udayavani, Oct 31, 2023, 12:25 AM IST

Rain ಕರಾವಳಿಯ ವಿವಿಧೆಡೆ ಗುಡುಗು ಸಹಿತ ಮಳೆ

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ನಂತರ ಗುಡುಗು ಸಹಿತ ಮಳೆಯಾಗಿದೆ.

ಕಡಬ, ನಿಂತಿಕಲ್ಲು, ಕೊಂಬಾರು, ಉಬರಡ್ಕ, ಸುಳ್ಯ, ಕುಂಬ್ರ, ಕೆಯ್ಯೂರು, ಮಾಡಾವು, ಬಡಕ್ಕೋಡಿ, ಕಡಿರುದ್ಯಾವರ ಸೇರಿದಂತೆ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ತಾಲೂಕುಗಳ ವಿವಿಧೆಡೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

ಉಳ್ಳಾಲ, ಬಂಟ್ವಾಳ, ಸುರತ್ಕಲ್‌, ಕಾರ್ಕಳ, ಉಡುಪಿ, ಕುಂದಾಪುರ ಭಾಗದಲ್ಲೂ ಮಳೆಯಾಗಿದ್ದು, ಮಂಗಳೂರು ನಗರ, ಆಸುಪಾಸಿನಲ್ಲೂ ರಾತ್ರಿ ವೇಳೆ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ.

ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 31.7 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 22.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಕರಾವಳಿಯ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೂಡುಬಿದಿರೆ: ಸಿಡಿಲಬ್ಬರದ ಮಳೆ
ಮೂಡುಬಿದಿರೆ: ಸೋಮವಾರ ರಾತ್ರಿ ಮೂಡುಬಿದಿರೆ ಪರಿಸರದಲ್ಲಿ ಗುಡುಗು ಸಿಡಿಲಬ್ಬರ ಸಹಿತ ಜಡಿಮಳೆ ಸುರಿಯಿತು. ಪೇಟೆಯಲ್ಲಿ, ಆಳ್ವಾಸ್‌, ಸ್ವರಾಜ್ಯ ಮೈದಾನ,ಬೋವಿಕೇರಿಗೆ ಸಾಗುವ ರಸ್ತೆ ಮೊದಲಾದೆಡೆ ಚರಂಡಿಗಳ ಒಳಗೆ ಮಳೆ ನೀರು ಹೋಗ ಲಾಗದಂತೆ ಕಾಮಗಾರಿ ನಡೆಸಿರುವ ಶಂಕೆ ಹುಟ್ಟುವಂತೆ ಮಳೆನೀರೆಲ್ಲ ಪ್ರವಾಹದೋಪಾಡಿ ರಸ್ತೆಯಲ್ಲಿಯೇ ಹರಿಯುವಂತಾಗಿದೆ. ರಸ್ತೆ ಬದಿಗಳೆಲ್ಲ ಕೊರೆದು ಹೋಗುವ ಸ್ಥಿತಿ ಇದೆ. ವಿದ್ಯುತ್‌ ಪೂರೈಕೆ ಆತಂಕಿತವಾಗಿದೆ.

ಶಾಲೆಗೆ ಸಿಡಿಲು ಬಡಿದು ಹಾನಿ
ಸಿದ್ದಾಪುರ: ನಂಚಾರು ಗ್ರಾಮದ ಹಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಸಂಜೆ ವೇಳೆ ಸಿಡಿದ ಗುಡುಗು ಮಿಂಚಿನ ಪರಿಣಾಮ ಶಾಲೆಯ ವಿದ್ಯುತ್‌ ಸಂಪರ್ಕ, ಉಪಕರಣಗಳು, ಗೋಡೆ, ಶೌಚಾಲಯದ ಕಟ್ಟಡಕ್ಕೆ ಹಾನಿ ಸಂಭವಿಸಿದೆ.

