Kempegowda Layout: ಕೆಂಪೇಗೌಡ ಲೇಔಟ್ ಭೂ ಸ್ವಾಧೀನ ಕಗ್ಗಂಟು
Team Udayavani, Oct 31, 2023, 10:51 AM IST
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವ ಣೆಯ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಂಡು ಹಲವು ವರ್ಷಗಳೇ ಉರುಳಿದರೂ ಇಲ್ಲಿನ 193 ಎಕರೆ ಸರ್ಕಾರಿ ಭೂಮಿಯನ್ನು ಕಂದಾಯ ಇಲಾಖೆ ಯಿಂದ ಹಸ್ತಾಂತರಿಸಿಕೊಳ್ಳಲು ಬೆಂಗ ಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪರದಾಡುತ್ತಿದೆ!
ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಿಸಿರುವ ಬಿಡಿಎಗೆ ಇದೀಗ ಇಲ್ಲಿನ 193 ಎಕರೆ ಸರ್ಕಾರಿ ಜಮೀನು ಸ್ವಾಧೀನಪಡಿಸಿ ಕೊಳ್ಳುವುದೇ ದೊಡ್ಡ ಸವಾಲಾಗಿದೆ. 2014 ರಿಂದ 2023 ಆಗಸ್ಟ್‌ವೆರೆಗೆ ಹಲವು ಬಾರಿ ಯೋಜನೆಗೆ ಬೇಕಾಗಿ ರುವ ಸರ್ಕಾರಿ ಜಮೀನನ್ನು ಹಸ್ತಾಂತರಿ ಸುವಂತೆ ಕಂದಾಯ ಇಲಾಖೆಗೆ ಪತ್ರದ ಮೂಲಕ ಬಿಡಿಎ ವಿನಂತಿಸಿಕೊಂಡಿದೆ. ಆದರೆ, ಕಂದಾಯ ಇಲಾಖೆಯಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಇದರಿಂದ ಬಡಾವಣೆಯ ಭಾಗಗಳನ್ನು ಯೋಜನೆಯಂತೆ ನಿರ್ಮಿಸಲು ತೊಡಕಾಗಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಜಂಟಿ ಸರ್ವೆ ಮಾಡುವ ಬದಲು ಬಿಡಿಎ ಸರ್ವೆಯರ್‌ಗಳಿಗೆ ಸರ್ವೆ ಕಾರ್ಯವಹಿಸಿ ದಾಖಲಾತಿ ತಯಾರಿಸಲು ಅನುಮತಿ ಪಡೆಯುವ ಬಗ್ಗೆ ಚರ್ಚೆ ನಡೆದಿದೆ. ಸರ್ವೆ ಹಾಗೂ ನೋಂದಣಿ ಇಲಾಖೆಗೆ ಹಸ್ತಾಂತರಿಸಲು ಅನುಮೋದನೆ ಕೋರಿ ಪತ್ರ ಬರೆಯಲು ಚಿಂತಿಸಲಾಗಿದೆ.
ಬಿಡಿಎ ಅಧಿಕಾರಿಗಳು ಏನು ಹೇಳುತ್ತಾರೆ?: ಕೆಂಪೇಗೌಡ ಬಡಾವಣೆಯಲ್ಲಿ ಸರ್ಕಾರಿ ಭೂಮಿ ಎಷ್ಟು ಎಕರೆ ಇದೆ, ಎಲ್ಲೆಲ್ಲಿದೆ ಎಂಬಿತ್ಯಾದಿ ಅಂಶಗಳನ್ನು ತಿಳಿದುಕೊಳ್ಳಲು ಜಂಟಿ ಸರ್ವೆ ಮಾಡಬೇಕಾಗುತ್ತದೆ. ಬಿಡಿಎ ಸರ್ವೆಯರ್‌ಗಳ ಬಳಿ ಆ ದಾಖಲೆಗಳಿರುವುದಿಲ್ಲ. ಕಂದಾಯ ಅಧಿಕಾರಿಗಳ ಬಳಿ ಇದಕ್ಕೆ ಸಂಬಂಧಿಸಿದ ದಾಖಲೆಗ ಳಿರುತ್ತವೆ. ತಾಲೂಕು ಸರ್ವೇಯರ್ ಗ್ರಾಂಟ್ ಆಗಿರುವ ಭೂಮಿಗೆ ಸಂಬಂಧಿಸಿದ ಗುರುತು, ನೀಲನಕ್ಷೆ, ಸಹಿ ಮಾಡಿ ಬಿಡಿಎ ಭೂಸ್ವಾಧೀನ ವಿಭಾಗಕ್ಕೆ ನೀಡುತ್ತಾರೆ. ಅವುಗಳನ್ನು ಪರಿಶೀಲನೆ ನಡೆಸಿದ ಬಳಿಕ ನಾವು ನಮ್ಮ ಸುಪರ್ದಿಗೆ ಪಡೆಯುತ್ತೇವೆ.
