Rajyotsava Award 2023 ಶತಾಯುಷಿ ಹುಸೇನಾಬಿ ಸಿದ್ದಿಗೆ ರಾಜ್ಯೋತ್ಸವದ ಗರಿ
Team Udayavani, Oct 31, 2023, 7:51 PM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಗ್ರಾಮದ ಹುಸೇನಾಬಿಗೆ ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ.
ಹುಸೇನಾಬಿ ಬುಡೇನಸಾಬ್ ಸಿದ್ದಿ ಅವರಿಗೆ ಈಗ 103 ವರ್ಷಗಳಾಗಿವೆ. ಅತ್ಯಂತ ಕ್ರಿಯಾಶೀಲವಾಗಿರುವ ಈ ಕಲಾವಿದೆಗೆ ತಡವಾಗಿಯಾದರೂ ರಾಜ್ಯೋತ್ಸವ ಪ್ರಶಸ್ತಿ ಹುಡುಕಿ ಬಂದಿದೆ. ಇವರ ಶ್ರಮಕ್ಕೆ ಪ್ರತಿಫಲ ದಕ್ಕಿದೆ. ಸಿದ್ದಿ ಮುಸ್ಲಿಂ ಮದುವೆಗಳಲ್ಲಿ ಹಾಡುವ ಸಿದ್ದಿ ಜಾನಪದ ಹಾಡು ಸಿದ್ದನಾಸ ಹಾಡುವಲ್ಲಿ ಈ ಕಲಾವಿದೆ ಅಜ್ಜಿ ಹೆಸರು ಮಾಡಿದ್ದರು.
ನೂರಾರು ಮದುವೆಗಳಲ್ಲಿ, ಸಭೆ ಸಮಾರಂಭಗಳಲ್ಲಿ ಸಿದ್ದಿನಾಸ ಹಾಡಿದ್ದಾರೆ. ಸಿದ್ದಿಗಳ ಜಾನಪದ ಕಲೆಯನ್ನು ಉಳಿಸಿದ ಕೀರ್ತಿ ಅವರದ್ದು. ಹಾಗೆ ಸಿದ್ದಿಗಳ ಪ್ರಸಿದ್ಧ , ಜನಪ್ರಿಯ ಡಾಮಾಮಿ ಜಾನಪದ ನೃತ್ಯ ಸಹ ಇವರು ಯೌವ್ವನದ ಕಾಲದಲ್ಲಿ ಮಾಡಿದವರು. ಆ ಕಲೆಯು ತನ್ನ ನಂತರ ಉಳಿಯಬೇಕೆಂದು ಮಕ್ಕಳಿಗೆ ಡಮಾಮಿ ನೃತ್ಯ ಕಲಿಸುವ ಕಾಯಕವನ್ನು ನಿರಂತರ ಮಾಡಿದವರು. ಇದನ್ನು ಗುರುತಿಸಿ ರಾಜ್ಯ ಸರಕಾರ ಹುಸೇನಾಬಿ ಬುಡೇನ್ ಸಾಬ್ ಸಿದ್ದಿಗೆ ರಾಜ್ಯೋತ್ಸವ ಘೋಷಿಸಿದೆ. ಅವರು ಈ ಪ್ರಶಸ್ತಿ ಬಂದಿರುವುದಕ್ಕೆ ಉದಯವಾಣಿ ಜೊತೆ ಮಾತನಾಡಿ, ” ಅನೇಕ ಸಂಘ ಸಂಸ್ಥೆಗಳು ನನಗೆ ಗೌರವಿಸಿ ಸನ್ಮಾನಿಸಿವೆ. ಆದರೆ ರಾಜ್ಯದ ಸಿದ್ದರಾಮಯ್ಯ ಸರ್ಕಾರ ನನ್ನ ಗುರುತಿಸಿ, ಈ ಇಳಿವಯಸ್ಸಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದೆ. ಇದು ನನಗೆ ಭಾರೀ ಸಂತೋಷ ತಂದಿದೆ ” ಎಂದರು.
ಸಿದ್ದಿ ಸಮುದಾಯ ಮತ್ತು ಜಿಲ್ಲೆಯ ಕಲಾವಿದರಲ್ಲಿ ಹುಸೇನಾಬಿ ಅವರಿಗೆ ಸಂದ ಪ್ರಶಸ್ತಿಗೆ ಅಭಿನಂದನೆಗಳ ಸುರಿಮಳೆಯಾಗಿದೆ. ಹಳ್ಳಿಯ ಮೂಲೆಯಲ್ಲಿದ್ದು, ಪ್ರಶಸ್ತಿಗೆ ಲಾಬಿ ಮಾಡದ ವಯೋವೃದ್ಧರನ್ನು ಸರ್ಕಾರ ಗುರುತಿಸಿದೆ ಎಂಬ ಮಾತು ಕೇಳಿಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.