Ramanagara District: ರಾಮನಗರ-ಬೆಂ.ದಕ್ಷಿಣ ಯಾವುದು ಮೇಲು?


Team Udayavani, Oct 31, 2023, 4:13 PM IST

TDY-14

ರಾಮನಗರ: ಬೆಂಗಳೂರಿನ ಉಪನಾಮ ರಾಮನಗರ ಜಿಲ್ಲೆಗೆ ಸೇರಿದರೆ ಜಿಲ್ಲೆಯ ಅಭಿವೃದ್ಧಿಗೆ ವೇಗ ದೊರೆಯುತ್ತದಾ..? ಬೆಂಗಳೂರು ಬ್ರಾಂಡ್‌ ಕೇವಲ ರಾಜಕೀಯ ಲಾಭಕ್ಕಾ? ಇಲ್ಲವೇ ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ನಿಜಕ್ಕೂ ಲಾಭವಿದೆಯಾ ಎಂಬ ಚರ್ಚೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆ ಬೆನ್ನಲ್ಲೇ ಜಿಲ್ಲಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

2007ರಲ್ಲಿ ಬೆಂ.ಗ್ರಾಮಾಂತರ ಜಿಲ್ಲೆಯನ್ನು ವಿಭಜಿಸಿ ರಾಮನಗರ ಜಿಲ್ಲೆಯಾಗಿ ರಚನೆ ಮಾಡಲಾಯಿತು. ರಾಮನಗರವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಸ್ಥಳೀಯ ವಾಗಿ ಹೆಚ್ಚಿನ ಒತ್ತಡವಿಲ್ಲದಿದ್ದರೂ ಅಂದಿನ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ತಾವು ಪ್ರತಿನಿಧಿಸುತ್ತಿದ್ದ ರಾಮ ನಗರ ಕ್ಷೇತ್ರವನ್ನು ಜಿಲ್ಲಾ ಕೇಂದ್ರವಾಗಿಸಿ ನೂತನ ಜಿಲ್ಲೆ ಘೋಷಿಸಿದರು. ಅಂದಿ ನಿಂದಲೂ ನಮ್ಮ ಜಿಲ್ಲೆ ಬೆಂಗಳೂರಿನ ಹೆಸರಿನಿಂದಲೇ ಕರೆಸಿಕೊಳ್ಳ ಬೇಕು ಎಂದು ವಾದಿಸುತ್ತಲೇ ಇದ್ದ ಡಿ.ಕೆ.ಶಿವಕುಮಾರ್‌ ಇದೀಗ ತಮಗೆ ಸಿಕ್ಕಿರುವ ಅಧಿಕಾರ ಬಳಸಿ ಎಚ್‌ಡಿಕೆ ಸ್ಥಾಪಿಸಿದ ಜಿಲ್ಲೆ ಹೆಸರು ಬದಲಿಗೆ ಮುಂದಾಗಿದ್ದಾರೆ. ಇದು ರಾಜಕೀಯ, ಸಾಂಸ್ಕೃತಿಕ ಹಾಗೂ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹೆಸರು ಬದಲಾವಣೆ ಹೊಸದಲ್ಲ: ರಾಮನಗರಕ್ಕೆ ಹೆಸರು ಬದಲಾವಣೆ ಇತಿಹಾಸದ ಕಾಲದಿಂದ ನಡೆದಿದೆ ಎಂದು ಹೇಳಲಾಗುತ್ತದೆ. ಟಿಪ್ಪು ಆಳ್ವಿಕೆ ಕಾಲದಲ್ಲಿ ರಾಮನಗರವನ್ನು ಶಂಷರಾಬಾದ್‌ ಎಂದು ಕರೆಯಲಾಗುತ್ತಿತ್ತೆಂದು, ಬಳಿಕ ಈ ಭಾಗದಲ್ಲಿ ಸರ್‌ ಬ್ಯಾರಿಕ್ಲೋಸ್‌ ಎಂಬ ಇಂಗ್ಲಿಷ್‌ ಆಧಿಕಾರಿ ಆಳುತ್ತಿದ್ದ ಕಾರಣ ಈ ನಗರಕ್ಕೆ ಕ್ಲೋಸ್‌ಪೇಟೆ ಎಂದೂ ಕರೆಯಲಾಗುತಿತ್ತು. ಸ್ವಾತಂತ್ರ್ಯ ಬಳಿಕ ಕೆಂಗಲ್‌ ಹನುಮಂತಯ್ಯ ರಾಮನಗರ ಎಂಬ ಹೆಸರನ್ನು ನಾಮಕರಣ ಮಾಡಿದರು. ಇದಕ್ಕೆ ಮುಖ್ಯ ಕಾರಣ ಇಲ್ಲಿನ ರಾಮಗಿರಿ ಬೆಟ್ಟದಲ್ಲಿ ಶ್ರೀರಾಮಚಂದ್ರ ನೆಲೆಸಿದ್ದ ಎಂಬ ರಾಮಾಯಣದ ಪೌರಾಣಿಕ ಕಥೆ.