ಕಾಮಗಾರಿ ನಡೆದಿದೆ: ಕಂದಾಯ ಇಲಾಖೆ ಹಾಗೂ ಬಿಡಿಎ ಎರಡೂ ರಾಜ್ಯ ಸರ್ಕಾರದ ಅಧೀನ ಇಲಾಖೆಗಳೇ ಆಗಿರುವುದರಿಂದ ಕೆಲವು ಬಡಾವ ಣೆ ಗಳಲ್ಲಿ ಅಧಿಕೃತವಾಗಿ ಭೂಮಿ ಸ್ವಾಧೀನಕ್ಕೆ ಪಡೆದು ಕೊಳ್ಳದಿದ್ದರೂ ಅಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ, ಜಂಟಿ ಸರ್ವೆ ಆದರೆ, ಮುಂದೆ ಯಾವುದೇ ವ್ಯಾಜ್ಯಗಳು ಬರುವುದಿಲ್ಲ. ಯಾರ ಜಾಗ ಎಲ್ಲಿದೆ? ಎಷ್ಟಿದೆ? ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಸ್ವಾಧೀನಪಡಿಸಿಕೊ ಳ್ಳ ಬೇಕಿರುವ 193 ಎಕರೆ ಹಳೆಯ ಗ್ರ್ಯಾಂಟ್ ಆಗಿರುವುದರಿಂದ ಹಸ್ತಾಂತರ ಪ್ರಕ್ರಿಯೆಗೆ ಹೆಚ್ಚಿನ ಸಮಯ ಹಿಡಿಯುತ್ತದೆ ಎಂದು ಬಿಡಿಎಯ ಭೂಸ್ವಾಧೀನ ವಿಭಾಗದ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.
154 ಎಕರೆ ಜಮೀನು ವಶಕ್ಕೆ ಪಡೆಯಲಿ:
ಸರ್ಕಾರದ 193 ಎಕರೆ ಪ್ರದೇಶವನ್ನು ನಿವೇಶನಾದಾರರ ಸಮ್ಮುಖದಲ್ಲಿ ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಸರ್ವೇ ವಿಭಾಗ ಹಾಗೂ ಬಿಡಿಎ ಒಪ್ಪಿಕೊಂಡಿರುವುದು ಬಡಾವಣೆ ನಿವಾಸಿಗಳ ಹಿತ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ಇದರ ಜೊತೆಗೆ ಬಿಡಿಎಯು 154 ಎಕರೆಯ ಸರ್ಕಾರಿ ಗ್ರ್ಯಾಂಟ್ ಜಮೀನನ್ನು ವಶಪಡಿಸಿಕೊಳ್ಳಬೇಕು. ಇದರಿಂದ ಒಟ್ಟಾರೆ 346 ಎಕರೆ ಭೂ ಸ್ವಾಧೀನಪಡಿಸಿಕೊಂಡಂತೆ ಆಗುತ್ತದೆ. ಕೆಂಪೇಗೌಡ ಬಡಾವಣೆಯ ಮೂಲ ಸೌಕರ್ಯಕ್ಕಾಗಿ 2,500ರಿಂದ 3,500 ಸಾವಿರ ಕೋಟಿ ರೂ. ಖರ್ಚು ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಬಡಾವಣೆಯಲ್ಲಿ ನಿವೇಶನ ಹೊಂದಿರುವವರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸರ್ಕಾರ ಒತ್ತು ನೀಡಬೇಕು ಎನ್ನುತ್ತಾರೆ ಬಡಾವಣೆ ಮುಕ್ತ ವೇದಿಕೆಯ ಅಧ್ಯಕ್ಷ ಶ್ರೀಧರ್ ನುಗ್ಗೆಹಳ್ಳಿ.
ಸ್ವಾಧೀನಪಡಿಸಿಕೊಳ್ಳದಿದ್ರೆ ತೊಡಕೇನು?:
193 ಎಕರೆ ಭೂಮಿ ಬಿಡಿಎ ಸ್ವಾಧೀನಪಡಿಸಿಕೊಳ್ಳದಿದ್ದರೆ ಕೆಂಪೇಗೌಡ ಬಡಾವಣೆಯಲ್ಲಿ ನೀರಿನ ಪೂರೈಕೆ, ಒಳಚರಂಡಿ ವ್ಯವಸ್ಥೆ, ರಸ್ತೆ ಸೌಕರ್ಯ ನಿರ್ಮಿಸಲು ಆಗುವುದಿಲ್ಲ, ಮುಖ್ಯರಸ್ತೆ, ಆಂತರಿಕ ರಸ್ತೆ ನಿರ್ಮಾಣಕ್ಕೆ ಜಾಗದ ವಿಚಾರದಲ್ಲಿ ಗೊಂದಲ ಉಂಟಾಗಲಿದೆ. ಇನ್ನಷ್ಟು ನಿವೇಶನ ಹಂಚಿಕೆ ವಿಳಂಬಗತಿಯಲ್ಲಿ ಸಾಗುತ್ತದೆ, ಬಡಾವಣೆಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ಸಾಧ್ಯವಾಗು ವುದಿಲ್ಲ. ಅರ್ಧಬರ್ಧ ಕಾಮಗಾರಿ ಯಿಂದ ಇಲ್ಲಿ ನಿವೇಶನ ಖರೀದಿಸಿದವರಿಗೂ ಕಿರಿ-ಕಿರಿ ಉಂಟಾಗಿದೆ. ಮತ್ತೂಂದೆಡೆ ಬಿಡಿಎ, ಕಂದಾಯ ಇಲಾಖೆ ಅಧಿಕಾರಿಗಳು ಆಗಾಗ ವರ್ಗಾವಣೆ ಆಗುತ್ತಿರುವುದರಿಂದ ಹೊಸದಾಗಿ ಬರುವ ಅಧಿಕಾರಿಗಳಿಗೆ ಬಡಾವಣೆ ಸಮಸ್ಯೆಗಳ ಬಗ್ಗೆ ಅರಿವು ಇರುವುದಿಲ್ಲ. ಈ ಸಮಸ್ಯೆಗೆ ಮುಕ್ತಿ ಸಿಗಬೇಕಿದ್ದರೆ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
-ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.