ಬೆಳ್ಳಾರೆ ಪರಿಸರದಲ್ಲಿ ಹಾನಿ
ಸುಳ್ಯ: ಬೆಳ್ಳಾರೆ ಪರಿಸರದಲ್ಲಿ ಸೋಮವಾರ ಸಂಜೆ ಗುಡುಗು, ಗಾಳಿ ಸಹಿತ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಅಲ್ಲಲ್ಲಿ ಹಾನಿ ಸಂಭವಿಸಿದೆ. ಬೆಳ್ಳಾರೆ ಭಾಗದಲ್ಲಿ ಗಾಳಿಗೆ ವಿದ್ಯುತ್‌ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್‌ ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಯಾ ಗಿದೆ. ಕೆಲವು ಮನೆಗಳ ವಿದ್ಯುತ್‌ ಮೀಟರ್‌ಗಳಿಗೂ ಹಾನಿಯಾಗಿದೆ. ಬೆಳ್ಳಾರೆ ಪರಿಸರದಲ್ಲಿ ರಾತ್ರಿ ವಿದ್ಯುತ್‌ ವ್ಯತ್ಯಯವಾಗಿತ್ತು. ರವಿವಾರ ಸಂಜೆ ಗಾಳಿ ಮಳೆಗೆ ಪೆರುವಾಜೆ ಭಾಗದಲ್ಲಿ ಹಲವೆಡೆ ಅಡಿಕೆ ಮರಗಳು, ವಿದ್ಯುತ್‌ ಕಂಬ ಗಳಿಗೆ ಹಾನಿಯಾಗಿದೆ. ಬೆಳ್ಳಾರೆಯ ಹಲವೆಡೆ ಚರಂಡಿ ಸಮಸ್ಯೆಯಿಂದ ಮಳೆ ನೀರು ಭಾರೀ ಪ್ರಮಾಣದಲ್ಲಿ ರಸ್ತೆಯಲ್ಲೇ ಹರಿಯಿತು.

ಟಾಪ್ ನ್ಯೂಸ್

“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್‌ ಗುಂಡೂರಾವ್‌

“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್‌ ಗುಂಡೂರಾವ್‌

BJP-flag

Lokasabha Election: ಬಿಜೆಪಿ ಆತ್ಮಾವಲೋಕನದಲ್ಲಿ ಆರೋಪ-ಪ್ರತ್ಯಾರೋಪ

1—-dsasd

Women’s ಟಿ20 ಪಂದ್ಯ; ದಕ್ಷಿಣ ಆಫ್ರಿಕಾಕ್ಕೆ  ಗೆಲುವು

Udupi ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ

Udupi ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ

Byarathi-suresh

 MUDAದಲ್ಲಿ ಯಾವ ಹಗರಣವೂ ನಡೆದಿಲ್ಲ: ಸಚಿವ ಭೈರತಿ ಸುರೇಶ್‌

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

DK-Shivakumar

H.D.Kumaraswamyಗೆ ನನ್ನ ನೆನಪಿಸಿಕೊಳ್ಳದಿದ್ದರೆ ತಲೆ ಓಡಲ್ಲ: ಡಿಕೆಶಿ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್‌ ಗುಂಡೂರಾವ್‌

“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್‌ ಗುಂಡೂರಾವ್‌

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

Dakshina Kannada ಡೆಂಗ್ಯೂ ಹೆಚ್ಚಳ; ಲಾರ್ವಾ ಸಮೀಕ್ಷೆಗೆ ಆದ್ಯತೆ

Tulu Cinema ಕರಾವಳಿಯಾದ್ಯಂತ “ಧರ್ಮದೈವ’ ತುಳು ಸಿನೆಮಾ ತೆರೆಗೆ

Tulu Cinema ಕರಾವಳಿಯಾದ್ಯಂತ “ಧರ್ಮದೈವ’ ತುಳು ಸಿನೆಮಾ ತೆರೆಗೆ

Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ

Pavoor ಉಳಿಯ ಅಕ್ರಮ ಮರಳುಗಾರಿಕೆ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ

ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

Mangaluru ಎಂ.ಟಿ.ಪಿ.ಕಿಟ್‌ ಅಕ್ರಮ ಮಾರಾಟ ವಿರುದ್ಧ ಆರೋಗ್ಯ ಇಲಾಖೆ ಎಚ್ಚರಿಕೆ

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್‌ ಗುಂಡೂರಾವ್‌

“Dengue ಪರೀಕ್ಷೆಗೆ ಹೆಚ್ಚು ಶುಲ್ಕ ಪಡೆದಲ್ಲಿ ಕ್ರಮ’: ಸಚಿವ ದಿನೇಶ್‌ ಗುಂಡೂರಾವ್‌

BJP-flag

Lokasabha Election: ಬಿಜೆಪಿ ಆತ್ಮಾವಲೋಕನದಲ್ಲಿ ಆರೋಪ-ಪ್ರತ್ಯಾರೋಪ

1—-dsasd

Women’s ಟಿ20 ಪಂದ್ಯ; ದಕ್ಷಿಣ ಆಫ್ರಿಕಾಕ್ಕೆ  ಗೆಲುವು

Udupi ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ

Udupi ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿ: ಜಿಲ್ಲಾಧಿಕಾರಿ

1-suresh-Raina

Jerseys; ನಂ.18, ನಂ.45 ಜೆರ್ಸಿಗಳನ್ನು ನಿವೃತ್ತಿಗೊಳಿಸಲು ರೈನಾ ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.