ಕಡಿಮೆ ಬಡವರು ಇರುವ ಜಿಲ್ಲೆ: ನೀತಿ ಆಯೋಗ ಬಿಡುಗಡೆ ಮಾಡಿರುವ ಬಹು ಆಯಾಮದ ಬಡತನ ಸಮೀಕ್ಷೆ ಪ್ರಕಾರ ರಾಮನಗರ ರಾಜ್ಯದಲ್ಲೇ ಅತಿ ಕಡಿಮೆ ಬಡವರನ್ನು ಹೊಂದಿದೆ. ಇಲ್ಲಿನ ಜನರ ತಲಾ ಆದಾಯ 2.23 ಲಕ್ಷ ಇದ್ದು, ಜಿಡಿಪಿಯಲ್ಲಿ 22ನೇ ಸ್ಥಾನ ಪಡೆದಿದೆ. ಇನ್ನು ಜಿಲ್ಲೆಯಲ್ಲಿ 24 ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಇದ್ದು ಬಿಡದಿ 1ನೇ ಹಂತ, 2ನೇ ಹಂತ, 2ನೇ ಹಂತದಲ್ಲಿ 1 ಮತ್ತು 2ನೇ ಸೆಕ್ಟರ್‌, ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 1 ಮತ್ತು 2ನೇ ಹಂತ ಸೇರಿ 5 ಕೈಗಾರಿಕಾ ಪ್ರದೇಶಗಳಿವೆ. ಕೆಐಎಡಿಬಿ 1067 ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕೆ ಸ್ವಾಧೀನಪಡಿಸಿ 803.35 ಎಕರೆ ಭೂಮಿ ಅಭಿವೃದ್ಧಿ ಪಡಿಸಿ 645 ಪ್ಲಾಟ್‌ ಹಂಚಿಕೆ ಮಾಡಿದೆ. ಜಿಲ್ಲೆಯಲ್ಲಿ 15026 ಮಂದಿಗೆ ಇಲ್ಲಿನ ಕೈಗಾರಿಕೆ ಉದ್ಯೋಗ ಸೃಷ್ಟಿ ಮಾಡಬಹುದಿದೆ.

ಹೆಸರು ಬದಲಾವಣೆಯ ಲಾಭ:

  • ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಇರುವ ಬ್ರಾಂಡ್‌ ಈ ಭಾಗಕ್ಕೂ ಸಿಗಲಿದೆ.
  • ಆಡಳಿತಾತ್ಮಕವಾಗಿ ರಾಮನಗರ ಜಿಲ್ಲಾಕೇಂದ್ರವಾಗಿರುತ್ತದೆ. ಸ್ಥಳೀಯರಿಗೆ ಯಾವುದೇ ಸಮಸ್ಯೆ ಆಗಲ್ಲ. ಬೆಂಗಳೂರು ಎಂಬ ಬ್ರ್ಯಾಂಡ್‌ಗೆ ಜಾಗತಿಕ ಮಟ್ಟದ ಖ್ಯಾತಿಯ ಲಾಭವನ್ನು ರಾಮನಗರವೂ ಪಡೆಯಬಹುದಾಗಿದೆ.
  • ಬೆಂಗಳೂರು ಬ್ರ್ಯಾಂಡ್‌ನಿಂದ ಹೂಡಿಕೆ ಕೆಲ ವಿದೇಶಿ ಬಂಡವಾಳಗಾರರು ಹೂಡಿಕೆ ಮಾಡಲು ಉತ್ಸಾಹ ತೋರುತ್ತಾರೆ.
  • ಪ್ರಸ್ತುತ ಬೆಂಗಳೂರು ನಗರದ ಸುತ್ತಮುತ್ತ ಕೇಂದ್ರೀಕರಿಸಿರುವ ಐಟಿ-ಬಿಟಿ, ಸೇವಾ ಕ್ಷೇತ್ರ, ರಿಯಲ್‌ ಎಸ್ಟೇಟ್‌ ಕ್ಷೇತ್ರ ಈ ಭಾಗದತ್ತ ಗಮನಹರಿಸುತ್ತವೆ.
  • ಹೊಸ ಉದ್ಯಮಗಳಿಂದ ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಸ್ಥಳೀಯರು ಸಣ್ಣಪುಟ್ಟ ವ್ಯಾಪಾರ, ಪೂರಕ ಉದ್ಯಮ ನಡೆಸಲು ಸಹಕಾರಿ.
  • ಬೆಂಗಳೂರಿನ ಮೆಟ್ರೋ, ಸಬ್‌ ಅರ್ಬನ್‌, ಹೈಡೆನ್ಸಿಟಿ ಕಾರಿಡಾರ್‌ ವಿಸ್ತರಣೆಗೆ ಅವಕಾಶ. ಬೆಂ.ದಕ್ಷಿಣ ಜಿಲ್ಲೆ ತಾಲೂಕುಗಳನ್ನು ಬೆಂಗಳೂರು ಉಪನಗರಗಳಾಗಿ ಅಭಿವೃದ್ಧಿಪಡಿಸಲು ಅವಕಾಶ.
  • ಬೆಂ.ದಕ್ಷಿಣ ಎಂಬ ಹೆಸರಿನಿಂದಾಗಿ ಕೈಗಾರಿಕೆ, ಉದ್ಯಮ ಇತ್ತ ಗಮನಹರಿಸಲಿದ್ದು ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಆಗುತ್ತದೆ.
  • ಬೆಂಗಳೂರು ಉಪನಾಮದಿಂದಾಗಿ ಇಲ್ಲಿನ ಭೂಮಿಗಳ ಬೆಲೆ ಹೆಚ್ಚಳವಾಗುತ್ತದೆ. ರೈತರಿಗೆ ಒಳ್ಳೆಯ ಲಾಭ ದೊರೆಯುತ್ತದೆ.

ಹೆಸರು ಬದಲಿನಿಂದಾಗುವ ಸಮಸ್ಯೆ ಏನು? :

  • ರಾಮನಗರಕ್ಕೆ ತನ್ನದೇ ಆದ ಐತಿಹಾಸಿಕ, ಪೌರಾಣಿಕ ಹಿನ್ನೆಲೆ ಇದೆ. ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಯಿಸುವುದರಿಂದ ರಾಮನಗರದ ಆಸ್ಮಿತೆಗೆ ಧಕ್ಕೆ ಆಗಲಿದೆ.
  • ರಾಮನಗರ ಕೃಷಿ ಪ್ರಧಾನ ಜಿಲ್ಲೆ. ರೇಷ್ಮೆ, ಮಾವು, ಹೈನುಗಾರಿಕೆ ಇಲ್ಲಿನ ಪ್ರಮುಖ ಕೃಷಿ. ಬೆಂಗಳೂರು ಎಂದು ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಪ್ರಾರಂಭವಾದರೆ ಕೃಷಿಗೆ ದಕ್ಕೆಯಾಗುತ್ತದೆ.
  • ಬೆಂಗಳೂರು ಉಪನಾಮದಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಬೆಳೆದು ಸ್ಥಳೀಯ ರೈತರು ಭೂಮಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ರೈತರು ಭೂಮಿ ಮತ್ತು ಬದುಕು ಎರಡನ್ನೂ ಕಳೆದುಕೊಳ್ಳುತ್ತಾರೆ.
  • ಬೆಂಗಳೂರು ನಗರದ ಪರಭಾಷಿಗರ ಹಾವಳಿ, ಕಾಸ್ಮೋಪಾಲಿಟನ್‌ ಸಂಸ್ಕೃತಿ ಇಲ್ಲಿಯೂ ಬೆಳೆದು ಜಿಲ್ಲೆಯ ಸಾಂಸ್ಕೃತಿಕ ವಾತಾವರಣಕ್ಕೆ ಹಾನಿಯಾಗುತ್ತದೆ.
  • ಈಗಾಗಲೇ ರಾಮನಗರ ಜಿಲ್ಲೆ ಸ್ಥಾಪನೆ ಸಮಯದಲ್ಲಿ ಹೆಸರಿನ ಬಗ್ಗೆ ಆಡಳಿತಾತ್ಮಕವಾಗಿ, ತಾಂತ್ರಿಕವಾಗಿ ಪರಿಶೀಲನೆ ನಡೆಸಲಾಗಿದ್ದು ಹೆಸರು ಬದಲಾವಣೆ ಸರಿಯಲ್ಲ.
  • ಜಿಲ್ಲೆಯ ಹೆಸರು ಬದಲಿಂದ ಎಲ್ಲಾ ದಾಖಲೆ ತಿದ್ದಬೇಕಿದ್ದು, ಇದು ವಿನಾಕಾರಣ ಹಲವು ಗೊಂದಲ, ಆಡಳಿತಾತ್ಮಕವಾಗಿ ಹೆಚ್ಚು ವೆಚ್ಚಕ್ಕೆ ದಾರಿ ಮಾಡಿಕೊಡಲಿದೆ.
  • ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿಯಾಗುತ್ತದೆ ಎಂಬುದು ಕೇವಲ ಭ್ರಮೆ. ಮುಂಬೈ ದೊಡ್ಡನಗರವಾಗಿದ್ದರೂ ಅದರ ಪಕ್ಕದ ಪುಣೆಯನ್ನು ಅದೇ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗಿದೆ. ಅದೇ ರೀತಿ ಹೆಸರು ಬದಲಾವಣೆ ಮಾಡದೆಯೂ ಅಭಿವೃದ್ಧಿ ಮಾಡಬಹುದು.

ರಾಜ್ಯದ 29ನೇ ಜಿಲ್ಲೆಯಾಗಿ 2007ರಲ್ಲಿ ಘೋಷಣೆ ಆಗಿದ್ದ ರಾಮನಗರ ಜಿಲ್ಲೆ :

ರಾಜ್ಯದ 29ನೇ ಜಿಲ್ಲೆಯಾಗಿ 2007ರಲ್ಲಿ ಘೋಷಣೆಯಾದ ರಾಮನಗರ ಜಿಲ್ಲೆ 4 ಮಂದಿ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದೆ. 3576 ಚ.ಕಿ.ಮೀ. ವಿಸ್ತೀರ್ಣವಿರುವ ಈ ಜಿಲ್ಲೆ 5 ತಾಲೂಕು 823 ಕಂದಾಯ ಗ್ರಾಮ, 1400ಕ್ಕೂ ಹೆಚ್ಚು ಹ್ಯಾಮ್ಲೆಟ್‌ ಗ್ರಾಮ ಹೊಂದಿದ್ದು, ಪ್ರತಿ ಕಿ.ಮೀ.ಗೆ 288 ಜನಸಾಂದ್ರತೆ ಹೊಂದಿದೆ.1082735 ಮಂದಿ ಜನಸಂಖ್ಯೆ 2011ರ ಜನಗಣತಿ ಪ್ರಕಾರ ಈ ಜಿಲ್ಲೆ ಶೇ.69.2 ಸಾಕ್ಷರತಾ ಪ್ರಮಾಣ ಹೊಂದಿದೆ.

-ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.